ಸುಂದರೇಶ್ ಇನ್ನು ನೆನಪು ಮಾತ್ರ!
– ಸಾವಿರಾರು ಶಿಷ್ಯರ ನೆಚ್ಚಿನ ಮಾಸ್ಟ್ರು, ಅಪಾರ ವಲಯಕ್ಕೆ ಸ್ನೇಹಿತ
– ಬೆಳಿಗ್ಗೆ ತುಡ್ಕಿಯಲ್ಲಿ ಅಂತಿಮ ದರ್ಶನ, ಹುಟ್ಟೂರಲ್ಲಿ ಅಂತ್ಯಕ್ರಿಯೆ
– ಶಾಸಕ ಆರಗ, ಕಿಮ್ಮನೆ, ಆರ್. ಎಂ ಸೇರಿ ಸಾವಿರಾರು ಜನರ ಸಂತಾಪ
NAMMUR EXPRESS NEWS
ತೀರ್ಥಹಳ್ಳಿ: ಸಹ್ಯಾದ್ರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ, ಮಲ್ನಾಡ್ ಕ್ಲಬ್ ಅಧ್ಯಕ್ಷ ಸುಂದರೇಶ್ ಅವರ ನಿಧನಕ್ಕೆ ಅವರ ಸಾವಿರಾರು ಶಿಷ್ಯರು, ಸ್ನೇಹಿತರು, ಕುಟುಂಬದವರು ಸಂತಾಪ ವ್ಯಕ್ತಪಡಿಸಿದ್ದಾರೆ. ಪತ್ನಿ, ಇಬ್ಬರು ಮಕ್ಕಳು, ಅಪಾರ ಸ್ನೇಹಿತ ವಲಯವನ್ನು ಅವರು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಮೇಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು4:30ರ ವೇಳೆಗೆ ಮೃತಪಟ್ಟಿದ್ದಾರೆ. ಜೆ.ಟಿ.ಸುಂದರೇಶ್ ಇವರ ಪಾರ್ಥಿವ ಶರೀರವನ್ನು ತುಡ್ಕಿಯ ಸ್ವಗೃಹದಲ್ಲಿ ಇಡಲಾಗಿದ್ದು, ಬುಧವಾರ ಬೆಳಿಗ್ಗೆ 9.00 ಗಂಟೆಯವರೆಗೆ ಇಲ್ಲಿಯೇ ಬಂದುಗಳು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಅವರ ಪಾರ್ಥಿವ ಶರೀರವನ್ನು ತುಡ್ಕಿಯಿಂದ ಅವರ ಸ್ವಗ್ರಾಮವಾದ ಘಂಟೆಜನಗಲ್ ಅವರ ಮೂಲ ಮನೆಯಲ್ಲಿ ಬೆಳಿಗ್ಗೆ 11.30ಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು.
ಆರಗ ಸಂತಾಪ
ಸಹ್ಯಾದ್ರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ, ಮಲ್ನಾಡ್ ಕ್ಲಬ್ ಅಧ್ಯಕ್ಷ ಸುಂದರೇಶ್ ಅವರ ನಿಧನಕ್ಕೆ ಶಾಸಕ ಆರಗ ಜ್ಞಾನೇಂದ್ರ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ ಮಲ್ನಾಡ್ ಕ್ಲಬ್ನಲ್ಲಿ ಇತ್ತೀಚಿಗೆ ನಡೆದ ಅಡಿಕೆ ಬೆಳೆ ರೋಗಗಳ ಕುರಿತ ವಿಚಾರ ಸಂಕಿರಣದಲ್ಲಿ ಸುಮಾರು 2 ಘಂಟೆಗಳ ಕಾಲ ಅಕ್ಕ ಪಕ್ಕದಲ್ಲಿಯೇ ಕುಳಿತಿದ್ದ ಸುಂದರೇಶ್ ಇವತ್ತು ಇಲ್ಲ ಎನ್ನುವ ಸುದ್ದಿ ಕೇಳಿ ಆಘಾತವಾಯಿತು, ಸಹ್ಯಾದ್ರಿ ಪಾಲಿಟೆಕ್ನಿಕ್ ಕಟ್ಟುವಲ್ಲಿ ತಮ್ಮದೇ ಆದ ಮಹತ್ತರ ಪಾತ್ರ ವಹಿಸಿ ತೀರ್ಥಹಳ್ಳಿಯ ಸಾಮಾಜಿಕ ಬದುಕಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ, ಆರೋಗ್ಯವಾಗಿಯೇ ಇದ್ದ ಸುಂದರೇಶ ಅವರ ಅಕಾಲಿಕ ಮರಣ ಸಮಾಜಕ್ಕೆ ಆದ ನಷ್ಟ ಎಂದು ಶಾಸಕರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತೀರ್ಥಹಳ್ಳಿಯ ಎಲ್ಲಾ ಗಣ್ಯರ ಸಂತಾಪ
ತೀರ್ಥಹಳ್ಳಿಯ ಪ್ರಮುಖ ಮುಖಂಡರಾದ ಕಿಮ್ಮನೆ ರತ್ನಾಕರ್, ಮಂಜುನಾಥ ಗೌಡ, ಮದನ್, ಬಸವಾನಿ ವಿಜಯದೇವ್ ಸೇರಿ ಎಲ್ಲರೂ ಸಂತಾಪ ಸೂಚಿಸಿದ್ದಾರೆ.
ನೂರಾರು ಮಂದಿ ಶಿಷ್ಯರ ಅಂತಿಮ ನಮನ
ಸಹ್ಯಾದ್ರಿ ಪಾಲಿಟೆಕ್ನಿಕ್ ಅಲ್ಲಿ ಪ್ರಿನ್ಸಿಪಾಲರಾಗಿ ತಮ್ಮ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.
