Categories
ತೀರ್ಥಹಳ್ಳಿ

ಉಗ್ರರ ಅಟ್ಯಾಕ್ ವಿರುದ್ಧ ಬಿ.ವೈ ರಾಘವೇಂದ್ರ ಕಿಡಿ

ಉಗ್ರರ ಅಟ್ಯಾಕ್ ವಿರುದ್ಧ ಬಿ.ವೈ ರಾಘವೇಂದ್ರ ಕಿಡಿ
– ಕಾಶ್ಮೀರದಲ್ಲಿ ಆದ ಘಟನೆಗೆ ದೇಶದೊಳಗಿನ ಬೆಂಬಲವೂ ಇದೆ
– ಸಿದ್ದರಾಮಯ್ಯ, ಸಂತೋಷ್ ಲಾಡ್ ಹೇಳಿಕೆ ಸರಿ ಅಲ್ಲ

NAMMUR EXPRESS NEWS
ತೀರ್ಥಹಳ್ಳಿ: ಕಾಶ್ಮೀರದಲ್ಲಿ ಉಗ್ರರ ಅಟ್ಯಾಕ್ ವಿರುದ್ಧ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕಿಡಿಕಾರಿದ್ದಾರೆ.
ಕಾಶ್ಮೀರದಲ್ಲಿ ಆದ ಘಟನೆಗೆ ದೇಶದೊಳಗಿನ ಬೆಂಬಲವೂ ಇದೆ. ಹಾಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಉಗ್ರರು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ರಾಘವೇಂದ್ರ ಹೇಳಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಜಮ್ಮುಕಾಶ್ಮೀರ ದಾಳಿ ಹಾಗೂ ಯುದ್ಧಗಳ ಬಗ್ಗೆ ನಡೆಯುತ್ತಿರುವ ಟೀಕೆಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,
ಕೇಂದ್ರ ಹಾಗೂ ರಾಷ್ಟ್ರಮಟ್ಟದ ರಾಜಕಾರಣಕ್ಕೆ ಹೋಗುವ ಆಸಕ್ತಿಯಿಂದ ಪ್ರಧಾನ ಮಂತ್ರಿಗಳ ವ್ಯಕ್ತಿತ್ವವನ್ನು ಟೀಕೆ ಮಾಡಿದರೆ ಮಾಧ್ಯಮಗಳ ಮೂಲಕ ವಿಜೃಂಭಿಸಬಹುದು ಎಂಬ ಅನಿಸಿಕೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರದ್ದಾಗಿದೆ. ಮುಖ್ಯಮಂತ್ರಿಗಳಷ್ಟೇ ಅಲ್ಲ ಮಂತ್ರಿಯಾಗಿರುವ ಸಂತೋಷ್ ಲಾಡ್ ಸಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಅವರು ಸ್ವತಃ ಜಮ್ಮುಕಾಶ್ಮೀರದಲ್ಲಿ ಪಹಲ್ಗಾಂವ್ ಗೆ ಹೋಗಿ ಬಂದವರು. ಅಲ್ಲಿನ ಪರಿಸ್ಥಿತಿ ವಾತಾವರಣವನ್ನು ಅರಿತ ವ್ಯಕ್ತಿ. ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಫಲತೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಪ್ರಚಾರಕ್ಕಾಗಿ ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಕಾಶ್ಮೀರದ ದಾಳಿಯಿಂದಾಗಿ ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿಯಾದ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಪಾಕಿಸ್ಥಾನದವರನ್ನು ಹೊರ ಹೋಗುವಂತೆ ಹಾಗೂ ಕೆಲವು ಆದೇಶಗಳನ್ನು ಹೊರಡಿಸಲಾಗಿದೆ. ಇಂತಹ ನೋವಿನ ಸಂಗತಿಯಲ್ಲೂ ಕಾಂಗ್ರೆಸ್ ಪಕ್ಷದ ನಾಯಕರಾದ ರಾಬರ್ಟ್ ವಾದ್ರಾವರು ಹಿಂದುತ್ವಕ್ಕೆ ಅತಿಯಾದ ಆದ್ಯತೆ ಕೊಟ್ಟ ಕಾರಣದಿಂದಾಗಿ ಮುಸ್ಲಿಂ ಭಾಂದವರಿಗೆ ನೋವಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಈ ಹೇಳಿಕೆ ಸರಿಯಲ್ಲ.
ಹಾಗೆಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಭದ್ರತಾ ಲೋಪದ ಬಗ್ಗೆ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಶಾಂತಿ ಮಾತುಕತೆಯ ಬಗ್ಗೆ ಕೇಳುವ ಯಾವುದೇ ನೈತಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್, ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷರಾದ ಕುಕ್ಕೆ ಪ್ರಶಾಂತ್, ತೀರ್ಥಹಳ್ಳಿ ಯುವ ಬಿಜೆಪಿ ಅಧ್ಯಕ್ಷ ಸಂತೋಷ್ ದೇವಾಡಿಗ, ಬಿಜೆಪಿ ಪ್ರಮುಖರಾದ ಸಂದೇಶ್ ಜವಳಿ, ಮಧುರಾಜ್ ಹೆಗ್ಡೆ, ಜೆಡಿಎಸ್ ಪ್ರಮುಖ ಕುಣಜೆ ಕಿರಣ್ ಪ್ರಭಾಕರ್ ಇತರರು ಇದ್ದ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.