ಎ.ಪಿ ರಾಮಪ್ಪ ಅವರ ಕುರಿತು ನುಡಿ ನಮನ ಕಾರ್ಯಕ್ರಮ ಯಶಸ್ವಿ
– ಎ. ಪಿ. ರಾಮಪ್ಪನವರು ಬಿಟ್ಟುಹೋದ ಮೌಲ್ಯಗಳಿಂದು ನಮ್ಮೊಂದಿಗೆ ಇದೆ : ಆರಗ ಜ್ಞಾನೇಂದ್ರ
– ಮುಂದಿನ ಪೀಳಿಗೆಗೆ ಶಾಶ್ವತವಾಗಿರಬೇಕು ನೆನಪಿನ ಪುಸ್ತಕ ಬರಲ್ಲಿ ಎಂದು ಎಲ್ಲರ ಆಶಯ
NAMMUR EXPRESS NEWS
ತೀರ್ಥಹಳ್ಳಿ: ಇಂದು ಸಿದ್ದಾಂತಗಳು ಕೇವಲ ಭಾಷೆಗಳಾಗಿದ್ದು, ಬದುಕಿಗೆ ಅಳವಡಿಸಿಕೊಳ್ಳದವರು ಹಲವರಿದ್ದಾರೆ. ಸಮಾಜವಾದಿ ಶಾಂತವೇರಿ ಗೋಪಾಲಗೌಡ ಅವರ ಸಿದ್ಧಾಂತಕ್ಕೆ ಶಕ್ತಿ ನೀಡಿದ ಈ ಮಣ್ಣಿನ ಹಲವು ಸಮಾಜವಾದಿಗಳ ನೆನಪುಗಳನ್ನು ನಾವು ಮರೆಯಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಬಂಟರ ಭವನದಲ್ಲಿ ಸಮಾನ ಮನಸ್ಕರ ಸಂಘಟನೆಯ ವತಿಯಿಂದ ಇತ್ತೀಚಿಗೆ ನಿಧನರಾದ ಹಿರಿಯ ಸಮಾಜವಾದಿ ನೇತಾರ, ನಿವೃತ್ತಿ ಶಿಕ್ಷಕ ಎ.ಪಿ ರಾಮಪ್ಪ ಅವರ ಕುರಿತು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಸ್ತು ಆಲೋಚನಾ ರೀತಿಯೊಂದಿಗೆ ಎ.ಪಿ ರಾಮಪ್ಪನವರು ಬಿಟ್ಟು ಹೋದ ಮೌಲ್ಯಗಳು ನಮ್ಮೊಂದಿಗಿದೆ, ಮುಂದಿನ ದಿನಗಳಲ್ಲಿ ಇವರ ಬದುಕು, ವೃತ್ತಿ, ನಿಷ್ಠೆ, ಹೋರಾಟ ಜೀವನ ಮುಂದಿನ ಪೀಳಿಗೆಗೆ ಶಾಶ್ವತವಾಗಿರಬೇಕು ಎಂದಾದರೆ ಅದಕ್ಕೆ ಅಕ್ಷರ ರೂಪ ನೀಡಿ ನೆನಪಿನ ಪುಸ್ತಕ ಬರುವಂತಾಗಲಿ ಎಂದರು.
ರಾಮಪ್ಪನವರು ಶಿಕ್ಷಕರಾಗಿ ತಮ್ಮ ಅನಂತರ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನ ತೊಡಗಿಸಿಕೊಂಡು ಹೇಗೆ ಮಾದರಿ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂಬುವುದನ್ನು ಸಹಕಾರಿ ದುರೀಣ ನಾಗರಾಜ್ ಶೆಟ್ಟಿ, ಪ್ರಗತಿಪರ ಕೃಷಿಕ ಕಡಿದಾಳ್ ದಯಾನಂದ, ರೈತ ಮುಖಂಡರ ಕಂಬಳಿಗೆರೆ ರಾಜೇಂದ್ರ, ರಂಗ ಕರ್ಮಿ ಸಂದೇಶ ಜವಳಿ ಬರಹಗಾರ ನೆಂಪೆ ದೇವರಾಜ್ ಚಿಂತಕ ಶಿವಾನಂದ ಕರ್ಕಿ, ಪತ್ರಕರ್ತ ಎಂ ಕೆ ರಾಘವೇಂದ್ರ, ಕಸಬಾ ಅಧ್ಯಕ್ಷ ಟಿ.ಕೆ ರಮೇಶ್ ಶೆಟ್ಟಿ, ಶಿರುಪತಿ ಮಂಜುನಾಥ ಸ್ಮರಿಸಿದರು.
ಎ ಪಿ ಆರ್ ಕೌಟುಂಬಿಕವಾಗಿಯೂ ಹೇಗೆ ಆದರ್ಶ ವ್ಯಕ್ತಿಯಾಗಿದ್ದರು ಎಂಬುವುದು ಅವರ ಪುತ್ರ ಆರ್ ಮದನ್, ಮಗಳು ಮಮತಾ ಸಾಯಿನಾಥ್ ಹಾಗೂ ಸಮೀಪ ಬಂಧು ನಿತಿನ್ ಹೆಗ್ಡೆ ಕಟ್ಟಿಕೊಟ್ಟರು. ಪತ್ರಕರ್ತ ರಾಮಚಂದ್ರ ಕೊಪ್ಪಲು ಕಾರ್ಯಕ್ರಮ ನಿರೂಪಿಸಿದರು.
