ಗೃಹಲಕ್ಷ್ಮಿಹಣ ತೆಗೆಯಲು ಹೋಗಿ ನಾಪತ್ತೆಯಾಗಿದ್ದ ಮಹಿಳೆ ಹೊಸಂಗಡಿಯಲ್ಲಿ ಪತ್ತೆ
– ತನ್ನ ಅಕ್ಕನ ಮನೆಯಲ್ಲಿರುವ ಮಾಹಿತಿ
– ನಮ್ಮೂರ್ ಎಕ್ಸ್ಪ್ರೆಸ್ ಸುದ್ದಿಗೆ ಕುಟುಂಬದವರ ಧನ್ಯವಾದ
NAMMUR EXPRESS NEWS
ತೀರ್ಥಹಳ್ಳಿ: ಗೃಹಲಕ್ಷ್ಮಿ ಹಣ ತೆಗೆಯಲು ಹೋಗುತ್ತೇನೆ ಎಂದು ಮನೆಯಿಂದ ಹೋದ ಮಹಿಳೆ ನಾಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿ ನಡೆದಿದ್ದು, ಇದೀಗ ಮಹಿಳೆ ಹೊಸಂಗಡಿಯಲ್ಲಿ ರಾತ್ರಿ 9.30ಕ್ಕೆ ಪತ್ತೆಯಾಗಿದ್ದಾರೆ. ರಂಜದಕಟ್ಟೆಯ ಮುಳುಬಾಗಿಲು ಗ್ರಾಮದ ಪಾರ್ವತಿ (60) ಎಂಬವರು ಹೊಸಂಗಡಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿರುವ ಮಾಹಿತಿ ಲಭ್ಯವಾಗಿದೆ. ಮಾನಸಿಕ ಅಸ್ವಸ್ಥ ಮಹಿಳೆ ಆಗಿದ್ದರಿಂದ ಅವರು ಹೇಗೆ ಹೊಸಂಗಡಿಗೆ ಹೋದರು ಎಂದು ವಿಷಯ ತಿಳಿದು ಬಂದಿಲ್ಲ. ನಮ್ಮೂರ ಎಕ್ಸ್ಪ್ರೆಸ್ ಕಚೇರಿಗೆ ಮಹಿಳೆಯ ಕುಟುಂಬಸ್ಥರು ಬಂದು ವಿಷಯ ತಿಳಿಸಿ ಬಳಿಕ ಧನ್ಯವಾದ ತಿಳಿಸಿದರು.