ತೀರ್ಥಹಳ್ಳಿ ಟಾಪ್ 4 ನ್ಯೂಸ್
ಮುಳುಗಿದ ರಾಮ ಮಂಟಪ: ಮಳೆ ಕೊಂಚ ಕಡಿಮೆ!
– ಬೆಜ್ಜವಳ್ಳಿ ಬಳಿ ಅಪಘಾತಕ್ಕೆ ಓರ್ವ ಬಲಿ
– ಮಂಜುನಾಥ ಗೌಡರ ಭೇಟಿ ಮಾಡಿದ ನಾರಾಯಣ ಗುರು ಮಠದ ಶ್ರೀ
– ಆರ್. ಎಂ ಸಹಕಾರ ಕೋರಿದ ನೂತನ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಸಹಕಾರ ನಾಯಕ ಡಾ.ಆರ್.ಎಂ.ಮಂಜುನಾಥ್ ಗೌಡರ ಕರಕುಚ್ಚಿಯ ನಿವಾಸಕ್ಕೆ ಗರ್ತಿಕೆರೆ ನಿಟ್ಟೂರು ಬ್ರಹ್ಮಶ್ರೀ ನಾರಾಯಣ ಗುರು ಮಠದ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರು ಆಗಮಿಸಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಇತ್ತೀಚಿನ ವಿದ್ಯಮಾನಗಳಿಂದ ಯಾವುದೇ ಕಾರಣಕ್ಕೂ ನೀವು ಎದೆಗುಂದಬೇಡಿ. ಮುಂದೆ ಕೂಡ ನಿಮ್ಮ ಜನಪರ ಕೆಲಸಗಳನ್ನ ಮುಂದುವರೆಸಿಕೊಂಡು ಹೋಗಿ ಎಂದು ಆಶೀರ್ವದಿಸಿದರು. ಸ್ವತಃ ಗುರುಗಳೇ ನಮ್ಮ ನಿವಾಸಕ್ಕೆ ಆಗಮಿಸಿ, ಧೈರ್ಯದ ನುಡಿಗಳೊಂದಿಗೆ ಆಶೀರ್ವಾದ ಮಾಡಿದ್ದು, ಮಂಜುನಾಥ ಗೌಡ ಕುಟುಂಬ ಅವರಿಗೆ ಸತ್ಕಾರ ಮಾಡಿದರು. ಮಠದ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತಿ ಇದ್ದರು
ಆರ್. ಎಂ. ಭೇಟಿ ಮಾಡಿದ ಶ್ವೇತಾ ರಾಮಚಂದ್ರ
ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ವೇತಾ ರಾಮಚಂದ್ರ ಬಂಡಿ ಅವರು ಸಹಕಾರ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡರನ್ನು ಭೇಟಿ ಮಾಡಿ ಸಹಕಾರ ಕೋರಿದರು.
ಬೆಜ್ಜವಳ್ಳಿ: ಸ್ಕೂಟಿ ಹಾಗೂ ಬಸ್ ಆಕ್ಸಿಡೆಂಟ್
– ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು
ತೀರ್ಥಹಳ್ಳಿ : ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಹಿಂಭಾಗದಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಬೆಜ್ಜವಳ್ಳಿ ಸಮೀಪ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಿಂದ ದಾನಸಾಲೆಗೆ ಹೋಗುತ್ತಿದ್ದ ಅಬ್ದುಲ್ ರೆಹಮಾನ್ (44 ವರ್ಷ ) ಎಂಬುವರಿಗೆ ಸಮಕಾನಿ ದೇವಸ್ಥಾನ ಬಳಿ ಪ್ರವಾಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಅಬ್ದುಲ್ ರೆಹಮಾನ್ ಮೃತಪಟ್ಟಿದ್ದಾರೆ.
ತೀರ್ಥಹಳ್ಳಿಯ ಜಯ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿಯಲ್ಲಿ ಮುಳುಗಿದ ರಾಮಮಂಟಪ!
ತೀರ್ಥಹಳ್ಳಿಯಲ್ಲಿ ತುಂಗಾ ನದಿ ಮುಳುಗಡೆ ಆಗಿದೆ. ಎರಡು ದಿನದಿಂದ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ಆದರೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ತೀರ್ಥಹಳ್ಳಿಯಲ್ಲಿ ರಾಮ ಮಂಟಪ ಮುಳುಗಡೆ ಆಗಿದೆ. ತೀರ್ಥಹಳ್ಳಿ ಭಾಗದಲ್ಲಿ ವ್ಯಾಪಕವಾಗಿ ಸುರಿಯುತ್ತಿದ ಮಳೆಗೆ ತುಂಗಾ ನದಿ ನೀರಿನ ಹರಿವು ಹೆಚ್ಚಾಗಿದೆ. ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಜುಲೈ 3-4 ದಿನ ಶುರುವಾಗಿರುವ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಒಂದು ಕಡೆ ಜನ ಮನೆಯಿಂದ ಹೊರ ಬಾರದೆ ಪರದಾಟ ನಡೆಸುತ್ತಿದ್ದಾರೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಪುರಾಣ ಪ್ರಸಿದ್ದ ರಾಮ ಮಂಟಪ ಮುಳುಗಿದೆ. ತುಂಗಾ ನದಿ ನೀರಿನ ಪ್ರಮಾಣ ಭಾರೀ ಏರಿಕೆ ಕಂಡಿದೆ.
