ತೀರ್ಥಹಳ್ಳಿಯಲ್ಲಿ ಮರಾಠಿ ಸಂಘದ ಕಾರ್ಯಕ್ರಮ: ಸ್ವಾಗತ
– ಮರಾಠಿ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ವಿತರಣೆ
– ಪ್ರತಿಭಾ ಪುರಸ್ಕಾರ ಮತ್ತು ಗೌರವಾರ್ಪಣೆ ಸಮಾರಂಭ
– ಮರಾಠಿ ಸಮಾಜ ಸೇವಾ ಸಂಘದ ಮಾದರಿ ಹೆಜ್ಜೆ
NAMMUR EXPRESS NEWS
ತೀರ್ಥಹಳ್ಳಿ: ಜನವರಿ 19 ರಂದು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ತೀರ್ಥಹಳ್ಳಿ ಮರಾಠಿ ಸಮಾಜ ಸೇವಾ ಸಂಘ (ರಿ.) ಇದರ ಆಶ್ರಯದಲ್ಲಿ ತಾಲ್ಲೂಕಿನ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ವಿತರಣೆ, 10 ರಿಂದ ಉನ್ನತ ಶಿಕ್ಷಣದವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 9.30 ಕ್ಕೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ವ್ರತ, 11 ಗಂಟೆಗೆ ಮರಾಠಿ ಸಮಾಜದ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀರ್ಥಹಳ್ಳಿ ಮರಾಠಿ ಸಮಾಜ ಸೇವಾ ಸಂಘ (ರಿ.)ನ ಅಧ್ಯಕ್ಷರಾದ ಬಿ ಗಣಪತಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ, ಲಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ, ಅಧ್ಯಕ್ಷರಾದ ಶ್ರೀಮತಿ ಶೋಭಾವತಿ ಎಂ ಟಿ, ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಸ್. ವಿಶ್ವನಾಥ ನಾಯ್ಕ್ , ಉಡುಪಿ ಜಿಲ್ಲೆಯ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಉಮೇಶ್. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೂಡುಬಿದಿರೆಯಲ್ಲಿ ಜರುಗಿದ ಕರಾವಳಿ ಮರಾಠಿ ಸಮಾವೇಶದ ಯಶಸ್ವಿಗೆ ಅವಿರತವಾಗಿ ಶ್ರಮಿಸಿದ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರಾವಳಿ ಮರಾಠಿ ಸಮಾವೇಶ 2024ರ ಅಧ್ಯಕ್ಷರಾದ ಹೆಚ್.ರಾಜೇಶ್ ಪ್ರಸಾದ್ , ನಿವೃತ್ತ ಅಪಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕರಾವಳಿ ಮರಾಠಿ ಸಮಾವೇಶ 2024ರ ಗೌರವಾಧ್ಯಕ್ಷರಾದ ಡಾ. ಕೆ ಸುಂರ್ದ ನಾಯ್ಕ್ IFS, ಅಬಕಾರಿ ಇಲಾಖೆಯ ಜಂಟಿ ಆಯುಕ್ತರು ಹಾಗೂ ಕರಾವಳಿ ಮರಾಠಿ ಸಮಾವೇಶ 2024 ಸಂಚಾಲಕರಾದ ಶ್ರೀ ಬಾಲಕೃಷ್ಣ ಸಿ. ಹೆಚ್, ಕರಾವಳಿ ಮರಾಠಿ ಸಮಾವೇಶ 2024ರ ಕಾರ್ಯಾಧ್ಯಕ್ಷರಾದ ರಾಮಚಂದ್ರ ಕಾಂಬರೆ, ಕರಾವಳಿ ಮರಾಠಿ ಸಮಾವೇಶ 2024ರ ಸಹ ಸಂಚಾಲಕರಾದ ಪ್ರಕಾಶ್ ನಾಯ್ಕ್ , ಕರಾವಳಿ ಮರಾಠಿ ಸಮಾವೇಶ 2024ರ ಪ್ರಧಾನ ಕಾರ್ಯದರ್ಶಿ, ಶಂಕರ್ ನಾಯ್ಕ್ ಕರಾವಳಿ ಮರಾಠಿ ಸಮಾವೇಶ 2024ರ ಪ್ರಧಾನ ಕೋಶಾಧಿಕಾರಿ , ನರಸಿಂಹ ನಾಯ್ಕ್ ಇವರನ್ನು ಹಾಗೂ ತೀರ್ಥಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ನಿಮಿತ ಬ್ಯಾಂಕ್ ಮ್ಯಾನೇಜರ್ ರಮೇಶ್ ಎ. ಇವರನ್ನು ಸಂಘದ ವತಿಯಿಂದ ಅಭಿನಂದಿಸಲಾಗುವುದು. ಸರ್ವರಿಗೂ ಕೂಡ ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ. ತಾಲೂಕಿನ ಸಮಸ್ತ ಮರಾಠಿ ಜನಾಂಗದವರಿಗೆ ಈ ಮೂಲಕ ಆಹ್ವಾನಿಸಲಾಗಿದೆ.
