ತೀರ್ಥಹಳ್ಳಿಯಲ್ಲಿ ಹೊಸ ಪ್ರಯೋಗ ಜ.26ರಂದು ‘ಸ್ಟ್ಯಾಂಡಪ್ ಕಾಮಿಡಿ’!
– ರಾಘವೇಂದ್ರ ಆಚಾರ್ಯ-ಸಂಜೀವ್ ಕುಮಾರ್ ಸ್ಟ್ಯಾಂಡಪ್ ಕಾಮಿಡಿ
– ಪ್ರಸಿದ್ಧ ನೃತ್ಯ ತರಬೇತಿ ಸಂಸ್ಥೆ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಆಯೋಜನೆ
NAMMUR EXPRESS NEWS
ತೀರ್ಥಹಳ್ಳಿ: ಪ್ರಸಿದ್ಧ ನೃತ್ಯ ತರಬೇತಿ ಸಂಸ್ಥೆ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಜನವರಿ 26ರ ಭಾನುವಾರ ಸಂಜೆ 5-30 ರಿಂದ 9-30 ಗಂಟೆಯವರೆಗೆ ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ‘ಸ್ಟ್ಯಾಂಡಪ್ ಕಾಮಿಡಿ’ ಕಾರ್ಯಕ್ರಮ ಆಯೋಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ‘ಸ್ಟ್ಯಾಂಡಪ್ ಕಾಮಿಡಿ’ ಜನಪ್ರಿಯವಾಗುತ್ತಿದ್ದು ತೀರ್ಥಹಳ್ಳಿಯಲ್ಲಿ ಇದು ಮೊದಲನೇ ಪ್ರಯೋಗವಾಗಿದೆ. ರಾಜ್ಯದ ವಿವಿಧೆಡೆ ಕಾರ್ಯಕ್ರಮ ನೀಡಿ ಯಶಸ್ವಿಯಾಗಿರುವ ರಾಘವೇಂದ್ರ ಆಚಾರ್ಯ-ಸಂಜೀವ್ ಕುಮಾರ್ ಸ್ಟ್ಯಾಂಡಪ್ ಕಾಮಿಡಿ ಪ್ರಸ್ತುತಪಡಿಸಲಿದ್ದಾರೆ. ಇದರೊಂದಿಗೆ ಕೇರಳದ ಪ್ರಸಿದ್ಧ ABCD ಇವರಿಂದ ಯುನಿಕ್ ಬ್ಯಾಂಡ್ ಶೋ ನಡೆಯಲಿದೆ. 100 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಈ ಕಾರ್ಯಕ್ರಮವು ಡಿ. ಪಿ.ಸಿ. ಮತ್ತು ಎಸ್.ಸಿ.ಎಸ್ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಮೂಡಿಬರುತ್ತಿದ್ದು, ಇದೇ ಜನವರಿ 26 ರಂದ ಸಮಯ 5:30 ರಿಂದ 9:30 ರವರೆಗೆ ನಿಮ್ಮೆಲ್ಲರ ನಿರೀಕ್ಷೆಯಲ್ಲಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ.
ನಿಗದಿತ ಕೂರುವ ವ್ಯವಸ್ಥೆ ಇರುವ ಕಾರಣ ಮುಂಚಿತವಾಗಿ ಟಿಕೆಟ್ ಖರೀದಿಸಲು ಈ ಸಂಖ್ಯೆಯನ್ನು ಸಂಪರ್ಕಿಸಿ: 9380766926
