Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ

ತೀರ್ಥಹಳ್ಳಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ
– ವಿಶ್ವ ಹಿಂದೂ ಪರಿಷತ್, ಭಜರಂಗದಳದ ಆಯೋಜನೆ
– ತೀರ್ಥಹಳ್ಳಿಗೆ ಬೃಹತ್ ಬೈಕ್ ರ‍್ಯಾಲಿ ಮೂಲಕ ಆಗಮನ
– ರಸ್ತೆ ಯುದ್ಧಕ್ಕೂ ಘೋಷಣೆ: ಜೈ ಭಜರಂಗಿ

NAMMUR EXPRESS NEWS
ತೀರ್ಥಹಳ್ಳಿ: ಧರ್ಮ ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳವು ಶೌರ್ಯ ಜಾಗರಣ ರಥಯಾತ್ರೆಯನ್ನು ಚಿತ್ರದುರ್ಗದಿಂದ ಪ್ರಾರಂಭಿಸಿದ್ದು ಬುಧವಾರ ಬೆಳಗ್ಗೆ 10:30ಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬಂದು ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ಬಳಿ ನಗರ ರಸ್ತೆಯಿಂದ ಆಗಮಿಸಿದ ರಥ ತೀರ್ಥಹಳ್ಳಿಗೆ ಬೃಹತ್ ಬೈಕ್ ರ‍್ಯಾಲಿ ಮೂಲಕ ಆಗಮಿಸಿತು. ರ್‍ಯಾಲಿಯಲ್ಲಿ ನೂರಾರು ಸಂಖ್ಯೆಯ ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದು ರಸ್ತೆ ಯುದ್ಧಕ್ಕೂ ಘೋಷಣೆ ಕೂಗುತ್ತಾ ರಥಯಾತ್ರೆಯಲ್ಲಿ ಪಾಲ್ಗೊಂಡರು. ನಂತರ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ರಥಕ್ಕೆ ಪೂಜೆ ನೆರವೇಸಿದರು. ನಂತರ ಸಭೆಯನ್ನು ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ಪ್ರಮುಖರಾದ ರಾಮಚಂದ್ರ ಹೊರಣೆಬೈಲು ಮಾತನಾಡಿ, ಪ್ರತಿ ವ್ಯಕ್ತಿಯಲ್ಲಿ ಧರ್ಮದ ಬಗ್ಗೆ ಅರಿವನ್ನು ಮೂಡಿಸುವಂತಹ, ಸಂಸ್ಕಾರವನ್ನು ಬೆಳೆಸುವಂತಹ ಪ್ರಕ್ರಿಯೆ ಮಾಡುತ್ತ ಧಾರ್ಮಿಕ ಶ್ರದ್ಧೆಯನ್ನು ಸಮಾಜದಲ್ಲಿ ನೀಡಲಿಕ್ಕಾಗಿ ಇರುವಂತಹ ವಿಶ್ವಮಾನವ ಸಂಘಟನೆ ಇದಾಗಿದೆ.

ಇದು 1964ರಲ್ಲಿ ಕೃಷ್ಣಾಷ್ಟಮಿ ದಿನ ಮುಂಬೈಯ ಸಾಂದೀಪನಿ ಆಶ್ರಮದಲ್ಲಿ ಸ್ಥಾಪನೆಗೊಂಡಿದ್ದು ಎನ್ನುವಂಥದ್ದು ನಮ್ಮೆಲ್ಲರಿಗೂ ಗೊತ್ತಿದೆ. ಇದು ಪ್ರಾರಂಭವಾಗಿ 60ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಅನೇಕ ಸಾಮಾಜಿಕ, ಸೇವಾ, ಧಾರ್ಮಿಕ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಮಂಚೂರಿಯಲ್ಲಿ ನಿಂತುಕೊಂಡು ಮಾಡಿದೆ. ಸಮಾಜದಲ್ಲಿ ಎಲ್ಲಾ ಭೇದ ಭಾವಗಳನ್ನು ಹೋಗಲಾಡಿಸುವಂತಹ ಕೆಲಸಕ್ಕೆ ಬದ್ಧವಾದ ಸಂಘಟನೆ ನಮ್ಮ ಸಂಘಟನೆ. ಹಿಂದುಗಳ ರಕ್ಷಣೆಯೇ ನಮ್ಮ ಗುರಿ, ಹಿಂದುಗಳೆಲ್ಲ ಒಂದು ಎಂದು ಭಾವಿಸಿ ಭೇದ ಭಾವಗಳನ್ನು ಹೋಗಲಾಡಿಸುವುದೇ ನಮ್ಮ ಗುರಿ ಎಂದರು.
ಹಿಂದುಗಳಿಗಾದ ಅಪಮಾನ ತೊಡೆದು ಹಾಕುವ ಮೊದಲ ಹೆಜ್ಜೆಯಾಗಿ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನದಲ್ಲಿ ದುಷ್ಟರು ರಚಿಸಿದ ಕಳಂಕಿತ ಕಟ್ಟಡವನ್ನು ರಾಮಭಕ್ತರು ಶೌರ್ಯ ಪ್ರದರ್ಶನದ ಮೂಲಕ 1992 ಡಿಸೆಂಬರ್ 6 ರಂದು ಕೆಡವಿ ಹಾಕಿ ಇತಿಹಾಸ ನಿರ್ಮಿಸಿದರು. ಹೋರಾಟದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ತಮ್ಮ ಬಲಿದಾನವನ್ನು ಮಾಡಿದ್ದಾರೆ.

ಸಮಾಜವನ್ನು ಸಂಘಟನೆ ಮಾಡುವ ಕೆಲಸ ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ. ಈ ಪೀಳಿಗೆಗೆ ಸಂಘಟನೆಗೆ ಹೊರಡುವಂತಹ ಕೆಲಸ ಮಾಡುವ ಅಗತ್ಯತೆ ಇದೆ. ಧಾರ್ಮಿಕ ಭಾವವನ್ನು ಜಾಗೃತಿ ಮಾಡುತ್ತಾ, ಸಮಾಜಕ್ಕೆ ಪೂರಕವಾದ ಸಂಸ್ಕಾರವನ್ನು ಕೊಡುತ್ತ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ವ್ಯಕ್ತಿಗಳಿಗೆ ಉತ್ತರ ರೂಪಿಯಾಗಿ ನಿಲ್ಲಬೇಕಾದಂತಹ ಅಗತ್ಯ ಹಿಂದೇಂದಿಗಿಂತಲೂ ಹೆಚ್ಚಿದೆ. ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎಂದು ಹೊರಟಂತಹ ದ್ರೋಹಿಗಳಿಗೆ, ಧರ್ಮ ವಂಚಕರಿಗೆ ಉತ್ತರ ಕೊಡಬೇಕಾದ ಅಗತ್ಯತೆ ಇದೆ ಎಂದರು. ರಥ ಯಾತ್ರೆಯ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಆರ್ ಎಸ್ ಎಸ್ ಪ್ರಮುಖರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.