Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಇಂದು ಸ್ಪೀಕರ್ ಯು.ಟಿ.ಖಾದರ್ ಭೇಟಿ!

ತೀರ್ಥಹಳ್ಳಿಗೆ ಇಂದು ಸ್ಪೀಕರ್ ಯು.ಟಿ.ಖಾದರ್ ಭೇಟಿ!
– ಎಲೆ ಚುಕ್ಕಿ ಪೀಡಿತ ತೋಟಗಳ ವೀಕ್ಷಣೆ: ರೈತರ ಜತೆ ಚರ್ಚೆ
– ತೀರ್ಥಹಳ್ಳಿ ಹಲವು ಸಮಸ್ಯೆಗಳಿಗೆ ಸ್ಪಂದನೆ ಸಾಧ್ಯತೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ವಿಧಾನಸಭಾ ಅಧ್ಯಕ್ಷ, ಸ್ಪೀಕರ್ ಯು ಟಿ ಖಾದರ್ ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 21ರ ಸಂಜೆ ನಾಲ್ಕು ಗಂಟೆಗೆ ಆಗುಂಬೆ ಭೇಟಿ ನೀಡಿ ಅಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆಯಲಿದ್ದಾರೆ. ಅಲ್ಲೇ ಇರುವ ಅನಾಥಾಶ್ರಮ ಭೇಟಿ ಬಳಿಕ, ಗುಡ್ಡೆ ಕೇರಿ ಪ್ರೌಢಶಾಲೆಗೆ ಭೇಟಿ ನೀಡಲಿದ್ದಾರೆ.
ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾಲೆಯ ಮಕ್ಕಳ ಜೊತೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಎಪಿಎಂಸಿ ಮಾಜಿ ನಿರ್ದೇಶಕ ರೈತ ಮುಖಂಡ ಮಹಾಬಲೇಶ್ ಹಸಿರು ಮನೆ ಅವರ ಮನೆಗೆ ಭೇಟಿ ನೀಡಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ರೈತ ಮುಖಂಡರು ಹಾಗೂ ಸ್ಥಳೀಯರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಮಲೆನಾಡ ಎಲೆಚುಕ್ಕಿ ಪೀಡಿತ ತೋಟ ವೀಕ್ಷಣೆ

ಮಲೆನಾಡಿನಲ್ಲಿ ಕಾಡುತ್ತಿರುವ ಎಲೆಚುಕ್ಕಿ ರೋಗದ ಸಂಬಂಧಪಟ್ಟ ರೋಗ ಪೀಡಿತ ತೋಟವನ್ನು ಕಲ್ಕೋಡು ಹಸಿರು ಮನೆ ಬಾಗದ ತೋಟಗಳನ್ನ ವೀಕ್ಷಣೆ ಮಾಡಲಿದ್ದಾರೆ. ಬಳಿಕ ಅವರು ಶಿವಮೊಗ್ಗ ಮಾರ್ಗವಾಗಿ ಬೆಂಗಳೂರು ಪ್ರವಾಸ ಮಾಡಲಿದ್ದಾರೆ. ಈಗಾಗಲೇ ಯು ಟಿ ಖಾದರ್ ಅವರ ಭೇಟಿಗೆ ಸಿದ್ಧತೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.