Categories
ಬೆಂಗಳೂರು ಮಲ್ನಾಡ್

ಬೆಂಗಳೂರಿನಲ್ಲಿ ಜ.14ಕ್ಕೆ ಮಲೆನಾಡಿಗರ ಕ್ರೀಡಾಕೂಟ!

ಬೆಂಗಳೂರಿನಲ್ಲಿ ಜ.14ಕ್ಕೆ ಮಲೆನಾಡಿಗರ ಕ್ರೀಡಾಕೂಟ!
– ಹೆಚ್ಎಂಟಿ ಆಟದ ಮೈದಾನದಲ್ಲಿ ಆಟ: ಸರ್ವರಿಗೂ ಸ್ವಾಗತ
– ಪ್ರದೀಪ್ ಹೆಗ್ಗೋಡು ಸಾರಥ್ಯದಲ್ಲಿ ಕಾರ್ಯಕ್ರಮ ಆಯೋಜನೆ

NAMMUR EXPRESS NEWS
ಬೆಂಗಳೂರು: ಮಲೆನಾಡಿಗರ ದನಿಯಾಗಿ, ಸಾಹಿತ್ಯ, ಸಾಂಸ್ಕೃತಿಕ , ಸಂಘಟನೆ, ಕ್ರೀಡೆ ಹೀಗೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಲೆನಾಡಿಗರ ಸಂಘಟನೆಯಾದ ಮಲೆನಾಡು ಮಿತ್ರವೃಂದವು ಸದಾ ಧನಾತ್ಮಕವಾಗಿ ಮತ್ತು ಮಲೆನಾಡಿಗರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಹಾಗೆಯೇ ಈ ಬಾರಿಯೂ ಮಲೆನಾಡು ಮಿತ್ರ ವೃಂದದ ನೂತನ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು ಸಾರಥ್ಯದಲ್ಲಿ ಜನವರಿ 14ರ ಭಾನುವಾರ ಬೆಂಗಳೂರಿನ ಹೆಚ್ಎಂಟಿ ಆಟದ ಮೈದಾನದಲ್ಲಿ ಮಲೆನಾಡಿಗರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.

ಸಾವಿರಾರು ಮಲೆನಾಡಿಗರು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ, ಮಲೆನಾಡ ಎಲ್ಲಾ ತಾಲೂಕಿನ ಜೊತೆ ಬೇರೆ ಬೇರೆ ತಾಲೂಕಿನ ಮಲೆನಾಡಿಗರೂ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಮಲೆನಾಡು ಮಿತ್ರವೃಂದ ಕರೆ ನೀಡಿದೆ. ಇದರೊಂದಿಗೆ 2024 ರ ಕ್ಯಾಲೆಂಡರ್ ವಿತರಣೆ ಮಾಡಲಾಗುವುದು ಎಂದು ಮಿತ್ರವೃಂದದ ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.