ತೀರ್ಥಹಳ್ಳಿಯಲ್ಲಿ ಮರಳು ದರ್ಬಾರ್..!?
– ಹೊಡೆದಾಟ, ಗಲಾಟೆ: ದಿನವಿಡೀ ಅಕ್ರಮವಾಗಿ ಸಾಗಣೆ
– ಕಾಣದ ಕೈಗಳು, ರಾಜಕಾರಣಿಗಳು, ಅಧಿಕಾರಿಗಳು ಶಾಮೀಲು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಮರಳು ದರ್ಬಾರ್ ಇದೀಗ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.
ಒಂದು ಕಡೆ ಮಳೆಗಾಲ ಶುರು ಆಗುತ್ತಿದ್ದಂತೆ ಸಾವಿರಾರು ಲೋಡ್ ಮರಳು ಹೊಡೆಯಲಾಗುತ್ತಿದೆ. ಮೊನ್ನೆ ಮೊನ್ನೆ ಬೆಜ್ಜವಳ್ಳಿ ಗಬಡಿ ಕ್ವಾರೆಯಲ್ಲಿ ದೊಡ್ಡ ಹೊಡೆದಾಟ ಕೂಡ ನಡೆದಿದೆ. ತೀರ್ಥಹಳ್ಳಿಯ ಮರಳು ಕ್ವಾರೆಯಲ್ಲಿ ಕಾಣದ ಕೈಗಳು, ರಾಜಕಾರಣಿಗಳು, ಅಧಿಕಾರಿಗಳು ಶಾಮೀಲಾಗಿ ಮಾಫಿಯಾ ನಡೆಸುತ್ತಿದ್ದಾರೆ. ಅಕ್ರಮವಾಗಿ ಸಾವಿರಾರು ಲೋಡ್ ಮರಳು ಕ್ಲಾಟಿಂಗ್ ಮಾಡಲಾಗಿದೆ. ಬುಕ್ಲಾಪುರ, ಗಬಡಿ ಸೇರಿ ಅನೇಕ ಕಡೆ ಆತುರ ಆತುರವಾಗಿ ಮರಳು ಸಾಗಣೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಡಳಿತ ಕೇಳೋದಿಲ್ಲ: ತುಂಗೆ ನದಿಯನ್ನು ಬಗೆದು ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ. ಗಣಿ, ಕಂದಾಯ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಇದೀಗ ಸೀಸನ್ ಮುಗಿಯುತ್ತಿದೆ. ಮುಂದಿನ ವರ್ಷ ಮತ್ತೆ ಈ ಲಾಬಿ ನಡೆಯಲಿದೆ. ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಇಲಾಖೆಗಳು ಕೂಡ ಮೌನ ವಹಿಸಿವೆ.
