Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಯಂತ್ರಶ್ರೀ ನಾಟಿ ಉದ್ಘಾಟನೆ!

ತೀರ್ಥಹಳ್ಳಿಯಲ್ಲಿ ಯಂತ್ರಶ್ರೀ ನಾಟಿ ಉದ್ಘಾಟನೆ!
– ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಂತುಗದ್ದೆ ಬಸವಣ್ಣನವರ ಮನೆಯಲ್ಲಿ ಶುರು
– ಮಾದರಿ ರೈತ ನಾಗೇಶ್ ಅವರಿಗೆ ಅಧಿಕಾರಿಗಳ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಕಾರ್ಯಕ್ಷೇತ್ರದ ಕಂತುಗದ್ದೆ ಬಸವಣ್ಣನವರ ಮನೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ನಾಟಿ ಉದ್ಘಾಟನೆ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುಮಾರಿ ಸಮನ್ವಿ ಅವರು ಪ್ರಾರ್ಥನೆ ಮಾಡಿದರು ಈ ವರ್ಷದ ಮೊದಲ ನಾಟಿ ಕಾರ್ಯಕ್ರಮವನ್ನು ತೀರ್ಥಹಳ್ಳಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಮಮತಾ ಶೆಟ್ಟಿ ಅವರು ಉದ್ಘಾಟನೆ ಮಾಡಿ ಪ್ರಾಸ್ತವಿಕವಾಗಿ ಮಾತನಾಡಿ, ಯಂತ್ರಶ್ರೀ ಬೆಳೆ ಮಾಡಲಿಕ್ಕೆ ಮುಂದೆ ಬರಬೇಕು. ಈಗಿನ ಸಮಯದಲ್ಲಿ ಭತ್ತದ ನಾಟಿ ಮಾಡಲಿಕ್ಕೆ ಕೂಲಿ ಆಳುಗಳ ಕೊರತೆ ಇರುವದರಿಂದ ಎಲ್ಲಾ ರೈತರು ಯಾಂತ್ರಿಕೃತ ಭತ್ತ ನಾಟಿ ಮಾಡಲಿಕ್ಕೆ ಮುಂದೆ ಬರಬೇಕು. ಮೊದಲಿಗೆ ಶ್ರೀ ಪದ್ಧತಿ ಭತ್ತ ಬೇಸಾಯ ಮಾಡುತಿದ್ದರು ಇತ್ತೀಚಿಗೆ ನಾವು ಯಂತ್ರವನ್ನು ಪರಿಚಯ ಮಾಡಿದ್ದೂ ಎಲ್ಲರೂ ಯಂತ್ರ ನಾಟಿ ಮಾಡಿದರೆ ಉತ್ತಮ ಹಾಗೂ ಈ ವರ್ಷ ನಾಟಿ ಮಾಡಿದವರು ಉತ್ತಮ ಇಳುವರಿ ಬರಲಿ ಎಂದು ಶುಭ ಹಾರೈಸಿದರು.
ಕೃಷಿ ಯಂತ್ರ ಧಾರೆ ಮ್ಯಾನೇಜರ್ ಅಕ್ಷಯ್ ಕುಮಾರ್ ಜೈನ್ ತಾಂತ್ರಿಕವಾಗಿ ಮಾಹಿತಿ ನೀಡುತ್ತಾ ಯತ್ರಶ್ರೀ ಪದ್ಧತಿ ನಾಟಿ ಮಾಡಿದರೆ ಉತ್ತಮ ಇದರಲ್ಲಿ ಸಾಲಿನಿಂದ ಸಾಲಿಗೆ ಸಸಿ ಇಂದ ಸಸಿಗೆ ಸರಿಯಾದ ಅಂತರ ಇರುವುದರಿಂದ ಹಾಗೂ ಸ್ವಲ್ಪ ಮಟ್ಟಿನ ಸಸಿ ನಾಟಿ ಮಾಡುವದರಿಂದ ಭತ್ತದ ಬೆಳೆಗೆ ರೋಗ ಬಾಧೆ ಕಡಿಮೆ ಆಗುತ್ತದೆ. ಯಂತ್ರ ನಾಟಿ ಮಾಡಿ 15 ದಿನದೊಳಗೆ ಕೊನೊವೀಡರ್ ಬಳಸುವದರಿಂದ ಕಳೆ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ, ಇದರಲ್ಲಿ ಮಾನವನ ಚಾಲಿತ ಹಾಗೂ ಯಂತ್ರ ಚಾಲಿತ ಕೊನೊವೀಡರ್ ಲಭ್ಯವಿದ್ದು ರೈತರು ಯಾವ ಮಷಿನ್ ಆದ್ರೂ ಉಪಯೋಗ ಮಾಡಿ ಕಳೆ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು ಹಾಗೂ ಸಸಿಮಡಿ ತಯಾರಿ ಮಾಡಲು ಸಂಪ್ರದಾಯಕ ಭತ್ತದ ಬೆಳೆಗೆ ಅಗಡಿ ಗದ್ದೆ ಬೇಕಾಗುತ್ತದೆ. ಇದರಲ್ಲಿ ಮನೆಯ ಮುಂದೆ ಅಥವಾ ತಾರಸಿ ಮೇಲೆ ಟ್ರೈ ಗಳಲ್ಲಿ ಮಣ್ಣು ಹಾಕಿ ಸಸಿ ಬೆಳೆಯಬಹುದು. ಸಸಿಮಡಿ ಮಾಡುವಾಗ ಬೀಜೋಪಚಾರ ಮಾಡಿ ಮಾಡಿದರೆ ಉತ್ತಮ ಇದರಿಂದ ಭತ್ತದ ಸಸಿ ಚೆನ್ನಾಗಿ ಬರುತ್ತದೆ. ಜೊಳ್ಳು ಭತ್ತದ ಪ್ರಮಾಣ ಕಡಿಮೆ ಆಗುತ್ತದೆ ಎಂದು ಮಾಹಿತಿ ನೀಡಿದರು
