Categories
ತೀರ್ಥಹಳ್ಳಿ

ತೀರ್ಥಹಳ್ಳಿ ರಾಮೇಶ್ವರ, ಕುಂದಾದ್ರಿಯಲ್ಲಿ ಸಂಕ್ರಾಂತಿ ಸಂಭ್ರಮ!

ತೀರ್ಥಹಳ್ಳಿ ರಾಮೇಶ್ವರ, ಕುಂದಾದ್ರಿಯಲ್ಲಿ ಸಂಕ್ರಾಂತಿ ಸಂಭ್ರಮ!
– ಬೆಜ್ಜವಳ್ಳಿಯಲ್ಲಿ ಕಾಣುತ್ತೆ ಗರುಡ, ಕುಂದಾದ್ರಿಯಲ್ಲಿ ಬೆಟ್ಟದ ಮೇಲೆ ಜಾತ್ರೆ
– ಕುಂದಾದ್ರಿ, ಹುಂಚ, ರಾಮನಸರ, ಸಿಗಂದೂರು, ಶೃಂಗೇರಿ ಇನ್ನೂ ಹಲವು ಕಡೆ ಸಂಕ್ರಾಂತಿ ಜಾತ್ರೆ

NAMMUR EXPRESS NEWS
ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಜತೆಗೆ ತೀರ್ಥಹಳ್ಳಿ ಯಲ್ಲಿ ಜನವರಿ 15ರ ಸೋಮವಾರ ಮಕರ ಸಂಕ್ರಾಂತಿ ರಥೋತ್ಸವವನ್ನು ನಡೆಸಲಾಗುತ್ತಿದೆ. ಅಲ್ಲಿಗೆ ಈ ಬಾರಿ ಎಳ್ಳಮಾವಸ್ಯೆ ಮತ್ತು ಸಂಕ್ರಾಂತಿ ಜಾತ್ರೆ ಒಟ್ಟಿಗೆ ಬಂದಿದೆ. ಭಕ್ತರು ಸಿ ಶ್ರೀ ಮುಡಿಗಂಧ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗುವಂತೆ ಮಕರ ಸಂಕ್ರಾಂತಿ ರಥೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ. ರಥಾರೋಹಣದ ನಂತರ ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ.

ಜ.14ರಂದು ಕುಂದಾದ್ರಿಯಲ್ಲಿ ಜಾತ್ರೆ

ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕ್ಷೇತ್ರ ಆಚಾರ್ಯ ಶ್ರೀ ಕುಂದ ಕುಂದರ ತೆಪೋಭೂಮಿ ಶ್ರೀ ಕುಂದಾದ್ರಿ ಕ್ಷೇತ್ರದಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವವು ಜನವರಿ 14ರ ಭಾನುವಾರ ನಡೆಯಲಿದೆ. ಹೊಂಬುಜ ಜೈನಮಠದ ಪರಮಪೂಜ್ಯ ಜಗದ್ಗುರುಗಳಾದ ಸ್ವಸ್ತಿಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿ ಮಾರ್ಗದರ್ಶನ ನೀಡುವರು. ಅಂದು ಬೆಳಿಗ್ಗೆ8ರಿಂದ ಕಲಿಕುಂಡ ಯಂತ್ರಾರಾಧನೆ, 11ಗಂಟೆಗೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ, ಶ್ರೀ ಪದ್ಮಾವತಿ ದೇವಿ ಅಮ್ಮನವರ ಷೋಡಶೋಪಚಾರ ಪೂಜೆ ಮತ್ತು ಆಚಾರ್ಯ ಶ್ರೀ ಕುಂದ ಕುಂದಾಚಾರ್ಯರ ಪಾದುಕಾ ಮಂದಿರದಲ್ಲಿ ವಿಶೇಷಪೂಜೆ, ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆ ಹಾಗೂ ಸಂಜೆ ದೀಪೋತ್ಸವ ನಡೆಯಲಿದೆ. ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕಾಗಿ ಕುಂದಾದ್ರಿ ಜೈನ ಮಂದಿರದ ಡಾ.ಜೀವಂಧರ್ ಹಾಗೂ ಹೊಂಬುಜ ಜೈನ ಮಠದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.

ಜ.14ಕ್ಕೆ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಜಾತ್ರೆ

ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಅದ್ಧೂರಿ ಸಂಕ್ರಾಂತಿ ಆಚರಿಸಲಾಗುವುದು. ಬೆಳಗ್ಗೆಯಿಂದಲೇ ಕದಲಿ ಮಂಟಪದಲ್ಲಿ ರಾಜಪಲ್ಲಕ್ಕಿ ಮಹಾಪೂಜೆ, ಹರಕೆ ತುಲಾಭಾರ ಸೇವೆ ನಡೆದು ಶ್ರೀಅಯ್ಯಪ್ಪಸ್ವಾಮಿ ಉತ್ಸವಮೂರ್ತಿಗೆ ಮಹಾಮಂಗಳಾರತಿ, ಶ್ರೀ ಆಭರಣೋತ್ಸವ, ಪರಿವಾರ ದೈವಗಳೊಂದಿಗೆ ರಾಜಪಲ್ಲಕ್ಕಿಯು ಬೀಡಿನಿಂದ ಸನ್ನಿಧಾನಕ್ಕೆ ಭವ್ಯ ಮೆರವಣಿಗೆ ಮಾಡಿ ಶ್ರೀ ಅಯ್ಯಪ್ಪಸ್ವಾಮಿ ಉಯ್ಯಾಲೆ ಸೇವೆ ಸೇರಿದಂತೆ ಅನೇಕ ಪೂಜಾ ವಿಧಿವಿಧಾನಗಳು ಬೆಜ್ಜವಳ್ಳಿಯ ಅಯ್ಯಪ್ಪ ದೇವಸ್ಥಾನದಲ್ಲಿ ಜರುಗಲಿದೆ. ಆಕಾಶದಲ್ಲಿ ಗರುಡ ಹಾರುವ ವಿಶೇಷ ಭಕ್ತರ ಗಮನ ಸೆಳೆಯಲಿದೆ. ಇನ್ನು ಹುಂಚ, ರಾಮನಸರ, ಶೃಂಗೇರಿ ಹೀಗೆ ಹಲವು ದೇವಸ್ಥಾನಗಳಲ್ಲಿ ಸಂಕ್ರಾಂತಿಯ ಅದ್ಧೂರಿ ಆಚರಣೆ ಇರಲಿದೆ‌.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.