ತೀರ್ಥಹಳ್ಳಿ ಬಳಿ ಭೀಕರ ಅಪಘಾತಕ್ಕೆ ಓರ್ವ ಬಲಿ!
– ಫಾರ್ಚುನರ್ ಕಾರು, ಬಸ್ ನಡುವೆ ಅಪಘಾತ
– ಕಾರು ಸಂಪೂರ್ಣ ಪುಡಿ ಪುಡಿ: ಬಸ್ಸು ಕೂಡ ಹಾನಿ
– ಬಳಗಟ್ಟೆ ಶಾಂತಪ್ಪ ಕುಟುಂಬ ಅಪಾಯದಿಂದ ಪಾರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪದ ತುಡುಕಿ ಬಳಿ ಫಾರ್ಚುನರ್ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಬಳಗಟ್ಟೆ ಪೂರ್ಣೇಶ್ ಎಂಬುವರು ಘಟನೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಇವರು ಮೂಲತಃ ಬಳಗಟ್ಟೆಯವರು. ತೀರ್ಥಹಳ್ಳಿ ಪ್ರಸಿದ್ಧ ಅಡುಗೆ ಕಾಂಟಾಕ್ಟರ್ ಬಳಗಟ್ಟೆ ಶಾಂತಪ್ಪ ಕುಟುಂಬದವರು ಶಿವಮೊಗ್ಗದಲ್ಲಿ ಕಾರಿನಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ಇನ್ನುಳಿದ ನಾಲ್ಕು ಮಂದಿ ತೀರ ಗಾಯಗೊಂಡು ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಾರ್ಚುನರ್ ಕಾರು, ಬಸ್ ನಡುವೆ ಅಪಘಾತ ಸಂಭವಿಸಿದ್ದು,ಕಾರು ಸಂಪೂರ್ಣ ಪುಡಿ ಪುಡಿಯಾಗಿದೆ. ಬಸ್ಸು ಕೂಡ ಸಂಪೂರ್ಣ ಪುಡಿಯಾಗಿದೆ.