Categories
ತೀರ್ಥಹಳ್ಳಿ

ಛೀ..ಸಾರ್ವಜನಿಕ ಶೌಚಾಲಯ ಅವ್ಯವಸ್ಥೆ ಕೇಳೋರಿಲ್ಲ!

ಛೀ..ಸಾರ್ವಜನಿಕ ಶೌಚಾಲಯ ಅವ್ಯವಸ್ಥೆ ಕೇಳೋರಿಲ್ಲ!
– ನಿರ್ವಹಣೆಯೂ ಇಲ್ಲ…ಉಪಯೋಗಕ್ಕೂ ಇಲ್ಲ
– ಸಂತೆ ರಸ್ತೆಯಲ್ಲಿ ಶೌಚಾಲಯ ವಾಸನೆ ವಾಸನೆ
– ಕಣ್ಮುಚ್ಚಿಕೊಂಡ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, ಜನ ನಾಯಕರು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಅಷ್ಟೂ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ರಸ್ತೆಯ ಬದಿಯಲ್ಲೂ ಸಾರ್ವಜನಿಕರು ಓಡಾಡದಂತೆ ದುಸ್ಥಿತಿಯಲ್ಲಿವೆ. ತಾಲ್ಲೂಕು ಕಛೇರಿಯ ಶೌಚಾಲಯದ ನೆಲವೇ ಕಿತ್ತುಹೋಗಿದ್ದು ಸರ್ಕಾರಿ ಕಛೇರಿಯಾಗಿದ್ದೂ, ಮತ್ತು ನಿತ್ಯ ನೂರಾರು ಸಾರ್ವಜನಿಕರು ಭೇಟಿಕೊಡುವಂತಹ ಮುಖ್ಯ ಸ್ಥಳವಾಗಿದ್ದರೂ ಅಲ್ಲಿನ ಅವ್ಯವಸ್ಥೆ ಕೇಳುವವರಿಲ್ಲದಂತಾಗಿದೆ. ತೀರ್ಥಹಳ್ಳಿ ಸಂತೆ ನಡೆಯುವ ಟಿಎಪಿಸಿಎಂಎಸ್ ರಸ್ತೆ ಮುಖ್ಯ‌ ರಸ್ತೆಯಾಗಿದ್ದು ಆ ಮಾರ್ಗದಲ್ಲಿ ಹತ್ತಾರು ಅಂಗಡಿ ಮಳಿಗೆಗಳು, ಸಾಕಷ್ಟು ಜನ ಸಂಚಾರವಿದ್ದರೂ ಆ ಮಾರ್ಗದಲ್ಲಿ ಸಂಚರಿಸುವಂತೆಯೇ ಇಲ್ಲವಾಗಿದೆ. ಇದರಿಂದಾಗಿ ಅಲ್ಲಿ ಗ್ರಾಹಕರೂ ನಿಲ್ಲದೇ ವ್ಯಾಪಾರ ವಹಿವಾಟಿಗೂ ತೊಂದರೆಯಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಪಟ್ಟಣ ಪಂಚಾಯತ್ ತಕ್ಷಣ ಈ ಬಗ್ಗೆ ಗಮನಿಸಬೇಕಿದೆ.

ಇಷ್ಟಾಗಿಯೂ ದೂರದಿಂದಲೇ ಗಬ್ಬೆದ್ದು ನಾರುವ ಈ ಶೌಚಾಲಯಗಳನ್ನು ಯಾರೂ ಉಪಯೋಗಿಸುವಂತೆಯೂ ಇಲ್ಲ. ಹಾಗಾಗಿ ಪಟ್ಟಣದಲ್ಲಿ ಸ್ವಚ್ಛತೆ ಮಾಯವಾಗುತ್ತಿದೆ. ಹಳ್ಳಿಗಳಿಂದ ಬರುವ ಜನ ಅಗತ್ಯ ಕೆಲಸಕ್ಕೆ ತೊಂದರೆ ಪಡುವ ಸ್ಥಿತಿ ಇದೆ. ಇಷ್ಟೆಲ್ಲಾ ಸರ್ಕಾರಿ ಸುಪರ್ದಿಗೆ ಒಳಪಟ್ಟಿದ್ದರೂ ಪಟ್ಟಣ ಪಂಚಾಯ್ತಿ ಮಾತ್ರ ಸಂಬಂಧವಿಲ್ಲದಂತೆ ತಣ್ಣಗಿದೆ. ಇನ್ನು ಮುಂದಾದರೂ ಈ ಬಗ್ಗೆ ಕಣ್ಬಿಟ್ಟು, ಸೂಕ್ತ ನಿರ್ವಹಣೆಯ ಮೂಲಕ ಜನರ ಉಪಯೋಗಕ್ಕಾಗುವಂತೆ ಸ್ವಚ್ಚಗೊಳಿಸಿ ವ್ಯವಸ್ಥಿತವಾಗಿಡಲಿ ಎಂಬ ಜನರ ಅಭಿಪ್ರಾಯವನ್ನು ಈ ಮೂಲಕ ನಮ್ಮೂರ್ ಎಕ್ಸ್‌ಪ್ರೆಸ್‌ ಪಟ್ಟಣ ಪಂಚಾಯ್ತಿ, ಶಾಸಕರು, ಜನ ಪ್ರತಿನಿಧಿಗಳಿಗೆ ಮನವಿ ಮಾಡುತ್ತಿದೆ.

ಎಲ್ಲೆಲ್ಲಿ ಅವ್ಯವಸ್ಥೆ?

ಸಂತೆ ರಸ್ತೆ, ಕೊಪ್ಪ ಸರ್ಕಲ್, ಆಗುಂಬೆ ಬಸ್ ನಿಲ್ದಾಣ, ತಾಲೂಕು ಕಚೇರಿ ಶೌಚಾಲಯ ಸೇರಿ ಎಲ್ಲೆಡೆ ಅವ್ಯವಸ್ಥೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.