ಸುಕೇಶ್ ಕೋಣಂದೂರು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ
– ಕನ್ನಡಿಗರ ನೆಚ್ಚಿನ ಜೀ ಕನ್ನಡ ನ್ಯೂಸ್ ವಾಹಿನಿಯ ಯುವರತ್ನ ಅವಾರ್ಡ್ಸ್ 2025 ಪ್ರಶಸ್ತಿ
– ಸಮಾಜ ಸೇವೆ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ಸಂದ ಗೌರವ
– ಯುವ ಉದ್ಯಮಿ ಸಾಧನೆಗೆ ಸ್ನೇಹಿತರು, ಪ್ರಮುಖರ ಶುಭಾಶಯ
NAMMUR EXPRESS NEWS
ಬೆಂಗಳೂರು: ಕನ್ನಡಿಗರ ನೆಚ್ಚಿನ ಜೀ ಕನ್ನಡ ನ್ಯೂಸ್ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳ ಯುವ ಸಾಧಕರನ್ನು ಗುರುತಿಸಿ ಯುವರತ್ನ ಅವಾರ್ಡ್ಸ್ 2025 ಪ್ರದಾನ ಮಾಡಿದೆ. ಬುಧವಾರ ಸಂಜೆ ಬೆಂಗಳೂರಿನ ಪ್ರತಿಷ್ಠಿತ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಾಡಿನ 50 ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಮಲೆನಾಡ ಯುವ ಉದ್ಯಮಿ, ಸಮಾಜ ಸೇವಕರು ಆಗಿ ಗುರುತಿಸಿಕೊಂಡಿರುವ ಸುಕೇಶ್ ಕೋಣಂದೂರು ಅವರಿಗೆ ಯುವ ರತ್ನ ಅವಾರ್ಡ್ಸ್ -2025 ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಕೇಶ್ ಕಳೆದ 1 ದಶಕದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಲ್ಲಿ ಯುವ ಉದ್ಯಮಿ ಆಗಿದ್ದು, ಮಲೆನಾಡಿಗೂ ವಿಶೇಷ ಕೊಡುಗೆ ನೀಡಿದ್ದಾರೆ.
ಉದ್ಯಮ, ಕಲೆ, ಕ್ರೀಡೆ, ಆರೋಗ್ಯ, ಕೃಷಿ, ಸಮಾಜ ಸೇವೆ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಗೌರವಿಸಿ ಅಭಿನಂದಿಸಲಾಯಿತು. ಈ ವೇಳೆ ಸುಕೇಶ್ ಅವರ ಸಾಧನೆಗೆ ಪ್ರಶಂಸೆ ವ್ಯಕ್ತವಾಯಿತು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಘನ ಉಪಸ್ಥಿತಿ ವಹಿಸಿ ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿ ಅನೇಕ ಗಣ್ಯರು ಹಾಜರಿದ್ದರು.
ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಕೂಡ ಕಾರ್ಯಕ್ರಮಕ್ಕೆ ಬಂದು ತುಂಬಾ ಖುಷಿ ಪಟ್ಟರು.
ಹಿರಿಯ ನಟಿ ಸುಧಾರಾಣಿ, ನಟರಾದ ಅಜಯ್ ರಾವ್, ಯುವ ರಾಜ್‌ಕುಮಾರ್, ಚಿಕ್ಕಣ್ಣ ಉಪಸ್ಥಿತರಿದ್ದು, ಸಾಧಕರ ಮುಕುಟಕ್ಕೆ ಗರಿ ಮೂಡಿಸಿ ಅಭಿನಂದಿಸಿದರು. ಜೀ ಕನ್ನಡ ನ್ಯೂಸ್ ಸಂಪಾದಕಾರ ರವಿ.ಎಸ್ ಅವರು ಸಮಾರೋಪ ಮಾತನಾಡಿದರು.
ಸುಕೇಶ್ ಅವರಿಗೆ ಶುಭಾಶಯಗಳು
ಸುಕೇಶ್ ಅವರು ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದು ಮಲೆನಾಡಿಗೆ ಹೆಮ್ಮೆ ವಿಷಯ. ಅವರ ಸಾಧನೆಗೆ ಸ್ನೇಹಿತರು, ಪ್ರಮುಖರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಹಕಾರ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ, ಪ್ರಮುಖರಾದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸಚ್ಚಿoದ್ರ ಹೆಗಡೆ, ಯುವ ನಾಯಕರಾದ ರಾಘವೇಂದ್ರ ಶೆಟ್ಟಿ ಸೇರಿ ಅನೇಕರು ಶುಭಾಶಯ ಸಲ್ಲಿಸಿದ್ದಾರೆ.
