Categories
ತೀರ್ಥಹಳ್ಳಿ

ಕಾಲೇಜಿಗೆ ವಿದ್ಯಾರ್ಥಿಗಳ ಚಕ್ಕರ್: ಹುಡುಕಿ ತರಗತಿಗೆ ಕರೆದುಕೊಂಡು ಹೋದ ಪ್ರಿನ್ಸಿಪಾಲ್!

ಕಾಲೇಜಿಗೆ ವಿದ್ಯಾರ್ಥಿಗಳ ಚಕ್ಕರ್: ಹುಡುಕಿ ತರಗತಿಗೆ ಕರೆದುಕೊಂಡು ಹೋದ ಪ್ರಿನ್ಸಿಪಾಲ್!
– ತೀರ್ಥಹಳ್ಳಿ ಬಸ್ ಸ್ಟಾಂಡ್ ಸುತ್ತಮುತ್ತ ಕದ್ದು ಕುಳಿತ ವಿದ್ಯಾರ್ಥಿ ವಿದ್ಯಾರ್ಥಿನಿಯರು
– ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಗಮನಿಸಿ..ಇಲ್ದಿದ್ರೆ ಕಷ್ಟ ಕಷ್ಟ!

NAMMUR EXPRESS NEWS
ತೀರ್ಥಹಳ್ಳಿ: ಶಾಲಾ / ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿರುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆ ಅಥವಾ ಕಾಲೇಜಿಗೆ ಹಾಜರಾಗದೆ ಬಸ್ ನಿಲ್ದಾಣದಲ್ಲಿ ಹಾಗೂ ಎಲ್ಲೆಂದರಲ್ಲಿ ಸುಖಾ ಸುಮ್ಮನೆ ಕಾಲಹರಣ ಮಾಡುತ್ತಿರುವ ಬಗ್ಗೆ ಇದೀಗ ಭಾರೀ ಚರ್ಚೆ ಆಗುತ್ತಿದೆ.
ಬಸ್ ಸ್ಟಾಂಡ್, ಪಾರ್ಕ್, ಬೇಕರಿ, ಕೆಫೆಗಳಲ್ಲಿ ದಿನವಿಡೀ ಕಳೆಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮನೆಯಲ್ಲಿ ಕಾಲೇಜಿಗೆ ಬರುವುದಾಗಿ ಹೇಳಿ ಕಾಲೇಜಿಗೆ ಹೋಗದೆ ಇರುವ ಬಗ್ಗೆ ಪ್ರತಿ ದಿನ ದೂರು ಬರುತ್ತಿವೆ.
ಮೊಬೈಲ್ ಅಲ್ಲಿ ಗೇಮ್, ರೀಲ್ಸ್ ಹುಚ್ಚಿಗೆ ಕಾಲೇಜಿಗೆ ಹೋಗದೆ ಬಸ್ ಸ್ಟಾಂಡ್ ಬಳಿ ಸಂಜೆವರೆಗೆ ಕುಳಿತು ಮನೆಗೆ ಹೋಗುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅನೇಕರು ಪೊಲೀಸ್ ಇಲಾಖೆಗೂ ದೂರು ನೀಡಿದ್ದರು.

ಕಾರ್ಯಚರಣೆಗೆ ಇಳಿದ ಪ್ರಿನ್ಸಿಪಾಲ್ ಮೇಡಂ!

ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ( ಜ್ಯೂನಿಯರ್) ಕಾಲೇಜಿನ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗದೆ ಬಸ್ ಸ್ಟಾಂಡ್ ಸುತ್ತಮುತ್ತ ಕುಳಿತ ಬಗ್ಗೆ ದೂರು ಹಿನ್ನೆಲೆಯಲ್ಲಿ ಪ್ರಿನ್ಸಿಪಾಲರಾದ ಪ್ರೊ. ಸುಧಾ ಅವರು ಖುದ್ದಾಗಿ ತಮ್ಮ ಸಿಬ್ಬಂದಿ ಜತೆ ಬಸ್ ಸ್ಟಾಂಡ್ ಬಂದು ಪರಿಶೀಲಿಸಿ ಕೆಲ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಪೋಷಕರಿಗೂ ವಿಷಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಗಮನಿಸಿ!

ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಬಗ್ಗೆ ಆಗಾಗ್ಗೆ ಕಾಲೇಜು, ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವುದು ಒಳಿತು. ಇಲ್ಲವಾದಲ್ಲಿ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಹೆಚ್ಚಿದೆ. ಅತಿಯಾದ ಮೊಬೈಲ್ ಬಳಕೆ, ರೀಲ್ಸ್ ಚಟ ಕೂಡ ಬದುಕನ್ನು ಹಾಳು ಮಾಡಲಿದೆ.

ಪೊಲೀಸರು ಅಲರ್ಟ್ ಆಗಬೇಕಿದೆ!

ಕಾಲೇಜು ಹಾಗೂ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮನೆಯಿಂದ ನೇರವಾಗಿ ಶಾಲೆಗೆ / ಕಾಲೇಜಿಗೆ ಬಂದು ಕಾಲೇಜು ಬಿಟ್ಟ ನಂತರ ಪಟ್ಟಣದಲ್ಲಿ ಕಾಲ ಹರಣ ಮಾಡದೆ ನೇರವಾಗಿ ಮನೆಗೆ ತೆರಳುವಂತೆ ಹಾಗೂ ಶಾಲೆ, ಕಾಲೇಜುಗಳು ನಡೆಯುವ ಸಮಯದಲ್ಲಿ ತರಗತಿಗೆ ಗೈರು ಹಾಜರಾದಲ್ಲಿ ಈ ವಿಚಾರವನ್ನು ಗೈರು ಹಾಜರಾದ ಪೋಷಕರ ಮೊಬೈಲ್ ಗೆ ವಾಟ್ಸ್ ಆಪ್ / ಎಸ್.ಎಂ.ಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ನೀಡುವುದು ಆಡಳಿತ ಮಂಡಳಿಯ ಕರ್ತವ್ಯ. ಇನ್ನು ಪೊಲೀಸ್ ಇಲಾಖೆ ಕೂಡ ಎಚ್ಚರಿಕೆ ನೀಡಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.