Categories
ತೀರ್ಥಹಳ್ಳಿ

ಅಂಗಡಿಗಳಲ್ಲಿ ಪಟಾಕಿ ಇಡುವಂಗಿಲ್ಲ!

ಅಂಗಡಿಗಳಲ್ಲಿ ಪಟಾಕಿ ಇಡುವಂಗಿಲ್ಲ!
– ತೀರ್ಥಹಳ್ಳಿ ಪೊಲೀಸ್ ಇಲಾಖೆ ಹೇಳಿದ್ದೇನು..?
– ಲೈಸೆನ್ಸ್ ಇಲ್ಲದೆ ಮಾರಾಟ ಮಾಡುವವರ ಮೇಲೆ ಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಪಟಾಕಿಗಳನ್ನು ಯಾವುದೇ ಸಾಮಾನ್ಯ ಅಂಗಡಿಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ತರಹದಲ್ಲಿ ಲೈಸೆನ್ಸ್ ಇಲ್ಲದೆ ಮಾರಾಟ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಥಹಳ್ಳಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಅಧಿಕೃತ ಲೈಸೆನ್ಸ್ ಹೊಂದಿರುವವರು ಕೇವಲ ಗ್ರೀನ್ ಪಟಾಕಿಗಳನ್ನು ಮಾತ್ರ ಅನುಮತಿ ಪಡೆದು ಮಾರಾಟ ಮಾಡಲು ಅವಕಾಶ ಇರುತ್ತದೆ. ಉಳಿದಂತೆ ಯಾರೇ ಆಗಲಿ ಪಟಾಕಿಗಳನ್ನು ಮಾರುವುದು ಶೇಖರಿಸಿಡುವುದು, ಸಾಗಿಸುವುದು ಮಾಡಿದಲ್ಲಿ ಉಗ್ರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಥಹಳ್ಳಿ ಪೊಲೀಸ್ ಠಾಣೆ ಹಾಗೂ ಮಾಳೂರು ವೃತ್ತದ ಪೊಲೀಸ್ ನಿರೀಕ್ಷಕರಾದ ಅಶ್ವತ್ಥ ಗೌಡ. ಜೆ ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.