“ಮತ್ತೆ ಮತ್ತೆ” ಸಿನಿಮಾಕ್ಕೆ ಒಳ್ಳೆ ರೆಸ್ಪಾನ್ಸ್!
– ತೀರ್ಥಹಳ್ಳಿ ಸೇರಿ ಹಲವೆಡೆ ಯಶಸ್ವಿ ಪ್ರದರ್ಶನ
– ಕುಟುಂಬ ವೀಕ್ಷಿಸುವ ಹಾಸ್ಯಮಯ ಚಲನಚಿತ್ರ- ಅರುಣ್ ಹೊಸಕೊಪ್ಪ
– ಭರ್ಜರಿ ಬ್ಯಾನರ್, ಬಂಟಿಂಗ್ಸ್ ಹಾಕಿ ಸ್ವಾಗತಿಸಿದ ತೀರ್ಥಹಳ್ಳಿ ಜನ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಮತ್ತೆ ಮತ್ತೆ ಚಲನಚಿತ್ರ ಯಶಸ್ವಿ ಪ್ರದರ್ಶನ ನಡೆಯುತ್ತಿದೆ. ಹಾಸ್ಯ ಎಂದ ಮಾತ್ರಕ್ಕೆ ಇದರಲ್ಲಿ ಯಾವುದೇ ರೀತಿಯ ಡಬಲ್ ಮೀನಿಗ್ ಕಾಮಿಡಿ ಬಳಕೆಯಾಗಿಲ್ಲ. ಆದರೆ ಒಂದೊಳ್ಳೆ ಕಥೆ ತೆರೆ ಮೇಲೆ ಬಂದಿದೆ. ಸಿನಿಮಾಕ್ಕೆ ಯು/ಎ ಪ್ರಮಾಣಪತ್ರ ದೊರೆತಿದ್ದು ಕುಟುಂಬ ಸಮೇತರಾಗಿ ವೀಕ್ಷಿಸಬಹುದು ಎಂದು ನಿರ್ಮಾಪಕ ಅರುಣ್ ಹೊಸಕೊಪ್ಪ ತಿಳಿಸಿದ್ದಾರೆ. ತೀರ್ಥಹಳ್ಳಿ ಮೂಲದ ನೈರುತ್ಯ ಮೀಡಿಯಾ ಸಂಸ್ಥೆ ಈ ಸಿನಿಮಾ ನಿರ್ಮಿಸಿ, ಡಾ. ಅರುಣ್ ಹೊಸಕೊಪ್ಪ ಈ ಸಿನಿಮಾ ನಿರ್ದೇಶಕರಾಗಿದ್ದಾರೆ.
ತೀರ್ಥಹಳ್ಳಿ ಮಾರಿಕಾಂಬಾ ದೇವಸ್ಥಾನದ ಮುಂಭಾಗದಲ್ಲಿರುವ ಅನ್ನಪೂರ್ಣ ಗ್ರಾಂಡ್ ಹೋಟೆಲ್ ಮೇಲಿನ ಸಂಭಾಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಚಿತ್ರಮಂದಿರಗಳ ಸಮಸ್ಯೆಗಳು ಅತಿಯಾಗಿದ್ದು ಡಿಸ್ಟ್ರಿಬ್ಯೂಷನ್ಗೆ ತೊಂದರೆಯಾಗಿದೆ. ಹೊಸ ಕಲಾವಿದರನ್ನೇ ಬಳಕೆ ಮಾಡಿಕೊಂಡು ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಹಾಸ್ಯ ಪಾತ್ರಗಳಲ್ಲಿ ನಾಡಿನ ಅನೇಕ ಖ್ಯಾತ ಹಾಸ್ಯ ಚಲನಚಿತ್ರ ಕಲಾವಿದರು ಅಭಿನಯಿಸಿದ್ದಾರೆ. ಎಂದರು. ತೀರ್ಥಹಳ್ಳಿ ಜನರೇ ಚಿತ್ರತಂಡಕ್ಕೆ ಪ್ರೋತಾಹ ನೀಡಬೇಕು.
