Categories
ಉಡುಪಿ

ಪಿಯು ಪರೀಕ್ಷೆಯಲ್ಲಿ ಮಿಂಚಿದ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು!

ಪಿಯು ಪರೀಕ್ಷೆಯಲ್ಲಿ ಮಿಂಚಿದ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು!

– ಆರ್ಚನಾ ಎಸ್ ಶೆಟ್ಟಿ ರಾಜ್ಯಕ್ಕೆ 6ನೇ ರ‍್ಯಾಂಕ್‌
– ದ್ರಶಿತಾ ಎ.ಹೆಚ್ ರಾಜ್ಯಕ್ಕೆ 9ನೇ ರ‍್ಯಾಂಕ್‌

NAMMUR EXPRESS NEWS
ಉಡುಪಿ: ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರ್ಚನಾ ಎಸ್ ಶೆಟ್ಟಿ ಅವರು ದ್ವಿತಿಯ ಪಿಯು ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 594 ಅಂಕಗೊಳೊಂದಿಗೆ ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಅರ್ಚನಾ ಉಡುಪಿ ಮಣಿಪುರದ ಸುನಿಲ್ ಶೆಟ್ಟಿ ಮತ್ತು ರೇವತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾರೆ.
ಹಾಗೂ ದ್ರಶಿತಾ ಎ.ಹೆಚ್. ಅವರು 600ಕ್ಕೆ 591 ಅಂಕಗೊಳೊಂದಿಗೆ ರಾಜ್ಯಕ್ಕೆ 9ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಇವರು ಉಡುಪಿ ಉದ್ಯಾವರದ ಹರಿಶ್ಚಂದ್ರ ಪುತ್ರನ್ ಮತ್ತು ಗೀತ ಹೆಚ್ ಪುತ್ರನ್ ದಂಪತಿಗಳ ಪುತ್ರಿಯಾಗಿದ್ದಾರೆ.
ಜೊತೆಗೆ ಪ್ರತಿಥಿ 588/600 ಅಂಕ, ಏಂಜಲ್ ಗ್ರೇಸ್ 586/600, ಆಕಾಶ್ ಗೌಡಸ್ 577/600, ಐಶ್ವರ್ಯ ಆರ್ 576/600, ಎಸ್. ಕೆ ಮೋಕ್ಷಿತ್ ಶ್ರೇಷ್ಠಿ 573/600, ಪ್ರಜ್ವಲ್ ಕೆ. ಕೆ 572/600, ರಾಘವೇಂದ್ರ ಮೇಕ 565/600, ಸಿಂಚನ 562/600, ರಕ್ಷತ್ 562/600, ಯಶಸ್ ದೇವಾಡಿಗ 561/600, ಲಿಷಾ ಸಾಲಿಯಾನ್ 559/600, ಖುಷಿ ಸಿ ಪೂಜಾರಿ 544/600 ಅಂಕ ಪಡೆದು ಮಿಂಚಿದ್ದಾರೆ.
ಇವರಿಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.