ಟಾಪ್ 3 ನ್ಯೂಸ್
ಆಗುಂಬೆ- ಶೃಂಗೇರಿ ಮಾರ್ಗದಲ್ಲಿ ಮರ ಬಿದ್ದು ರಸ್ತೆ ಸಂಚಾರ ಬಂದ್..!
– ತೀರ್ಥಹಳ್ಳಿ : ಕುಂದಾದ್ರಿ ವರ್ತೆಗದ್ದೆ ಬಳಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತ…!!
– ಶಿವಮೊಗ್ಗ : ಅಡಕೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ!
NAMMUR EXPRESS NEWS
ತೀರ್ಥಹಳ್ಳಿ : ಆಗುಂಬೆ ಶೃಂಗೇರಿ ಕೊಪ್ಪ ಎನ್‌ಆರ್ ಪುರ
ಹರಿಹರಪುರ ಮುಖ್ಯಮಂತ್ರಿ ಕತ್ತಿಮಶೆ ಹೊಳೆ ಹತ್ತಿರ ರೋಡಿನ ಮಧ್ಯೆ ಬೃಹದಾಕಾರದ ಮರ ಬಿದ್ದು ಆಗುಂಬೆ ಮತ್ತು ಬಿದರಗೋಡು ಶೃಂಗೇರಿ ಮುಖ್ಯ ಮಾರ್ಗ ಬಂದಾಗಿದೆ. ಕತ್ತಿ ಮಸೆ ಹೊಳೆ ಹತ್ತಿರ ಭಾರಿ ಗಾತ್ರದ ಮರ ಬಿದ್ದಿದೆ ಕೊಪ್ಪ ಶೃಂಗೇರಿ ಎನ್ ಆರ್ ಪುರ ದಿನ ಕನ್ನಡ ಜಿಲ್ಲೆಗೆ ಹೋಗುವ ಮಾರ್ಗ ಬಂದಾಗಿದೆ. ಈಗಾಗಲೇ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಮರ ತೆರವುಗೊಳಿಸುವ ಕಾರ್ಯ ಮಾಡಬೇಕಿದೆ.
– ತೀರ್ಥಹಳ್ಳಿ : ಕುಂದಾದ್ರಿ ವರ್ತೆಗದ್ದೆ ಬಳಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತ…!!
ತೀರ್ಥಹಳ್ಳಿ : ಆರಿದ್ರಾ ಮಳೆಯ ಅಬ್ಬರ ಹೆಚ್ಚಾಗಿದ್ದು ಬಾರಿ ಗಾಳಿ ಮಳೆಯಿಂದ ಆಗುಂಬೆಯ ಕುಂದಾದ್ರಿ ವರ್ತೆಗದ್ದೆ ಬಳಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡೆಕೇರಿ ಹೊಸೆಗದ್ದೆ – ಶೃಂಗೇರಿಯನ್ನು ಸಂಪರ್ಕಿಸುವ ರಸ್ತೆ ಮರ ಬಿದ್ದು ಕಡಿತಗೊಂಡಿದ್ದು ರಾತ್ರಿ ಬಾರಿ ಗಾಳಿ ಮಳೆಯಿಂದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈಗಾಗಲೇ ಸ್ಥಳೀಯರು ಮರ ಕಟಾವು ಮಾಡಿ ತೆರವುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಹೊಸೆಗದ್ದೆ – ಶೃಂಗೇರಿಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು ದೊಡ್ಡ ವಾಹನ ಓಡಾಟ ನಿಲ್ಲಿಸಲಾಗಿದೆ.
– ಶಿವಮೊಗ್ಗ : ಅಡಕೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ!
ಶಿವಮೊಗ್ಗ : ಅಡಕೆ ತೋಟದ ಹೊಂಗೆ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅನಾಮಧೇಯ ಪುರುಷನೋರ್ವನ ಶವ ಪತ್ತೆಯಾದ ಘಟನೆ, ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿ ನಡೆದಿದೆ. ಮಲವಗೊಪ್ಪದ ರೈಲ್ವೇ ಟ್ರ್ಯಾಕ್ ಉತ್ತರದಲ್ಲಿನ ಅಡಕೆ ತೋಟದಲ್ಲಿ ಘಟನೆ ನಡೆದಿದೆ. ಜೂ. 22 ರ ಬೆಳಿಗ್ಗೆ 6 ಗಂಟೆ ಸರಿಸುಮಾರಿಗೆ ಸದರಿ ವ್ಯಕ್ತಿ ಕಬ್ಬಿಣದ ತಂತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಜೂ. 23 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಮೃತ ವ್ಯಕ್ತಿಗೆ ಸುಮಾರು 35 ರಿಂದ 40 ವರ್ಷ ವಯೋಮಾನವಿದೆ. 5.6 ಅಡಿ ಎತ್ತರ, ಕೋಲು ಮುಖ, ಕಂದು ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಮೈಮೇಲೆ ತಿಳಿ ನೀಲಿ ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.
