ಖ್ಯಾತ ಗುತ್ತಿಗೆದಾರ ಜಿ.ಪಿ. ಸತ್ಯನಾರಾಯಣ ಇನ್ನಿಲ್ಲ
– ಅನಾರೋಗ್ಯದಿಂದ ವಿಧಿವಶ: ಬೆಳಗ್ಗೆ 11ಕ್ಕೆ ಅಂತ್ಯಕ್ರಿಯೆ
ಭಾವಪೂರ್ಣ ಶ್ರದ್ಧಾಂಜಲಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಖ್ಯಾತ ಗುತ್ತಿಗೆದಾರರಾಗಿದ್ದ ಜಿ. ಪಿ. ಸತ್ಯನಾರಾಯಣ ಬಸವಾನಿ ಇವರು ಬುಧವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ತೀರ್ಥಹಳ್ಳಿ ಗುತ್ತಿಗೆದಾರರಾಗಿ ಹೆಸರು ಮಾಡಿದ್ದ ಸತ್ಯನಾರಾಯಣ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೆಳಿಗ್ಗೆ 11ಕ್ಕೆ ಬಸವಾನಿ ಸ್ವಗೃಹದ ಸಮೀಪ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಗುರುವಳ್ಳಿ ಮೂಲದ ಸತ್ಯನಾರಾಯಣ ಅವರು ಬಸವಾನಿಯಲ್ಲಿ ನೆಲೆಸಿದ್ದು,
ಸ್ವರೂಪ್ ಕಿಶನ್, ಸುಮನ್, ಪತ್ನಿ ಸೇರಿದಂತೆ ಕುಟುಂಬದವರನ್ನು ಅಗಲಿದ್ದಾರೆ.
ಭಾವಪೂರ್ಣ ಶ್ರದ್ಧಾಂಜಲಿ
