Categories
ತೀರ್ಥಹಳ್ಳಿ

ಸೇವಾಭಾರತಿ: ಕೃಷ್ಣ ವೇಷ ಸ್ಪರ್ಧೆ ಸಂಭ್ರಮ!

ಸೇವಾಭಾರತಿ: ಕೃಷ್ಣ ವೇಷ ಸ್ಪರ್ಧೆ ಸಂಭ್ರಮ!
– ಖುಷಿಯಿಂದ ಭಾಗವಹಿಸಿದ ನೂರಾರು ಮಕ್ಕಳು
– ಶಾಲೆಯ ಮಕ್ಕಳು ರಾಧೆ-ಕೃಷ್ಣ ವೇಷದಲ್ಲಿ..!

NAMMUR EXPRESS NEWS
ತೀರ್ಥಹಳ್ಳಿಯ ಸೇವಾ ಭಾರತಿ ಶಾಲೆ ತೀರ್ಥಹಳ್ಳಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ 41ನೇ ವರ್ಷದ ಬಾಲ ಗೋಕುಲ ಅಲಂಕಾರ ಕೃಷ್ಣ ಪ್ರದರ್ಶನದಲ್ಲಿ ನೂರಾರು ಮಕ್ಕಳು ಭಾಗವಹಿಸಿ ಕೃಷ್ಣನ ವೇಷ ತೊಟ್ಟು ಗಮನ ಸೆಳೆದರು. ಸೇವಾಭಾರತಿ ಟ್ರಸ್ಟ್ ವತಿಯಿಂದ 41ನೇ ವರ್ಷದ ಬಾಲಗೋಕುಲ ಅಲಂಕೃತ ಕೃಷ್ಣ ವೇಷ ಸ್ಪರ್ಧೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. 6 ವರ್ಷದೊಳಗಿನ ಮಕ್ಕಳು ಭಾಗಿಯಾಗಿದ್ದು ಸಂತಸದಿಂದ ಮಕ್ಕಳು, ಪೋಷಕರು ಭಾಗಿಯಾಗಿದ್ದರು. ಸೇವಾಭಾರತಿ ಶಾಲೆಯ ಮಕ್ಕಳು ರಾಧೆ-ಕೃಷ್ಣ ವೇಷ ಧರಿಸಿ ಪಟ್ಟಣದಲ್ಲಿ ಶೋಭಾಯಾತ್ರೆ ನಡೆಸಿದರು.

ಪುಟಾಣಿ ಅಶ್ವಿಗೆ ಬಹುಮಾನ

ಪುಟಾಣಿ ಮಕ್ಕಳ ವಿಭಾಗದಲ್ಲಿ ಮೇಲಿನ ಕುರುವಳ್ಳಿಯ ನಿವಾಸಿಗಳಾದ ಅಮೃತ ಹಾಗೂ ಪೂರ್ಣೇಶ್ ಪೂಜಾರಿ ಇವರ ಪುತ್ರಿ ಪುಟಾಣಿ ಆಶ್ವಿ ಇವರು ದ್ವಿತೀಯ ಸ್ಥಾನವನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಐಶನಿ, ಐರಾಗೆ ಬಹುಮಾನ

ತೀರ್ಥಹಳ್ಳಿಯ ಅಚ್ಚುರ್ ಆಗ್ರೋ ಸೇಲ್ಸ್ ಮಾಲೀಕರಾದ ರಂಜನ್ ಹೆಗ್ಡೆ, ಸಿಂಧು ದಂಪತಿಗಳ ಪುತ್ರಿ ಐಶನಿ ಆರ್ ಹೆಗಡೆ ಅಲಂಕೃತ ಕೃಷ್ಣವೇಷ ಪ್ರದರ್ಶನದಲ್ಲಿ ಭಾಗವಹಿಸಿ ಯಶೋಧ ಕೃಷ್ಣ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು,
ಮತ್ತೊಬ್ಬಳು ಪುತ್ರಿ ಐರಾ ಆರ್ ಹೆಗಡೆ ಬೆಣ್ಣೆ ಕೃಷ್ಣ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.