ತುಂಗಾ ಗೆಳೆಯರ ಗುರುವಂದನಾ ಕಾರ್ಯಕ್ರಮ ಸೂಪರ್!
– ತೀರ್ಥಹಳ್ಳಿ ತುಂಗಾ ಕಾಲೇಜಿನ 1990-1994ರ ಬ್ಯಾಚಿನ ಸ್ನೇಹ ಸಮ್ಮಿಲನ
– ನೆಚ್ಚಿನ ಗುರುಗಳಿಗೆ ಗೌರವ, ಸಾಧಕ ವಿದ್ಯಾರ್ಥಿಗಳಿಗೂ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ 1990-1994ರ ಬ್ಯಾಚಿನಲ್ಲಿ ಓದಿ ರಾಜಧಾನಿ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಸರ್ಕಾರಿ ಸೇವೆ, ಉದ್ಯಮ, ಖಾಸಗಿ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾನ ಮನಸ್ಕರು ಸೇರಿ ಇತ್ತೀಚೆಗೆ ಮುಡುಬ ಸಮೀಪದ ಫಾರೆಸ್ಟ್ ಎಡ್ಜ್ ರೆಸಾರ್ಟಲ್ಲಿ ವಿಶೇಷ ಗುರು ವಂದನಾ ಕಾರ್ಯಕ್ರಮ ಆಯೋಜಿಸಿದ್ದು ಗಮನ ಸೆಳೆಯಿತು.
ಸ್ನೇಹಿತರು, ತಮ್ಮ ಹಿತೈಷಿಗಳು ಹಾಗೂ ತಮಗೆ ಕಲಿಸಿದ ಗುರುಗಳೊಂದಿಗೆ ಒಂದಷ್ಟು ಸಮಯ ಕಳೆದು ಪರಸ್ಪರ ಉಭಯ ಕುಶಲೋಪರಿ ಹಂಚಿಕೊಂಡರು.
ಚನ್ನಪಟ್ಟಣ ಡಿವೈಎಸ್ಪಿ ಗಿರೀಶ್, ಉದ್ಯಮಿ, ನೀಮಸ್ ಫಾರ್ಮ ಕಂಪನಿ ಎಂ. ಡಿ ಶ್ರೀಧರ ಶೆಟ್ಟಿ, ಮ್ಯಾಕ್ಸ್ ಟೆಕ್ ಲಾಜಿಸ್ಟಿಕ್ ಕಂಪನಿ ಎಂ. ಡಿ ದಿನೇಶ್ ಉಡುಪ, ಪ್ರಮುಖ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಬಯೋಕಾನ್ ಸಿ. ಎಫ್. ಓ ಮುಖೇಶ್ ಕಾಮತ್, ಕಾಫಿ ಡೇ ಪ್ರೆಸಿಡೆಂಟ್ ಸತ್ಯಾನಂದ, ಕೆಪಿಟಿಸಿಎಲ್ ಜಿ. ಎಂ ಪ್ರದೀಪ್ ಕೊಗ್ರೆ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಪರಸ್ಪರ ಪರಿಚಯ ಮಾಡಿಕೊಳ್ಳುವ ಮೂಲಕ ಪ್ರಾರಂಭವಾಯಿತು, ಪ್ರತಿಯೊಬ್ಬರು ತಮ್ಮನ್ನು ಪರಿಚಯ ಮಾಡಿಕೊಂಡು ತಾವು ತುಂಗಾ ಕಾಲೇಜು ಹೆಮ್ಮೆಯ ವಿದ್ಯಾರ್ಥಿ ಎಂದು ಹೇಳುವ ಮೂಲಕ ತಮ್ಮ ಕಾಲೇಜಿನ ದಿನಗಳನ್ನು ಮನದಲ್ಲಿ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಹೆದ್ದೂರು ನವೀನ್ ಸೇರಿದಂತೆ ಎಲ್ಲಾ ಸಾಧಕ, ಸೇವಕ ಹಳೆಯ ವಿದ್ಯಾರ್ಥಿಗಳನ್ನು ಗುರುಗಳ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ನಿವೃತ್ತ ಪ್ರಿನ್ಸಿಪಾಲರಾದ ನಾಯ್ಡು, ಡಾ. ಗಣಪತಿ, ಮಲ್ಲೇಶ್ ನಾಯಕ್, ರಾಜಶೇಖರ್, ಪ್ರೊಫೆಸರ್ ಡಿ ಎಸ್. ಸೋಮಶೇಖರ, ನಟರಾಜ್ ಅರಳಸುರಳಿ, ಗಣೇಶ್ ರಾವ್, ಈಶ್ವರಪ್ಪ ಹಾಜರಿದ್ದು ತಮ್ಮ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಲಘು ಸಂಗೀತ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಸುಮಾರು 100ಕ್ಕೂ ಹೆಚ್ಚು ಸ್ನೇಹಿತರು ಸೇರಿದ್ದರು.
