ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದ ತೀರ್ಥಹಳ್ಳಿ ಹುಡುಗ!
– ತೀರ್ಥಹಳ್ಳಿ ತುಂಗಾ ಕಾಲೇಜಿನ ವಿದ್ಯಾರ್ಥಿ
– ಪುರುಷರ ವಿಭಾಗದ ಶಾಟ್ ಪುಟ್ ಆಟದಲ್ಲಿ ಗೆಲುವು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಹುಡುಗ ಸೂರ್ಯ ಟಿ. ಡಿ. ರಾಷ್ಟ್ರ ಮಟ್ಟದಲ್ಲಿ, ದೆಹಲಿಯಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಪುರುಷರ ವಿಭಾಗದ ಶಾಟ್ ಪುಟ್ ಆಟದಲ್ಲಿ ವಿಜೇತರಾಗಿದ್ದು ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ತೀರ್ಥಹಳ್ಳಿ ಕಟ್ಟೆಹಕ್ಕಲು ಸಮೀಪದ ತಗಡವಳ್ಳಿಯವರಾಗಿದ್ದು, ದಯಾನಂದ ಟಿ.ಎಸ್ ಮತ್ತು ರೇಷ್ಮ ಜೆ.ಎಸ್ ದಂಪತಿಗಳ ಮಗನಾಗಿದ್ದಾರೆ. ಅರ್ಜುನ ಅವಾರ್ಡ್ ವಿನ್ನರ್ ಮಲೆನಾಡ ಖ್ಯಾತ ಆಟಗಾರ ಎಸ್.ಡಿ ಈಶಾನ್ ಅವರಿಂದ ಕೋಚಿಂಗ್ ತೆಗೆದುಕೊಂಡಿದ್ದಾರೆ. 2023ರಲ್ಲಿ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಆರ್ಟ್ಸ್ ವಿಭಾಗದಲ್ಲಿ ಪಧವೀದರರಾಗಿದ್ದಾರೆ. ದೆಹಲಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಸೂರ್ಯ ಅವರಿಗೆ ನಮ್ಮೂರ್ ಎಕ್ಸ್‌ಪ್ರೆಸ್ ಇವರಿಗೆ ಶುಭ ಕೋರಿದೆ.