Categories
ಬೆಂಗಳೂರು

ನಂದೀಶ್ ದೋರ್ಗಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ

ನಂದೀಶ್ ದೋರ್ಗಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ 
– ಜೆಪಿನಗರ ಕಲ್ಬರಲ್ ಅಸೋಸಿಯೇಷನ್ ಕಾರ್ಯದರ್ಶಿಗಳಾಗಿ ಅಧಿಕಾರ ಸ್ವೀಕಾರ: ಮಲೆನಾಡು ಸ್ನೇಹಿತರಿಂದ ಆಯೋಜನೆ
– ಇಂದು ಸಂಜೆ ಮಲೆನಾಡು ಮೂಲದ ರಾಜಧಾನಿ ಸ್ನೇಹಿತರ ಅಭಿನಂದನಾ ಕಾರ್ಯಕ್ರಮ

NAMMUR EXPRESS NEWS 
ಬೆಂಗಳೂರು: ಕೊಪ್ಪ ತಾಲೂಕಿನ ದೋರ್ಗಲ್ ಮೂಲದ ನಂದೀಶ್ ದೋರ್ಗಲ್ ಅವರು ಪ್ರತಿಷ್ಠಿತ ಜೆಪಿನಗರ ಕಲ್ಬರಲ್ ಅಸೋಸಿಯೇಷನ್ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಈ ಶುಭ ಸಂದರ್ಭದಲ್ಲಿ ಮಲೆನಾಡು ಮೂಲದ ಒಂದಷ್ಟು ಉದ್ಯಮಿಗಳು, ಸ್ನೇಹಿತರು ಬೆಂಗಳೂರಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಜು. 10ರ ಗುರುವಾರ ಸಂಜೆ 7 ಗಂಟೆಗೆ ಕನಕಪುರ ರಸ್ತೆಯಲ್ಲಿರುವ ದೊಡ್ಡ ಕಲ್ಲಸಂದ್ರ ಮೆಟ್ರೋ ನಿಲ್ದಾಣ ಸಮೀಪದ ಗುಬ್ಬಲಾಳ ಗೇಟ್ ಅಲ್ಲಿರುವ ದಿ ಸಿಂಧೂರ ಗಾರ್ಡೇನಿಯಾದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮಲೆನಾಡು ಮೂಲದ ಬೆಂಗಳೂರು ಉದ್ಯಮಿಗಳು, ಸ್ನೇಹಿತರು ಆದ ಗಿರೀಶ್ ಮೂರ್ತಿ, ಕೆ. ಎಲ್. ಪ್ರಸಾದ್, ವೆಂಕಟೇಶ್( ವೆಂಕಿ ), ಸತ್ಯಾನಂದ, ದಿನೇಶ್ ಉಡುಪ, ದಿನೇಶ್ ಹೆಗ್ಡೆ, ಶ್ರೀಧರ್ ಕುಮಾರ್ ಶೆಟ್ಟಿ ಸೇರಿ ಅನೇಕರು ಆಯೋಜನೆ ಮಾಡಿದ್ದಾರೆ. ಭೋಜನ, ಸಂಗೀತ ಕಾರ್ಯಕ್ರಮ ಇರಲಿದೆ.
ನಂದೀಶ್ ಅವರ ಈ ಸಾಧನೆ ಗುರುತಿಸಿ ಗೌರವಿಸುವ ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಲಾಗಿದೆ.

ನೀವೂ ಬನ್ನಿ ಮಲೆನಾಡ ಸ್ನೇಹಿತರನ್ನು ಕರೆ ತನ್ನಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.