ಈಡಿಗ ಸಂಘಕ್ಕೆ ಮತ್ತೆ ರಾಮಚಂದ್ರ ಸಾರಥ್ಯ.!
– ಉಪಾಧ್ಯಕ್ಷರಾಗಿ ವಿಕ್ರಮ್ ಕೆ.ಎಸ್, ವಿನಯ್ ಕಣಗಲು ಆಯ್ಕೆ, ಗೌರವಾಧ್ಯಕ್ಷರಾಗಿ ಮಹೇಶ್ ನಾಯ್ಕ್
– ಪ್ರಧಾನ ಕಾರ್ಯದರ್ಶಿಯಾಗಿ ಚಿಪ್ಪಿನಕೊಡಿಗೆ ವೆಂಕಟೇಶ್ ಆಯ್ಕೆ
– ಖಜಾಂಚಿಯಾಗಿ ಹೊದಲ ಶಿವು, ಸಹ ಕಾರ್ಯದರ್ಶಿಯಾಗಿ ಪ್ರದೀಪ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಈಡಿಗ ಸಂಘದ ಅಧ್ಯಕ್ಷರಾಗಿ ಮತ್ತೆ ಮಟ್ಟಿನಮನೆ ರಾಮಚಂದ್ರ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಕ್ರಮ್ ಕಬಸೆ ಹಾಗೂ ವಿನಯ್ ಕಣಗಲು ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಮಹೇಶ್ ನಾಯ್ಕ್ ಅವರು ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಹೊದಲ ಶಿವು, ಸಹ ಕಾರ್ಯದರ್ಶಿಯಾಗಿ ಕೂರಣಕಟ್ಟೆ ಪ್ರದೀಪ್, ಪ್ರಧಾನ ಕಾರ್ಯದರ್ಶಿಯಾಗಿ ಚಿಪ್ಪಿನಕೊಡಿಗೆ ವೆಂಕಟೇಶ್ ಆಯ್ಕೆಯಾಗಿದ್ದಾರೆ. ಗುರುವಾರ ತೀರ್ಥಹಳ್ಳಿಯ ಕೋಳಿಕಾಲು ಗುಡ್ಡದಲ್ಲಿರುವ ಈಡಿಗ ಸಂಘದ ಸಮುದಾಯ ಭವನದಲ್ಲಿ ನಡೆದಂತಹ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಆಡಳಿತ ಮಂಡಳಿಯ 21 ಸದಸ್ಯರು ಹಾಜರಿದ್ದರು. ಇತ್ತೀಚೆಗಷ್ಟೇ ಈಡಿಗ ಸಂಘದ ಚುನಾವಣೆ ನಡೆದಿದ್ದು,21 ಮಂದಿ ಆಯ್ಕೆ ನಡೆದಿತ್ತು.