Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹುಲಿವೇಷ ಸ್ಪರ್ಧೆ ರಂಗು..!

ತೀರ್ಥಹಳ್ಳಿಯಲ್ಲಿ ಹುಲಿವೇಷ ಸ್ಪರ್ಧೆ ರಂಗು..!
– ಅ.24 ರಂದು ರಾತ್ರಿ ತೀರ್ಥಹಳ್ಳಿಯಲ್ಲಿ ಹುಲಿಗಳ ಸಮಾಗಮ
– ಆರ್. ಮದನ್ ಗೌಡ ಅಭಿಮಾನಿ ಬಳಗದಿಂದ ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಅಂಗವಾಗಿ ವಿಶೇಷವಾದಂತಹ ಕಾರ್ಯಕ್ರಮಗಳು ಈಗಾಗಲೇ ಭರದಿಂದ ಸಾಗಿವೆ. ಈ ನಡುವೆ ಅಕ್ಟೋಬರ್ 24ರಂದು ರಾತ್ರಿ ತೀರ್ಥಹಳ್ಳಿ, ಕುಶಾವತಿ ಪಾರ್ಕಿನಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಯುವ ನಾಯಕ ಆರ್. ಮದನ್ ಅವರ ನೇತೃತ್ವದಲ್ಲಿ ಆರ್. ಮದನ್ ಅಭಿಮಾನಿ ಬಳಗ ಹಾಗೂ ದಸರಾ ಸಮಿತಿ ವತಿಯಿಂದ ಹುಲಿ ವೇಷ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆ ಈಗಾಗಲೇ ಕಳೆದ ದಶಕಗಳಿಂದ ನಡೆದುಕೊಂಡು ಬಂದಿದ್ದು, ಅತ್ಯುತ್ತಮ ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ ಹುಲಿ ವೇಷ ಸ್ಪರ್ಧೆಯಲ್ಲಿ ವಿವಿಧ ಹುಲಿ ವೇಷಧಾರಿಗಳು ತಮ್ಮ ಅತ್ಯದ್ಭುತ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಮದನ್ ಅವರು ಸ್ವಾಗತಿಸಿದ್ದಾರೆ.
ದಸರಾ ಸಮಿತಿ ಹಾಗೂ ತೀರ್ಥಹಳ್ಳಿಯ ಸಮಸ್ತ ಜನತೆಯ ಸಹಕಾರದೊಂದಿಗೆ ಆರ್ ಮದನ್ ಅವರ ಪ್ರಾಯೋಜಕತ್ವದೊಂದಿಗೆ ಹುಲಿವೇಷ ಸ್ಪರ್ಧೆ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಅತ್ಯಂತ ರಂಗುಬರಿತ ಸ್ಪರ್ಧೆ ಇದಾಗಿದ್ದು, ಸರ್ವರನ್ನು ಸ್ವಾಗತಿಸಲಾಗಿದೆ ಹಾಗೂ ಹುಲಿವೇಷಧಾರಿಗಳಿಗೆ ವಿಶೇಷವಾದ ಬಹುಮಾನಗಳನ್ನು ನೀಡಲಾಗುತ್ತಿದೆ.

ದಿನಾಂಕ ಮತ್ತು ಸ್ಥಳ

ದಿನಾಂಕ :24-10-2023. ರಾತ್ರಿ 8-00 ಗಂಟೆಗೆ
ಸ್ಥಳ : ನೆಹರೂ ಉದ್ಯಾನವನ, ಕುಶಾವತಿ, ತೀರ್ಥಹಳ್ಳಿ

ಬಹುಮಾನ ಮತ್ತು ಪ್ರೋತ್ಸಾಹ ಧನ

ಪ್ರಥಮ ಬಹುಮಾನ : ನಗದು 20,000/-
ದ್ವಿತೀಯ ಬಹುಮಾನ:12,500/-
ತೃತಿಯ ಬಹುಮಾನ :7,500/-
ವೇಷ ಹಾಕುವ ಪ್ರತಿಯೊಬ್ಬ ಕಲಾವಿದರಿಗೂ ತಲಾ ರೂ 5000/- ಪ್ರೋತ್ಸಾಹ
ಮೊದಲ 10 ಮಂದಿ ಹುಲಿ ವೇಷಧಾರಿಗಳಿಗೆ ಬಣ್ಣದ ಸಂಪೂರ್ಣ ಖರ್ಚು ನೀಡಲಾಗುವುದು
ಹುಲಿವೇಷದ ತಾಸ ವಾದ್ಯದವರಿಗೆ ಪ್ರತಿಯೊಬ್ಬರಿಗೂ ರೂ 1000/- ಪ್ರೋತ್ಸಾಹ ಧನ ನೀಡಲಾಗುವುದು.

ಸರ್ವರಿಗೂ ಆದರದ ಸ್ವಾಗತ

ಆರ್. ಮದನ್ ಗೌಡ ಅಭಿಮಾನಿಗಳ ಬಳಗ ತೀರ್ಥಹಳ್ಳಿ

ಹುಲಿವೇಷ ನೋಂದಣಿಗೆ ಕೊನೆ ದಿನ: ಅ.22, ಭಾನುವಾರ.

ಅಕ್ಟೋಬರ್ 24ರಂದು ಸಂಜೆ 7-50 ಗಂಟೆಗೆ ಕಡ್ಡಾಯವಾಗಿ ಸ್ಪರ್ಧಾ ಸ್ಥಳದಲ್ಲಿ ಹಾಜರಿರಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
ಹೆಸರು ನೊಂದಣಿಗೆ ಮಹೇಶ್‌ಗೌಡ-9448438450. ಅಮರನಾಥ ಶೆಟ್ಟಿ-9663569448,
ಸುರೇಂದ್ರ-9449884407, ಪ್ರಶೋಧ -9880549451, ಸುಮಂತ್-9731094131 ಇವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.