* ಕುಂದಾಪುರ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
* ಉಡುಪಿ: ಬ್ರಹ್ಮಾವರ: ಅಕ್ರಮ ಮರಳು ಸಾಗಾಟ; ಪ್ರಕರಣ ದಾಖಲು
* ಪುತ್ತೂರು: ಭಾರತ್ ಆ್ಯಂಬುಲೆನ್ಸ್ ಲೋಕಾರ್ಪಣೆ
* ಮಂಗಳೂರು: ಚಾಲಕನಿಲ್ಲದ ಕಾರಿನಲ್ಲಿ ಸಂಚರಿಸಿದ ಯು ಟಿ ಖಾದರ್
* ಭಟ್ಕಳ: ಜಾಲಿ ಕಡಲ ತೀರದಿಂದ ನಾಲ್ವರು ಮೀನುಗಾರರು ನಾಪತ್ತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಕುಂದಾಪುರ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಕುಂದಾಪುರ: ಕಾಸರಗೋಡು ಮೂಲದ ಫಾರೂಕ್ ಎಂಬ ಆರೋಪಿಯ ವಿರುದ್ಧ ಎಲ್. ಪಿ.ಸಿ ವಾರೆಂಟ್ ಜಾರಿಗೊಳಿಸಲಾಗಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ 2004 ರಿಂದ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಹಾಜರಾಗದೆ ತಲೆಮರಿಸಿಕೊಂಡಿದ್ದ. ಇದೀಗ ಫಾರೂಕ್ ನನ್ನು ವಿಶೇಷ ಪೊಲೀಸರ ತಂಡವೊಂದು ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಬಂಧಿಸಿ, ಉಡುಪಿಗೆ ಕರೆತರಲಾಗಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.
* ಉಡುಪಿ: ಬ್ರಹ್ಮಾವರ: ಅಕ್ರಮ ಮರಳು ಸಾಗಾಟ; ಪ್ರಕರಣ ದಾಖಲು.
ಉಡುಪಿ: ಬ್ರಹ್ಮಾವರ: ಪ್ರಶಾಂತ್ ಕುಮಾರ್ ಎಂಬ ವ್ಯಕ್ತಿಯು ಮರಳನ್ನು ಟಿಪ್ಪರ್ ನಲ್ಲಿ ತುಂಬಿಸಿಕೊಂಡು, ಬ್ರಹ್ಮಾವರದ ಕಡೆಯಿಂದ ನಿಟ್ಟೂರಿನೆಡೆಗೆ ತೆರಳುತ್ತಿದ್ದನು. ಬ್ರಹ್ಮಾವರದ ಅಮ್ಮುಂಜೆ ಬಳಿಯ ಸರಕಾರಿ ಜಾಗದಲ್ಲಿ ರಾಶಿ ಹಾಕಿದ್ದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನು ಎಂಬ ಸಂಗತಿ ತಿಳಿದು ಬಂದಿದೆ. ಟಿಪ್ಪರ್ ನಲ್ಲಿ 1.5 ಯೂನಿಟ್ ನಷ್ಟು ಮರಳಿತ್ತು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಪುತ್ತೂರು: ಭಾರತ್ ಆ್ಯಂಬುಲೆನ್ಸ್ ಲೋಕಾರ್ಪಣೆ
ಪುತ್ತೂರು: ನೆಲ್ಯಾಡಿ ಪ್ರದೇಶದಲ್ಲಿ ಭಾರತ್ ಆ್ಯಂಬುಲೆನ್ಸ್ ಬುಧವಾರದಂದು ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಆ್ಯಂಬುಲೆನ್ಸ್ ನ ಮಾಲೀಕರಾದ ಅಬ್ದುಲ್ ಸಲಾಂ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ವರ್ಗೀಸ್, ದಿವಾಕರ್ ಗೌಡ ಶಿರಾಡಿ, ಉದನೆ ಸೆಂಟ್ ಥಾಮಸ್ ಫೊರೇನ್ ಚರ್ಚ್ ನ ಫಾದರ್ ಸಿಬಿ ಥಾಮಸ್ ಪಣಿಚಿಕ್ಕಲ್, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ, ಬ್ಯಾಂಕ್ ಆಫ್ ಬರೋಡ ಉದನೆ ಶಾಖೆಯ ಮ್ಯಾನೇಜರ್, ಸಿಬ್ಬಂದಿಗಳು, ಶಿರಾಡಿ ಗ್ರಾಮ ಪಂಚಾಯಿತಿ ಸದಸ್ಯರು, ಉದನೆ ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿಗಳು, ಆಟೋ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
* ಮಂಗಳೂರು: ಚಾಲಕನಿಲ್ಲದ ಕಾರಿನಲ್ಲಿ ಸಂಚರಿಸಿದ ಯು ಟಿ ಖಾದರ್
ಮಂಗಳೂರು: ಅಮೆರಿಕಾದ ಬೋಸ್ಟನ್ ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಭಾಧ್ಯಕ್ಷರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿರುವ ಕರ್ನಾಟಕದ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ಚಾಲಕನಿಲ್ಲದ ಕಾರಿನಲ್ಲಿ ಸಂಚರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಾಲಕನಿಲ್ಲದೆ ಕಾರು ಎಲೆಕ್ಟ್ರಿಕ್ ಸಹಾಯದಿಂದ ಸಂಚರಿಸುವ ಸಂಗತಿಯನ್ನು ಎಲ್ಲರೂ ಕೇಳಿದ್ದಾರೆ. ಅಂತಹ ಕಾರಿನಲ್ಲಿ ಸಭಾಧ್ಯಕ್ಷರು ಅಮೇರಿಕಾದಲ್ಲಿ ಸಂಚಾರ ನಡೆಸುತ್ತಿರುವ ಸುದ್ಧಿ ವ್ಯಾಪಕವಾಗಿ ಹರಡಿದೆ.
* ಭಟ್ಕಳ: ಜಾಲಿ ಕಡಲ ತೀರದಿಂದ ನಾಲ್ವರು ಮೀನುಗಾರರು ನಾಪತ್ತೆ
ಭಟ್ಕಳ: ಸಾಂಪ್ರದಾಯಿಕ ದೋಣಿಯಲ್ಲಿ ಬುಧವಾರದಂದು ನಾಲ್ವರು ಮೀನುಗಾರರು ಮೀನುಗಾರಿಕೆ ನಡೆಸಲು ತೆರಳಿದ್ದು, ಅಲೆಗಳ ರಭಸಕ್ಕೆ ಮೀನುಗಾರರಿದ್ದ ದೋಣಿ ಮುಗುಚಿ ಬಿದ್ದಿದ್ದು, ಅಲೆಗಳ ಮೇಲೆ ತೇಲಿಕೊಂಡು, ದಡಕ್ಕೆ ಬಂದು ತಲುಪಿದೆ. ಆದರೆ ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಸಮುದ್ರದ ಅಲೆಗಳಿಗೆ ಸಿಲುಕಿ ಮೀನುಗಾರರು ಕಣ್ಮರೆಯಾಗಿರಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ದೋಣಿಯಲ್ಲಿ ಆರು ಜನ ಮೀನುಗಾರಿಕೆಗೆ ತೆರಳಿದ್ದು ಅದರಲ್ಲಿ ಇಬ್ಬರು ಅಲೆಗಳ ರಭಸದ ನಡುವೆಯೇ ಈಜಿಕೊಂಡು ದಡವನ್ನು ಸೇರಿದ್ದಾರೆ. ಜಾಲಿ ಕಡಲ ತೀರಕ್ಕೆ ಭೇಟಿ ನೀಡಿದ ಪೊಲೀಸರು, ರಾಮಕೃಷ್ಣ ಮೊಗೇರ, ಸತೀಶ್ ಮೊಗೇರ, ಗಣೇಶ್ ಮೊಗೇರ ಮತ್ತು ನಿಶ್ಚಿತ್ ಮೊಗೇರ ಎನ್ನುವವರು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.