Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಹುಡುಗರಿಂದ ಸಕತ್ ವಿಡಿಯೋ

ತೀರ್ಥಹಳ್ಳಿಯ ಹುಡುಗರಿಂದ ಸಕತ್ ವಿಡಿಯೋ
– ಸಕತ್ ಇನ್ನೋವೇಟಿವ್!
– ಸಕತ್ ಸಸ್ಪೆನ್ಸ್! ಏನಿದು ವಿಷಯ 

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಅಪಾರ ಕಲೆ ಮತ್ತು ಕಲಾಕಾರರ ತವರೂರು. ಈ ನೆಲದ ಮಣ್ಣಿನ ಗುಣವೇ ಸಾಹಿತ್ಯ, ಸಂಸ್ಕ್ರತಿ, ಕಲೆಗಳನ್ನು ಚಿಗುರಿಸುವಂತದ್ದು. ಅದಕ್ಕೀಗ ಹೊಸದೊಂದು ಸೇರ್ಪಡೆಯಾಗಿದೆ ಈ ಹುಡುಗರು ಮಾಡಿದ ಚಿಕ್ಕ ಮತ್ತು ಚೊಕ್ಕ ವಿಡಿಯೋ. ತೀರ್ಥಹಳ್ಳಿಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಶಾಹಿಲ್, ಅಮೃತ್ ಮತ್ತು ಯಶಸ್ ಅವರು ಮಾಡಿರುವ ಈ ವೀಡಿಯೋ ಯಾವ ಪ್ರೊಫೆಷನಲ್ ಸಿನಿಮಾಟೋಗ್ರಫಿಗೂ ಕಡಿಮೆಯಿಲ್ಲ. ಕಾನ್ಸೆಪ್ಟ್ ಮತ್ತು ಅದನ್ನು ಪ್ರಸ್ತುತ ಪಡಿಸಿದ ರೀತಿ, ಅದಕ್ಕೆ ತಕ್ಕ ಆ್ಯಕ್ಟು, ಫೈಟು, ಕಾಡು, ನೀರು… ಎಲ್ಲವನ್ನೂ ಅತ್ಯುತ್ತಮ ಆ್ಯಂಗಲ್ ನಿಂದ ಸೆರೆಹಿಡಿದ ಕ್ಯಾಮೆರಾ ಕಣ್ಣು! ನಿಜಕ್ಕೂ ವಾವ್ಹ್ ಎನಿಸುವಂತಿದೆ. ಅಷ್ಟೇ ಪ್ರೊಫಷನಲ್ ಆಗಿ ಮಾಡಿದ ವೀಡಿಯೋ ಎಡಿಟಿಂಗ್ ಮತ್ತು ಸಮಯ ಎಲ್ಲವೂ ಹುಬ್ಬೇರಿಸುವಂತಿದೆ.

ಇಷ್ಟೆಲ್ಲಾ ಆದ ನಂತರ ಆ ವೀಡಿಯೋಗೆ ತೆಗೆದುಕೊಂಡ ವಿಷಯ ಎಲ್ಲರೂ ಮೆಚ್ಚುವಂತದ್ದು ಮತ್ತು ಹೀಗೂ ಕರೆಯಬಹುದಾ? ನೆನಪಿಸಬಹುದಾ? ಮೆಸೇಜ್ ತಲುಪಿಸಬಹುದಾ? ಎಂಬ ಪ್ರಶ್ನೆಗಳಿಗೆ ‘ಹೌದು’ ಎನ್ನುವ ಉತ್ತರ ಕೊಡುವಂತದ್ದು. ಲಿಂಕ್ ಇಲ್ಲಿದೆ. ನೋಡಿ.
https://www.instagram.com/reel/C1rjrZlBRtB/?igsh=MW5hZThnaTlrd2VkYw==

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.