ಜಾತ್ರೆಯ ರಂಗು: ಆಟ ನಲಿದಾಟ..!
– ಕಲರ್ ಫುಲ್ ಜೈಂಟ್ ವೀಲ್ ಆಟಗಳು
– ಆಟಕ್ಕೆ, ಮಕ್ಕಳ ಆಟಿಕೆಗಳಿಗೆ ಡಿಮ್ಯಾಂಡ್!
– ಜಾತ್ರೆಯಲ್ಲಿ ಗಮನ ಸೆಳೆದ ಮಕ್ಕಳ ಆಟಿಕೆಗಳು
NAMMUR EXPRESS NEWS
ತೀರ್ಥಹಳ್ಳಿ ಜಾತ್ರೆ ವಿಶೇಷ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಪ್ರತಿವರ್ಷದಂತೆ ಜೈಂಟ್ ವೀಲ್, ಕೊಲಂಬಸ್, ಮಕ್ಕಳ ಆಟಿಕೆಗಳು ಭಾರೀ ಗಮನ ಸೆಳೆಯುತ್ತಿವೆ. ಹೆಚ್ಚು ಜನ ಕುಟುಂಬ ಸಮೇತರಾಗಿ ಮಕ್ಕಳ ಜೊತೆ ಜೈಂಟ್ ವೀಲ್, ಕೊಲಂಬಸ್, ಬ್ರೇಕ್ ಡಾನ್ಸ್ ಇನ್ನೂ ಮುಂತಾದ ಆಟೋಟಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಆಟದ ಜೋನ್ ನ ಮುಂದೆ ದೊಡ್ಡ ಸಾಲೇ ಇದೆ. ಇನ್ನು ತೀರ್ಥಹಳ್ಳಿ ಪಟ್ಟಣದ ರಥ ಬೀದಿಯಲ್ಲಿ ಸಂಪೂರ್ಣ ಅಂಗಡಿ ಮುಗ್ಗಟ್ಟುಗಳು ತುಂಬಿಕೊಂಡಿದ್ದು ಈ ಬಾರಿ ಅತಿ ಹೆಚ್ಚು ಅಂಗಡಿಗಳು ಬಂದಿವೆ.
