ತೀರ್ಥಹಳ್ಳಿ ಈಡಿಗರ ಸಂಘದಲ್ಲಿ ಭಾನುವಾರ ಚುನಾವಣೆ!
– 21 ಸ್ಥಾನಕ್ಕೆ 41 ಮಂದಿ ನಾಮಪತ್ರ: 39 ಮಂದಿ ಕಣದಲ್ಲಿ
– ಆಗುಂಬೆ ಹೋಬಳಿಯಲ್ಲಿ ಅವಿರೋಧ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಈಡಿಗರ ಸಂಘಕ್ಕೆ ಜನವರಿ 28ರಂದು ಆಡಳಿತ ಮಂಡಳಿ ಚುನಾವಣೆ ನಿಗದಿಯಾಗಿದೆ. ಈಗಾಗಲೇ ಚುನಾವಣೆ ಪ್ರಚಾರ ಅಂತಿಮ ಹಂತಕ್ಕೆ ತಲುಪಿದೆ. ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಬಳಿಕ ಫಲಿತಾಂಶ ಘೋಷಣೆ ಆಗಲಿದೆ.
ಭಾರೀ ಪೈಪೋಟಿ: ಹಿರಿಯರು, ಕಿರಿಯರ ಸ್ಪರ್ಧೆ!
ಕಳೆದ 5 ವರ್ಷ ಅವಧಿಗೆ ಮಟ್ಟಿನಮನೆ ರಾಮಚಂದ್ರ ನೇತೃತ್ವದ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಿತ್ತು. ಇದೀಗ ಹೊಸ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಅಂತಿಮ ತಯಾರಿ ನಡೆಯುತ್ತಿದೆ.
ಆಗುಂಬೆ ಹೋಬಳಿಯಲ್ಲಿ ಅವಿರೋಧ ಆಯ್ಕೆ
ಆಗುಂಬೆ ಹೋಬಳಿಯಿಂದ ಚಿಪ್ಪಿನಕೊಡಿಗೆ ವೆಂಕಟೇಶ್, ಗುರು ಮೇಕೇರಿ, ವಿನಯ್ ಕಣಗಲು ಆಯ್ಕೆ ಆಗಿದ್ದಾರೆ. ಇಲ್ಲಿ ಸ್ಪರ್ಧೆ ಕಾಣಲಿಲ್ಲ. 21 ಸ್ಥಾನಕ್ಕೆ 54 ಮಂದಿ ಉಮೇದುವಾರಿಕೆ ಸಲ್ಲಿಸಿದ್ದರು. ಜ. 22 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು. ಆಗ ಕೆಲವರು ನಾಮಪತ್ರ ಹಿಂತೆಗೆದುಕೊಂಡಿದ್ದರು.
ಯಾವ ಹೋಬಳಿಗೆ ಎಷ್ಟು ನಿರ್ದೇಶಕ ಸ್ಥಾನ?
ಮಂಡಗದ್ದೆ ಹಾಗೂ ತೀರ್ಥಹಳ್ಳಿ ಟೌನ್ ಸೇರಿದ ಕಸಬಾ ಹೋಬಳಿಗೆ ತಲಾ 5 ಸ್ಥಾನಕ್ಕೆ ಆಯ್ಕೆಯಾಗಬೇಕಾಗಿದೆ. ಉಳಿದಂತೆ ಆಗುಂಬೆ, ಮುತ್ತೂರು, ಅಗ್ರಹಾರ ಹೋಬಳಿಗಳಿಗೆ ತಲಾ 3 ಸ್ಥಾನ. ಐದು ಹೋಬಳಿ ವ್ಯಾಪ್ತಿಗೆ ಎರಡು ಮಹಿಳಾ ಮೀಸಲು ಸ್ಥಾನದ ಚುನಾವಣೆ ನಡೆಯಬೇಕಿತ್ತು. ಆಗುಂಬೆ ಹೋಬಳಿ ಅವಿರೋಧ ಆಯ್ಕೆ ಆಗಿದೆ.
ಹಿರಿಯರು, ಕಿರಿಯರು, ಹಾಲಿ, ಮಾಜಿ ನಿರ್ದೇಶಕರ ಸ್ಪರ್ಧೆ
ಈಡಿಗ ಸಮುದಾಯದ ಚುನಾವಣೆಯಲ್ಲಿ ಹಿರಿಯರು, ಕಿರಿಯರು, ಕೆಲವು ಹಾಲಿ ನಿರ್ದೇಶಕರು, ಮಾಜಿ ನಿರ್ದೇಶಕರು, ರಾಜಕೀಯ ಪ್ರಮುಖರು, ಸಾಮಾಜಿಕ ಕ್ಷೇತ್ರದ ಪ್ರಮುಖರು ಸ್ಪರ್ಧೆ ಮಾಡಿದ್ದಾರೆ.
ಯಾರು ಯಾರು ಸ್ಪರ್ಧೆ ಮಾಡಿದ್ದಾರೆ…? ಮುಂದಿನ ಸುದ್ದಿಯಲ್ಲಿ ವೀಕ್ಷಿಸಿ…!