Categories
ತೀರ್ಥಹಳ್ಳಿ

ರಾತ್ರಿ ಇದ್ದ ಹರಕೆಯ ಕುರಿ ಬೆಳಗ್ಗೆ ಮಂಗಮಾಯ!

ರಾತ್ರಿ ಇದ್ದ ಹರಕೆಯ ಕುರಿ ಬೆಳಗ್ಗೆ ಮಂಗಮಾಯ!
– ರಾತ್ರೋ ರಾತ್ರಿ ಕುರಿ ಕದ್ದು ಪರಾರಿಯಾದ ಕಳ್ಳರು!
– ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 5 ಕುರಿ ಕಳವು

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಕುಚ್ಚಲು ಎಂಬ ಗ್ರಾಮದಲ್ಲೊಂದು ವಿಚಿತ್ರ ಘಟನೆ ನಡೆದಿದೆ ದೇವರ ಹರಕೆ ನಿಮಿತ್ತ ತಂದಿದ್ದ ಕುರಿಗಳು ಕಳ್ಳತನವಾಗಿ ರಾತ್ರೋ ರಾತ್ರಿ ಕುರಿ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಘಟನೆ ಇದೀಗ ಮಲೆನಾಡು ಭಾಗದಲ್ಲಿ ಆತಂಕಕ್ಕೆ ಕಾರಣ ವಾಗಿದೆ.
ತೀರ್ಥಹಳ್ಳಿ ತಾಲೂಕು ಕುಚಲು ಗ್ರಾಮದಲ್ಲಿ ಬುಧವಾರ ಹರಕೆಯ ಸಲುವಾಗಿ ದೇವರಿಗಾಗಿ ಐದು ಕುರಿಗಳನ್ನು ತಂದಿದ್ದು, ಮರು ದಿನ ಹರಕೆಗೆ ಕುರಿ ಕಡಿಯಲು ಕೊಟ್ಟಿಗೆಗೆ ಹೋಗಿದ್ದ ವೇಳೆ ಕಳವು ಆಗಿದ್ದು ಗೊತ್ತಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಏನಿದು ಘಟನೆ?

ತೀರ್ಥಹಳ್ಳಿ ತಾಲೂಕಿನ ಮಾಳೂರು ಸಮೀಪದ ಕುಚ್ಚಲು ಎಂಬ ಗ್ರಾಮದಲ್ಲಿ ಭೂತರಾಯ ಉರಿಚೌಡಿ ಎಂಬ ಗ್ರಾಮ ದೇವತೆಗಳಿಗಾಗಿ ಹರಕೆ ಸಲ್ಲಿಸುವ ಸಲುವಾಗಿ ಐದು ಕುರಿಗಳನ್ನುತಂದಿದ್ದರು. ರಾತ್ರಿ ಇದ್ದ ಕುರಿ ಬೆಳಗ್ಗೆ ಮಾಯವಾಗಿತ್ತು
ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 5 ಕುರಿ ಕಳ್ಳತನವಾಗಿದ್ದು,
ದೇವರ ಹರಕೆ ಸಲ್ಲಿಸಲು ಬೆಳಗ್ಗೆ ಎದ್ದು ನೋಡಿದಾಗ ಕಾಣೆಯಾಗಿದ್ದು, ಗ್ರಾಮಸ್ಥರಿಗೆ ಶಾಕ್ ಆಗಿದೆ.
ನಸುಕಿನ ಜಾವ 3ಘಂಟೆ ಸುಮಾರಿಗೆ ಕುರಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದ್ದು, ಹರಕೆ ತೀರಿಸಲು ಕುರಿಗಳಿಲ್ಲದೆ ಗ್ರಾಮಸ್ಥರು ದಿಗ್ಬ್ರಮೆಗೊಂಡಿದ್ದಾರೆ. ಇದೀಗ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡಗದ್ದೆ, ಮಾಳೂರು, ಮಹಿಷಿ ಸುತ್ತಮುತ್ತ ದಿನೇ ದಿನೇ ಮನೆ, ಗೋವುಗಳ ಕಳವು ಹೆಚ್ಚಾಗಿದೆ. ಪೊಲೀಸ್ ಇಲಾಖೆ ಗಮನವಹಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.