ತಟ್ಟಾಪುರ ಶಿವಪ್ಪ ನಾಯಕ್ ವಿಧಿವಶ
– ತಟ್ಟಾಪುರದ ಸ್ವಗೃಹದಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ
– ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್, ಸುಧಾಕರ್ ಅವರಿಗೆ ಪಿತೃ ವಿಯೋಗ
NAMMUR EXPRESS NEWS
ತೀರ್ಥಹಳ್ಳಿ: ದೇವಂಗಿ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್ ಹಾಗೂ ಸುಧಾಕರ್( ಕುಪ್ಪಳಿ) ಅವರ ತಂದೆ ಶಿವಪ್ಪ ನಾಯಕ್(84) ಅವರು ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದು, ಅವರ ಮೃತದೇಹವನ್ನು ಸುಧಾಕರ್ ಅವರ ಮನೆಯಲ್ಲಿ ಇಡಲಾಗಿದೆ. ಮೃತರ ಆತ್ಮಕ್ಕೆ ಭಗವಂತ ಶಾಂತಿಯನ್ನು ನೀಡಲಿ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಸಂಜೆ 5 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಇವರು ಇಬ್ಬರು ಪುತ್ರರು, ಪುತ್ರಿ, ಅಳಿಯ, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.