ಈ ವರ್ಷದ ಮೊದಲ ನಾಟಿ ಮಾಡುವ ರೈತರಾದ ಬಸವಣ್ಣ ಅವರಿಗೆ ಯಂತ್ರಶ್ರೀ ಸಾಸಿಮಡಿ ಟ್ರೈ ಹಸ್ತಾಂತರವನ್ನು ವೇದಿಕೆಯ ಮೇಲಿದ್ದ ಯೋಜನಾಧಿಕಾರಿಗಳು ಮಮತಾ ಶೆಟ್ಟಿ, ಕಳೆದ ವರ್ಷ ನಾಟಿ ಮಾಡಿ ಉತ್ತಮ ಬೆಳೆಯನ್ನು ಬೆಳೆದ ಮಾದರಿ ರೈತರಾದ ನಾಗೇಶ್, ಕೆ, ಎಸ್ ನೆರವೇರಿಸಿದರು
ನಾಗೇಶ್ ಕೆ. ಎಸ್ ಮಾತನಾಡಿ ನಾನು ಕಳೆದ 2 ವರ್ಷಗಳಿಂದ ಯಂತ್ರಕೃತ ಬತ್ತದ ನಾಟಿ ಮಾಡುತ್ತಿದ್ದು ಉತ್ತಮ ಇಳುವರಿ ಬಂದಿದೆ. ಹುಲ್ಲಿನ ಪ್ರಮಾಣ ಕೂಡ ಜಾಸ್ತಿ ಆಗಿದೆ, ನಮ್ಮನ್ನು ನೋಡಿ ಈ ಭಾಗದಲ್ಲಿ ಹೊಸ ರೈತರು ನಾಟಿ ಮಾಡಲಿಕ್ಕೆ ಮುಂದೆ ಬಂದಿರುತ್ತಾರೆ. ಇದಕ್ಕೆ ಈಗಿನ ಕಾಲದಲ್ಲಿ ನಾಟಿ ಮಾಡಲಿಕ್ಕೆ ಆಳುಗಳ ಸಮಸ್ಯೆ ಇದೆ. ಆದರೆ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಈ ಭಾಗದಲ್ಲಿ ಅಧಿಕಾರಿಗಳಾದ ಯಂತ್ರ ಧಾರೆ ಮ್ಯಾನೇಜರ್ ಅಕ್ಷಯ್ ಕುಮಾರ್, ಹಾಗೂ ಕೃಷಿ ಮೇಲ್ವಿಚಾರಕರಾದ ರಾಕೇಶ್ ಪವಾರ್,ಸೇವಾಪ್ರತಿನಿಧಿ ಸುಜಾತಾ, ಹಿಂದಿನ ಯೋಜನಾಧಿಕಾರಿಗಳಾದ ಮಾಲತಿ ಅವರು, ಸಮಯಕ್ಕೆ ಸರಿಯಾಗಿ ನಮ್ಮೆಲ್ಲರ ಮನೆಗೆ ಬಂದು ನಮಗೆಲ್ಲ ಮಾಹಿತಿ ಕೊಟ್ಟು ನಾಟಿ ಮಾಡಲು ಪ್ರೇರಣೆ ಕೊಡುವುದಕ್ಕೆ ನಮಗೆ ಭತ್ತ ನಾಟಿ ಮಾಡಲು ಖುಷಿ ಆಗುತ್ತಿದೆ. ಒಟ್ಟಿನಲ್ಲಿ ಯೋಜನೆ ರೈತರಿಗೆ ಇಂತಹ ಯೋಜನೆಯನ್ನು ರೈತರಿಗೆ ಪರಿಚಯ ಮಾಡಿದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರಿಗೆ ಹೇಮಾವತಿ ಅಮ್ಮನವರಿಗೆ ರೈತರ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.
ತೀರ್ಥಹಳ್ಳಿ ತಾಲೂಕಿನ ಸೇವಾಪ್ರತಿನಿಧಿ ರವಿ ಕುಮಾರ್ ಅವರು ಮಾತನಾಡಿ, ಭಕ್ತಿ ಗೀತೆ ಹಾಡುವದರೊಂದಿಗೆ ವಂದನಾರ್ಪಣೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳು ಮಮತಾ ಶೆಟ್ಟಿ
CHSC ಮ್ಯಾನೇಜರ್ ಅಕ್ಷಯ್ ಕುಮಾರ್, ಕೃಷಿ ಮೇಲ್ವಿಚಾರಕರು ರಾಕೇಶ್ ಪವಾರ್, ಸೇವಾಪ್ರತಿನಿಧಿ ಸುಜಾತಾ, ರೈತರಾದ ನಾಗೇಶ್, ಕೆ ಎಸ್, ಸುಧಾಕರ್, ನಾಗರಾಜ್, ಈಶ್ವರ್, ಬಸವಣ್ಣ, ಸುರೇಶ್, ಮಂಜುನಾಥ್, ಉಮೇಶ್ ಕಂತು ಗದ್ದೆ, ಕೃಷ್ಣ ಅಗ್ರಗಾರ ರಮೇಶ್ ಕಂತುಗದ್ದೆ, ರವಿ ಸೇವಾಪ್ರತಿನಿಧಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.