Categories
ತೀರ್ಥಹಳ್ಳಿ

ಸಾಲ ಕೊಡಿಸಿದ ತಪ್ಪಿಗೆ ಹೋಟೆಲ್ ಮಾಲೀಕ ನೇಣಿಗೆ ಶರಣು!?

ಸಾಲ ಕೊಡಿಸಿದ ತಪ್ಪಿಗೆ ಹೋಟೆಲ್ ಮಾಲೀಕ ನೇಣಿಗೆ ಶರಣು!?
– ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯಲ್ಲಿ ಘಟನೆ
– ಭದ್ರಾವತಿ: ಟವಲ್ ಹಾಕಿ ಸಂಬಂಧಿ ಮಾಂಗಲ್ಯ ಕದ್ದವ ಅರೆಸ್ಟ್!

NAMMUR EXPRESS NEWS
ತೀರ್ಥಹಳ್ಳಿ: ಬೆಜ್ಜವಳ್ಳಿಯ ಅನ್ನಪೂರ್ಣ ಹೋಟೆಲ್ ಮಾಲೀಕ ಉಮೇಶ್ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸೋಮವಾರ ಮನೆಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಗ್ರಾಮದಲ್ಲಿ ನಡೆಯಿತು. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೌಮ್ಯ ಸ್ವಭಾವದ ವ್ಯಕ್ತಿ!: ಹೋಟೆಲ್ ಉದ್ಯಮಿ ಬೆಜ್ಜವಳ್ಳಿ ಅನ್ನಪೂರ್ಣೇಶ್ವರಿ ಹೋಟೆಲ್ ಮಾಲೀಕ ಉಮೇಶ್ ರೈತಾಪಿ ಕುಟುಂಬದ ಮೂಲ ಜೀವನ ಆಧಾರವಾಗಿದ್ದು, ಬೆಂಗಳೂರು ಸೇರಿ ಬದುಕು ಕಟ್ಟಿಕೊಂಡು ಸಂಸಾರ ಜೀವನ ಸಾಗಿಸಿ ಕೊಂಡಿದ್ದರು ಈಗ ಒಂದೆರಡು ದಶಕಗಳಿಂದ ಬೆಜ್ಜವಳ್ಳಿಯಲ್ಲಿ ವ್ಯವಹಾರವನ್ನು ಗಂಡ ಹೆಂಡತಿ ಜೊತೆಯಾಗಿ ನಡೆಸಿ ಕೊಂಡು ಬಂದಿದ್ದರು.

ಟವಲ್ ಹಾಕಿ ಸಂಬಂಧಿ ಮಾಂಗಲ್ಯ ಕದ್ದವ ಅರೆಸ್ಟ್!

ಭದ್ರಾವತಿ: ಮಹಿಳೆಯೋರ್ವಳ ಕುತ್ತಿಗೆಗೆ ಟವಲ್ ಸುತ್ತಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣವನ್ನ ಭದ್ರಾವತಿ ನ್ಯೂಟೌನ್ ಪೊಲೀಸರು ಬೇಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಭದ್ರಾವತಿ ಟೌನ್ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಸಂಬಂಧಿ ನಾಗರಾಜ ಎಂಬಾತನು ಬಂದಿದ್ದು, ಆತನು ತನ್ನ ಹತ್ತಿರ ಇದ್ದ ಟವಲ್ ಅನ್ನು ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬೀಗಿದು ಆಕೆಯ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ಮಹಿಳೆಯು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ನಡೆದು 24 ಗಂಟೆಯಲ್ಲೇ ಪ್ರಕರಣವನ್ನ ಪೊಲೀಸರು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಂಡ್ಯ ಜಿಲ್ಲೆಯ ನಾಗರಾಜ ಕೆ ಎನ್, (32) ಬಂಧಿಸಲಾಗಿದೆ. ಅಂದಾಜು ಮೌಲ್ಯ 4,50,000/- ರೂಗಳ 88 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ಘನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.