ಸಾಮಾಜಿಕ ಸೇವೆಯ ಜನ ಸೇವಕ ಲಯನ್ಸ್ ಪಾಂಡುರಂಗಪ್ಪ
– ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇರುವ ಏಕೈಕ ವ್ಯಕ್ತಿ
– 70ನೇ ವರ್ಷದ ಜನ್ಮ ದಿನದ ಶುಭಾಶಯಗಳು
NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ಸಾಮಾಜಿಕ, ಧಾರ್ಮಿಕ ಸೇವೆಯಲ್ಲಿ ಮುಂಚೂಣಿ ಹೆಸರು ಲಯನ್ಸ್ ಪಾಂಡುರಂಗಪ್ಪ. ತಮ್ಮ ಕೈಯಲ್ಲಿ ಇರಲಿ ಬಿಡಲಿ ಇಡೀ ತಾಲೂಕು ಸೇರಿ ಮಲೆನಾಡ ಅನೇಕ ಸಾಮಾಜಿಕ ಕೆಲಸಗಳು ಹಾಗೂ ಇತರೆ ಕೆಲಸಗಳಿಗೆ ತಮ್ಮದೇ ಕೊಡುಗೆ ನೀಡಿರುವ ಮಹಾನ್ ವ್ಯಕ್ತಿ. ಇದೀಗ ಅವರು 70ನೇ ವರ್ಷದ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ.
ಹೌದು. ಜುಲೈ 31ಕ್ಕೆ ಅವರಿಗೆ 70 ವರ್ಷ ತುಂಬುತ್ತದೆ. ಈ ಸಂದರ್ಭದಲ್ಲಿ ಅವರ ಸಾವಿರಾರು ಅಭಿಮಾನಿಗಳು, ಸ್ನೇಹಿತರು, ಎಲ್ಲಾ ಕ್ಷೇತ್ರದ ಗಣ್ಯರು ಅಭಿಮಾನದಿಂದ ಶುಭಾಶಯ ಸಲ್ಲಿಸಿದ್ದಾರೆ. ಜತೆಗೆ ದೇವರು ಇನ್ನಷ್ಟು ಸೇವೆ ಮಾಡಲು ಶಕ್ತಿ, ಆಯುಷ್ಯ, ಐಶ್ವರ್ಯ, ಅರೋಗ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
– ಶ್ರಮದಿಂದಲೇ ದುಡಿಮೆ ಜತೆಗೆ ಸಮಾಜ ಸೇವೆ..!
ರಾಮಕೃಷ್ಣ ವೈನ್ಸ್ ಎಂಬ ಉದ್ಯಮದ ಜತೆಗೆ ತಮ್ಮ ಕೈಯಲ್ಲಿ ಆದಷ್ಟು ಸೇವೆ ಮಾಡಿದ ಪಾಂಡುರಂಗಣ್ಣ ಲಯನ್ಸ್, ರೋಟರಿ ಸೇರಿ ನೂರಾರು ಸಮಾಜ ಸೇವಾ ಸಂಘ ಸಂಸ್ಥೆಗಳ ರೂವಾರಿ.
ಈಡಿಗ ಸಮುದಾಯದ ಪ್ರಭಾವಿ ನಾಯಕರು ಆಗಿರುವ ಪಾಂಡುರಂಗಪ್ಪ ಅವರು ಆರ್ಯ ಈಡಿಗ ಸಂಘ ತೀರ್ಥಹಳ್ಳಿ
ನಿರ್ದೇಶಕರು, ಶಿವಮೊಗ್ಗ ಬ್ರಹ್ಮಶ್ರೀ ನಾರಾಯಣ ಗುರು ಸಹಕಾರ ಸಂಘದ ನಿರ್ದೇಶಕರಾಗಿ, ಕವಲೆದುರ್ಗ ಸೊಸೈಟಿ ನಿರ್ದೇಶಕರು ಹಾಗೆಯೇ ರಾಮೇಶ್ವರ ದೇವಸ್ಥಾನದ ಭಕ್ತರು, ಲಯನ್ಸ್ ಆಜೀವ ಸದಸ್ಯರು. ನೂರಾರು ಸಂಘ ಸಂಸ್ಥೆಗಳ ಸದಸ್ಯರು.
– ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇರುವ ಏಕೈಕ ವ್ಯಕ್ತಿ..!!
ಹೊನ್ನಪ್ಪ ಹಾಗೂ ಶಾರದಮ್ಮ ರವರ ಮೊದಲನೇ ಪುತ್ರರಾದ ಇವರು ಅಬಕಾರಿ ಗುತ್ತಿಗೆದಾರರಾದ ಎಚ್. ಇ. ಎಬ್ರಾಹಿಂ ಸಾಹೇಬರ ಕಂಪನಿಯಲ್ಲಿ ಮ್ಯಾನೇಜರ್ ಅಗಿದ್ದರು. ತೀರ್ಥಹಳ್ಳಿ ಹಳ್ಳಿ ಹಳ್ಳಿಯಲ್ಲೂ ಚಿರಪರಿಚಿತರಾಗಿರುವ ಪಾಂಡುರಂಗಪ್ಪ ಸೌಮ್ಯ ಸ್ವಭಾವದ ಮಾನವೀಯ ನಾಯಕರು. ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ಎಲ್ಲರಿಗೂ ಪ್ರೀತಿ ತೋರುವ ವ್ಯಕ್ತಿತ್ವ.
ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಅನ್ನುವಲ್ಲಿ ಜನಿಸಿದ ಅವರು ತೀರ್ಥಹಳ್ಳಿಯನ್ನು ತನ್ನ ಕಾರ್ಯಕ್ಷೇತ್ರವಾಗಿಸಿಕೊಂಡವರು. 45 ವರ್ಷಗಳ ಹಿಂದೆ ಇಬ್ರಾಹಿಂ ಸಾಹೇಬರ ಜೊತೆಗೆ ಅಂದಿನ ಸಾರಾಯಿ ವ್ಯಾಪಾರದಲ್ಲಿದ್ದು ಏಳು ಬೀಳು ನಡುವೆ ಕೂಡ ಎಂದು ಸಮಾಜಕ್ಕೆ ತನ್ನ ಸೇವೆ ನಿಲ್ಲಿಸಿಲ್ಲ. ಈ ಇಳಿ ವಯಸ್ಸಿನಲ್ಲಿ ಕೂಡ ತೀರ್ಥಹಳ್ಳಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮ, ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಏಕೈಕ ವ್ಯಕ್ತಿ.
ಮಕ್ಕಳು ಕೂಡ ತಂದೆಯ ಹಾದಿಯಲ್ಲಿ ಸೇವೆ
ಲಯನ್ಸ್ ಪಾಂಡುರಂಗಪ್ಪ ಅವರ ಸಾಮಾಜಿಕ ಸೇವಾ ಕೆಲಸವನ್ನು ಅವರ ಮಕ್ಕಳು ಕೂಡ ಮುಂದುವರಿಸುತ್ತಿದ್ದಾರೆ. ಇವರಿಗೆ 4 ಜನ ಮಕ್ಕಳು. ತೀರ್ಥಹಳ್ಳಿಯಲ್ಲಿ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯಲ್ಲಿರುವ ಉದ್ಯಮಿ ವಿಶಾಲಕುಮಾರ್, ದಂತ ವೈದ್ಯ ಡಾ.ರೋಹಿತ್, ಇಂಜಿನಿಯರ್ ರೇವಂತ್, ಮಗಳು ಉಷಾ, ಪತ್ನಿ ವೈಷ್ಣವಿ ರಂಗನಾಥ್, ಮೊಮ್ಮಕ್ಕಳು ಹಾಗೂ ಇದ್ದಾರೆ. ಸುರಾನಿಯಲ್ಲಿ ನಿವಾಸದಲ್ಲಿ ನೆಲೆಸಿದ್ದಾರೆ.
ಜನ್ಮ ದಿನದ ಶುಭಾಶಯಗಳು