ʼಪದವಿ ಮುಗಿಸಿದ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮಾರುಕಟ್ಟೆಯ ಅನೇಕ ಸವಾಲುಗಳ ಮದ್ಯೆ ಜೀವನ ಕಟ್ಟಿಕೊಳ್ಳುವ ಹವಣಿಕೆ. ನ್ಯೂಸ್ ಚಾನೆಲ್ ತೆರೆಯುವ ಹಂಬಲದಿಂದ ಸಿನಿಮಾ ಮಾಡುವ ಮೂಲಕ ಹಣ ಸಂಪಾದಿಸುವ ಹೊಸ ಮಾರ್ಗವನ್ನು ಕಟ್ಟಿಕೊಳ್ಳುತ್ತಾರೆ. ಅನಂತರ ಸಿನಿಮಾ ನಿರ್ದೇಶಕರನ್ನು ಹುಡುಕುವ ಪ್ರಯತ್ನ ಹಾಸ್ಯವತ್ತಾಗಿ ಚಲನಚಿತ್ರದಲ್ಲಿ ದಾಖಲಿಸುತ್ತದೆ. ಚಲನಚಿತ್ರ ನಿರ್ಮಿಸುವ ಸವಾಲುಗಳನ್ನು ಇಲ್ಲಿ ಬಿಂಬಿಸಲಾಗಿದೆ.
ತಾಲ್ಲೂಕಿನ ಸಿನಿ ಪೋಷಕರು ಚಲನಚಿತ್ರ ತಂಡವನ್ನು ಬೆಂಬಲಿಸಬೇಕು. ಎಂದರು. ಬೆಂಗಳೂರು, ಬಟ್ಕಳ, ಮುರುಡೇಶ್ವರ ಸೇರಿದಂತೆ ಅನೇಕ ಕಡೆಗಳಲ್ಲಿ ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಬರುವ ಪಾತ್ರಗಳೇ ಹೀರೋ ಆಗಿದೆ. ಹಾಸ್ಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಡಿಂಗ್ರಿ ನಾಗರಾಜ್, ಉಮೇಶ್ ಮುಂತಾದ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಿನಿಮಾದ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್, ಚಿತ್ರನಟ ನಾಗೇಂದ್ರ ಜೋಯ್ಸ್, ಪ್ರೇಮಚಂದ್ರ ಸೇರಿದಂತೆ ಚಿತ್ರ ತಂಡದ ಅನೇಕರು ಇದ್ದರು.
ನನ್ನ ಮೊದಲ ಸಿನಿಮಾ ಪಯಣ!
ನನ್ನ ಮೊದಲ ಸಿನಿಮಾದಲ್ಲಿ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಜನತೆ, ಸ್ನೇಹಿತರು ಸಿನಿಮಾವನ್ನು ನೋಡಿ ಗೆಲ್ಲಿಸಬೇಕು. ನನಗೆ ಹೊಸ ಖುಷಿ ಕೊಟ್ಟಿದೆ. ಮುಂದೆ ಮತ್ತಷ್ಟು ಕೆಲಸ ಮಾಡುತ್ತೇನೆ ಎಂದು ಸಿನಿಮಾದ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್ ಹೇಳಿದರು.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ
ಮತ್ತೆ ಮತ್ತೆ ಸಿನಿಮಾದ ನಿರ್ದೇಶಕರಾದ ಡಾ. ಅರುಣ್ ಹೊಸಕೊಪ್ಪ ಮಾತನಾಡಿ, ಸ್ಥಳೀಯ ಪ್ರತಿಭೆಗಳು, ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿದ್ದೇವೆ. ಸೀನಿಯರ್ ನಟ ನಟಿಯರು, ಕಲಾವಿದರ ಸೇವೆ ಅಪಾರ ಎಂದರು.
Trailer Link :
[embedyt] https://www.youtube.com/watch?v=RzZCC1dh0Sc%5B/embedyt%5D