Categories
ತೀರ್ಥಹಳ್ಳಿ

ಯುವ ಮುಖಂಡ ನವೀನ್ ಕುಳ್ಳುಂಡೆಗೆ ಒಲಿದ ಗ್ರಾಪಂ ಅಧ್ಯಕ್ಷಗಿರಿ!

ಯುವ ಮುಖಂಡ ನವೀನ್ ಕುಳ್ಳುಂಡೆಗೆ ಒಲಿದ ಗ್ರಾಪಂ ಅಧ್ಯಕ್ಷಗಿರಿ!
– ತೀರ್ಥಹಳ್ಳಿಯ ಸಿಂಗನಬಿದರೆ ಗ್ರಾಪಂ ಅಧ್ಯಕ್ಷರಾಗಿ ನವೀನ್ ಕುಳ್ಳುಂಡೆ, ಉಪಾಧ್ಯಕ್ಷರಾಗಿ ಸುಜಾತ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸಿಂಗನಬಿದಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಯುವ ಮುಖಂಡ ನವೀನ್ ಕುಳ್ಳುಂಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಜಾತ ಅವರು ಆಯ್ಕೆಯಾಗಿದ್ದು, ಎಲ್ಲ ಸದಸ್ಯರು ಈ ವೇಳೆ ಹಾಜರಿದ್ದರು. ಸಿಂಗನಬಿದಿರೆ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರು ಇಬ್ಬರು ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತರು ನಾಲ್ಕು ಮಂದಿ ಇದ್ದರು. ಒಟ್ಟು ಆರು ಸದಸ್ಯ ಬಲದ ಗ್ರಾಮ ಪಂಚಾಯತ್ ನಲ್ಲಿ ಇದೀಗ ನೂತನ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆಯಾಗಿದೆ. ಈ ವೇಳೆ ಸಂದೇಶ್, ದಿವ್ಯ, ಕುಸುಮ, ತಿಮ್ಮಪ್ಪ ಹಾಜರಿದ್ದರು. ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.