Categories
ತೀರ್ಥಹಳ್ಳಿ

ಈಡಿಗರ ಸಂಘದ ಬಿರುಸಿನ ಮತದಾನ!

ಈಡಿಗರ ಸಂಘದ ಬಿರುಸಿನ ಮತದಾನ!
– ಮುಗಿದ ಮತದಾನ: ಫಲಿತಾಂಶಕ್ಕೆ ಕ್ಷಣಗಣನೆ
– 18 ಮಂದಿ ಆಯ್ಕೆಗೆ ನಡೆದಿದ್ದ ಮತದಾನ
– ಯಾವ ಹೋಬಳಿ ಎಷ್ಟು ಮತದಾನ ಆಗಿದೆ?

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಈಡಿಗ ಸಂಘದ ಮತದಾನ ಮುಗಿದಿದ್ದು ಫಲಿತಾಂಶ ಘೋಷಣೆ ಸಂಜೆ ವೇಳೆಗೆ ಆಗಲಿದೆ. ತೀರ್ಥಹಳ್ಳಿ ಈಡಿಗರ ಸಮುದಾಯ ಭವನದಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದಿದ್ದು, ತಾಲೂಕಿನ ಮೂಲೆ ಮೂಲೆಯಿಂದ ಈಡಿಗ ಸಮುದಾಯದ ಸದಸ್ಯರು ಆಗಮಿಸಿ ಮತದಾನ ಮಾಡಿದರು. ಈಡಿಗ ಸಮುದಾಯದ ಗಣ್ಯರು, ಪ್ರಮುಖರು ಮತದಾನ ಮಾಡಿದರು. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯದ 21 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು.

ಈ ಪೈಕಿ ಆಗುಂಬೆ ಹೋಬಳಿಯಲ್ಲಿ ಮೂವರು ಅವಿರೋಧ ಆಯ್ಕೆ ನಡೆದ ಕಾರಣ ಅಲ್ಲಿ ಮತದಾನ ಇಲ್ಲ. 5 ಹೋಬಳಿಯಿಂದ 38 ಮಂದಿ ಕಣದಲ್ಲಿದ್ದು ಆಗುಂಬೆ, ಮುತ್ತೂರು, ಅಗ್ರಹಾರ, ಕಸಬಾ ಮಂಡಗದ್ದೆ ಹೋಬಳಿಯಿಂದ ಸುಮಾರು 38 ಮಂದಿ ಸ್ಪರ್ಧೆ ಮಾಡಿದ್ದರು. 2 ಮಹಿಳಾ ಸ್ಥಾನಕ್ಕೆ 5 ಜನ ಸ್ಪರ್ಧೆ ಮಾಡಿದ್ದರು. ವಿಧಾನ ಸಭಾ ಚುನಾವಣೆ ಮಾದರಿಯಲ್ಲಿ ಚುನಾವಣೆ ನಡೆದಿದ್ದು ಅಚ್ಚರಿ ಮೂಡಿಸಿತು. ಎಲ್ಲಾ ಹೋಬಳಿ ಫಲಿತಾಂಶ ಪ್ರಕಟ ಸಂಜೆ 6:30ರವೇಳೆಗೆ ಆಗಲಿದೆ.

ಯಾವ ಹೋಬಳಿಯಲ್ಲಿ ಎಷ್ಟು ಮತದಾನ

ಮುತ್ತೂರು 152-141

ಅಗ್ರಹಾರ -322- 278

ಮಂಡಗದ್ದೆ 835- 708

ಕಸಬಾ – 364-320

ಮಹಿಳಾ ಮತ – 1392

ಅಗ್ರಹಾರ ಮತ್ತು ಮುತ್ತೂರು ಹೋಬಳಿ -368

ಕಸಬಾ 364-288

ಆಗುಂಬೆ-109-38

ಮಂಡಗದ್ದೆ 835-698

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.