Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡಾ.ಬಿ.ಎಸ್. ವಿಶ್ವನಾಥ ಅವರಿಗೆ ಶ್ರದ್ಧಾಂಜಲಿ

ತೀರ್ಥಹಳ್ಳಿಯಲ್ಲಿ ಡಾ.ಬಿ.ಎಸ್. ವಿಶ್ವನಾಥ ಅವರಿಗೆ ಶ್ರದ್ಧಾಂಜಲಿ
– ತೀರ್ಥಹಳ್ಳಿ ವಾಗ್ದೇವಿ ಶಾಲೆಯಲ್ಲಿ ಅಂತಿಮ ನಮನ
– ಮೇಲಿನಕುರುವಳ್ಳಿಯಲ್ಲಿ ಶ್ರದ್ಧಾಂಜಲಿ ಸಭೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಹಲವೆಡೆ ಹಿರಿಯ ಸಹಕಾರಿ, ಸಹಕಾರಿ ರತ್ನ ಡಾ.ಬಿ.ಎಸ್. ವಿಶ್ವನಾಥ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಲಾಯಿತು. ತೀರ್ಥಹಳ್ಳಿ ವಾಗ್ದೇವಿ ಶಾಲೆಯಲ್ಲಿ ಸಹಕಾರಿ ರತ್ನ ಡಾ|| ಬಿ.ಎಸ್. ವಿಶ್ವನಾಥನ್ ರವರಿಗೆ ಭಾವಪೂರ್ವ ಶ್ರದ್ಧಾಂಜಲಿಯನ್ನು ಪುಷ್ಪ ನಮನ ಸಲ್ಲಿಸುವುದರ ಮೂಲಕ ನಡೆಸಲಾಯಿತು. ಸಹಕಾರಿ ಕ್ಷೇತ್ರದ ಹಿರಿಯ ಮುಖಂಡರಾದ ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎಸ್.ವಿಶ್ವನಾಥನ್ ರವರು ಭಾನುವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಇದರ ಅಂಗವಾಗಿ ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾವನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಬೋಧಕ ವೃಂದದವರು ಪುಷ್ಪನಮನವನ್ನು ಸಲ್ಲಿಸುವುದರ ಮೂಲಕ ಸಂತಾಪವನ್ನು ಸೂಚಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಗದೀಶ್ ಕೆ.ಎಸ್ ( ಜಗ್ಗಣ್ಣ ) ಮಾತನಾಡಿ ಸಂಸ್ಥೆಗೆ ಬಿ.ಎಸ್.ವಿ ಅವರಿಂದಾದ ಸಹಕಾರ ಮತ್ತು ಪ್ರೋತ್ಸಾಹವನ್ನು ಸ್ಮರಿಸಿದರು. ಭವಿಷ್ಯದಲ್ಲಿ ಇಂತಹ ಅನರ್ಘ್ಯ ರತ್ನ ಸಿಗುವುದು ಅಪರೂಪ ಎನ್ನುವ ವಿಷಾದವನ್ನು ವ್ಯಕ್ತಪಡಿಸಿದರು. ಮೌನಾಚರಣೆಯ ಮೂಲಕ ಕಾರ್ಯಕ್ರವನ್ನು ಮುಕ್ತಾಯಗೊಳಿಸಲಾಯುತು.

ಮೇಲಿನಕುರುವಳ್ಳಿಯಲ್ಲಿ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನ ಹೊಂದಿದ ವಿಶ್ವನಾಥರವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಚಿಂತಕ ನೆಂಪೆ ದೇವರಾಜ್ ಮಾತನಾಡಿ ಬಿ. ಎಸ್ ವಿಶ್ವನಾಥರವರ ಜೀವನ, ಬದುಕು, ಸಾಧನೆಗಳ ಬಗ್ಗೆ ಅಪರೂಪದ ಮಾಹಿತಿ ಹಂಚಿಕೊಂಡರು. ಗ್ರಾಂ. ಪಂ ಸದಸ್ಯರಾದ ನಿಶ್ಚಲ್ ಜಾದೂಗಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಆನಂದ್ ಸಿ ವಂದಿಸಿದರು. ಗ್ರಾಂ. ಪಂ ಅಧ್ಯಕ್ಷರಾದ ಯು. ಡಿ ವೆಂಕಟೇಶ್, ಉಪಾಧ್ಯಕ್ಷರಾದ ಅನಿತ ಪ್ರವೀಣ್, ಮಾಜೀ ಅಧ್ಯಕ್ಷರಾದ ರವಿ,ಭವ್ಯ,ಗೀತಾ ರಾಘವೇಂದ್ರ, ದೊರೆ, ಸ್ವಾಮಿನಾಥ್ ಸಿದ್ದ, ಸ. ಪ. ಪೂ. ಕಾಲೇಜು ಪ್ರಾಂಶುಪಾಲರಾದ ಸುಧಾ, ಸೇವಾದಳದ ಪ್ರಸನ್ನ ತಿರಳೇಬೈಲ್, ಆರ್ಮುಗಂ, ಪ್ರವೀಣ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.