ರಥೋತ್ಸವಕ್ಕೆ ಸಜ್ಜು: ರಥಕ್ಕೆ ಸಿಂಗಾರ!
– ದೇವಾಲಯಗಳಲ್ಲಿ ಧಾರ್ಮಿಕ ಪ್ರಕ್ರಿಯೆ: ಹಳ್ಳಿ ಹಳ್ಳಿಯಿಂದ ಭಕ್ತರ ಆಗಮನ
– ಮೊದಲ ದಿನವೇ 25 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ!
– 10 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನ!
NAMMUR EXPRESS NEWS
ತೀರ್ಥಹಳ್ಳಿ ಜಾತ್ರೆ ವಿಶೇಷ : ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನವೇ ಜನಸಾಗರ ತುಂಬಿತ್ತು. ಬೆಳಿಗ್ಗೆ ಪ್ರಾತಃ ಕಾಲದಲ್ಲಿ ತೀರ್ಥಸ್ನಾನದಿಂದ ಶುರುವಾದ ಧಾರ್ಮಿಕ ಕಾರ್ಯಕ್ರಮಕ್ಕೆ ರಾತ್ರಿಯವರೆಗೂ ಜನ ಆಗಮಿಸುತ್ತಿದ್ದಾರೆ. ಜಾತ್ರೆ ಬೀದಿಯ ತುಂಬ ಅಂಗಡಿ ಮುಗ್ಗಟ್ಟುಗಳನ್ನು ಹಾಕಲಾಗಿದ್ದು, ದಿನಬಳಕೆ ಮತ್ತು ಅಲಂಕಾರಿಕ ವಸ್ತುಗಳೇ ಬೀದಿಯುದ್ದಕ್ಕೂ ಕಾಣಸಿಗುತ್ತವೆ. ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಅಂಗಡಿ ಹಾಕಿದ್ದು ಇಲ್ಲಿಯ ವಿಶೇಷವಾಗಿದೆ. ಜಾತ್ರೆಯ ಮೊದಲ ದಿನವೇ ಇಷ್ಟು ಜನ ಸಾಗರ ಸೇರಿದ್ದು ಅನ್ನ ಸಂತರ್ಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಇನ್ನು ಜನವರಿ 12ರ ರಥೋತ್ಸವಕ್ಕೆ ರಥಗಳ ಸಿಂಗಾರ ಕೆಲಸ ಮುಗಿದಿದ್ದು ರಥ ಎಳೆಯಲು ಸಿದ್ಧತೆ ನಡೆದಿದೆ.
ದೇವಸ್ಥಾನಗಳಲ್ಲಿ ದೇವಸ್ಥಾನದ ಅಲಂಕಾರದ ಜೊತೆಗೆ ದೇವಸ್ಥಾನಗಳಲ್ಲಿ ಪೂಜೆಗಳು ನಡೆಯುತ್ತಿವೆ. ಇನ್ನು ಈ ಬಾರಿ ರಥೋತ್ಸವದಲ್ಲಿ ಸಾವಿರಾರು ಮಂದಿ ಭೇಟಿ ನೀಡಲಿದ್ದು ಮೊದಲ ದಿನವೇ ಸುಮಾರು 25,000 ಮಂದಿ ಭೇಟಿ ನೀಡಿದ್ದಾರೆ. ಇನ್ನು ಅನ್ನದಾನದಲ್ಲಿ ಸುಮಾರು 10,000ಕ್ಕೂ ಹೆಚ್ಚು ಮಂದಿ ಅನ್ನದಾನವನ್ನು ಸ್ವೀಕರಿಸಿದ್ದಾರೆ. ಒಟ್ಟಿನಲ್ಲಿ ಜಾತ್ರೆ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಮತ್ತಷ್ಟು ಮೆರುಗು ತರಲಿದೆ.

