Categories
ತೀರ್ಥಹಳ್ಳಿ

300 ಬೀದಿ ನಾಯಿ ಟಾರ್ಗೆಟ್..!

300 ಬೀದಿ ನಾಯಿ ಟಾರ್ಗೆಟ್..!
– ತೀರ್ಥಹಳ್ಳಿಯಲ್ಲಿ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ
– ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗೀತಾ ರಮೇಶ್ ಜವಾಬ್ದಾರಿ ಕೆಲಸ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ರಾಜ್ಯದಲ್ಲೇ ಮಾದರಿ ಕೆಲಸವೊಂದಕ್ಕೆ ಕೈ ಹಾಕಿದೆ. ಶನಿವಾರ ಮೊದಲ ಹಂತದಲ್ಲಿ 50 ನಾಯಿಗಳನ್ನು ಚಿಕಿತ್ಸೆ ಮಾಡಿಸಲಾಗಿದೆ. ಅಲ್ಲದೆ ಅವುಗಳನ್ನು ಪೋಷಣೆ ಮಾಡಲಾಗುತ್ತದೆ. ತೀರ್ಥಹಳ್ಳಿಯಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ಹಾಗೂ ಪಶು ಇಲಾಖೆ ವತಿಯಿಂದ ಪಟ್ಟಣದಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ನೀಡಲಾಯಿತು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿ, ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸಾ ಕಾರ್ಯಕ್ರಮಕ್ಕೆ ಇಂದಿನಿಂದ ನಾವು ಚಾಲನೆ ಕೊಡುತ್ತಿದ್ದೇವೆ. ಸಾರ್ವಜನಿಕರು ಕೂಡ ನಮಗೆ ಸಹಕಾರ ನೀಡಬೇಕು. ನಮಗೆ 300 ನಾಯಿಗಳಿಗೆ ರೇಬಿಸ್ ಚಿಕಿತ್ಸೆ ನೀಡಲು ಅವಕಾಶವಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಪಶು ವೈದ್ಯ ಡಾ.ಬಸವೇಶ್ವರ ಹೂಗಾರ್, ಮಾತನಾಡಿ ನಾವು ಎಲ್ಲೇ ಹೋದರು ನಮ್ಮ ಇಲಾಖೆಗೆ ಸಂಬಂಧಪಟ್ಟಂತಹ ಪ್ರಥಮ ಪ್ರಶ್ನೆ ಬರುವುದು ಬೀದಿ ನಾಯಿಗಳನ್ನು ಹೇಗೆ ಕಂಟ್ರೋಲ್ ಮಾಡುತ್ತೀರಿ ಎಂದು. ಇಂದು ನಮ್ಮ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಒಳ್ಳೆಯ ಕೆಲಸವನ್ನು ಮಾಡಿದೆ. ನಾವು ಆದಷ್ಟು ನಾಯಿಗಳನ್ನು ಬೀದಿ ಮೇಲೆ ಬಿಡದೆ ಇರುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ನಾವು ಎಲ್ಲಾ ನಾಯಿಗಳಿಗೂ ರೇಬಿಸ್ ಲಸಿಕೆಯನ್ನು ಹಾಕಿಸಿದರೆ ನಾಯಿಗಳ ರೋಗ ನಿಯಂತ್ರಣ ಕೂಡ ಸಾಧ್ಯ. ಆ ನಿಟ್ಟಿನಲ್ಲಿ ಇಂದು ಮಾದರಿ ಕೆಲಸವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವುದ್ದಕ್ಕೆ ನಮ್ಮ ಇಲಾಖೆ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಸೊಪ್ಪುಗುಡ್ಡೆ ರಾಘವೇಂದ್ರ ಅವರು ಮಾತನಾಡಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಕಾರ್ಯಕ್ರಮದ ಅಂಗವಾಗಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರ ಮತ್ತೆ ಬೀದಿ ನಾಯಿ ಸಂತಾನ ನಿರ್ಮೂಲನೆ ಯೋಜನೆ ಕಾರ್ಯಾಚರಣೆಗೆ ತರಬೇಕು. ಬೀದಿ ನಾಯಿಗಳ ಬಗ್ಗೆ ಸರ್ಕಾರ ವಿಶೇಷ ಯೋಜನೆಯನ್ನು ತೆಗೆದುಕೊಳ್ಳಬೇಕು ಎಂದರು. ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಮುಖ್ಯಾಧಿಕಾರಿ ಕುರಿಯಾಕೋಸ್, ಸೊಪ್ಪುಗುಡ್ಡೆ ರಾಘವೇಂದ್ರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ದತ್ತಣ್ಣ, ಅಸಿಸ್ಟೆಂಟ್ ಡೈರೆಕ್ಟರ್ ನಾಗರಾಜ್, ಡಾ. ಬಸವೇಶ್ವರ್, ಡಾ. ಮುರಳೀದರ್ ಹಾಗೂ ಡಾ. ಯುವರಾಜ್ ಸೇರಿದಂತೆ ಪಶು ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತ್ ಸದಸ್ಯರು, ಸೇರಿದಂತೆ ಹಲವರು ಉಪಸ್ಥಿತರಿದ್ದರು. ತೀರ್ಥಹಳ್ಳಿ ಪಟ್ಟಣದಲ್ಲಿರುವ ಎಲ್ಲಾ ಬೀದಿ ನಾಯಿಗಳಿಗೂ ಸಂತಾನ ಹರಣ ಚಿಕಿತ್ಸೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.