Categories
ತೀರ್ಥಹಳ್ಳಿ

ಭಾರೀ ಮಳೆಗೆ ಬೆಚ್ಚಿ ಬಿದ್ದ ತೀರ್ಥಹಳ್ಳಿ!

ಟಾಪ್ 5 ನ್ಯೂಸ್ ತೀರ್ಥಹಳ್ಳಿ

ಭಾರೀ ಮಳೆಗೆ ಬೆಚ್ಚಿ ಬಿದ್ದ ತೀರ್ಥಹಳ್ಳಿ!
– ದಿನವಿಡೀ ಸುರಿದ ಮಳೆ: ಗಣೇಶೋತ್ಸವಕ್ಕೆ ಅಡ್ಡಿ

– ಕಾಡಿಗೆ ನುಗ್ಗಿದ ಕಾರು!: ತೀರ್ಥಹಳ್ಳಿ ಮಾಸ್ತಿಕಟ್ಟೆ ರಸ್ತೆ ಅವ್ಯವಸ್ಥೆ!
– ಕಾಂಗ್ರೆಸ್ ಯುವ ಮುಖಂಡ ಶ್ರೇಯಸ್ ಅಪಘಾತ: ಸಚಿವ ಮಧು ಸಾಂತ್ವನ
– ತೀರ್ಥಹಳ್ಳಿ ಸೀಬಿನಕೆರೆ ಶಾಲೆಯಲ್ಲಿ ಕೃಷ್ಣ ವೇಷ ಸಂಭ್ರಮ!
– ಮಳೆ ಕಾರಣ ಛತ್ರಕೇರಿ ಗಣೇಶ ಕಾರ್ಯಕ್ರಮ ಜಾಗ ಬದಲಾವಣೆ

NAMMUR EXPRESS NEWS
ತೀರ್ಥಹಳ್ಳಿ: ಭಾರೀ ಮಳೆಗೆ ಬೆಚ್ಚಿ ಬಿದ್ದ ತೀರ್ಥಹಳ್ಳಿ!. ದಿನವಿಡೀ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಮಳೆ ಕಾರಣ ಗಣೇಶೋತ್ಸವಕ್ಕೆ ಅಡ್ಡಿಯಾಗಿದೆ.
ಅಡಿಕೆ ಬೆಳೆದ ರೈತರಿಗೆ ಕೊಳೆ ರೋಗದ ಆತಂಕ ಹೆಚ್ಚಾಗಿದೆ. ಈಗಾಗಲೇ 3 ಸುತ್ತು ಔಷಧಿ ಹೊಡೆಯಲಾಗಿದೆ. ಆದರೂ ಕೊಳೆ ರೋಗ ನಿಂತಿಲ್ಲ. ಈಗ ಮತ್ತೆ ಕಳೆದ 4-5 ದಿನದಿಂದ ಮಳೆ ಹೆಚ್ಚಾಗಿದ್ದು ತೋಟಗಳಲ್ಲಿ ಅಡಿಕೆ ಉದುರುವ ಸಾಧ್ಯತೆ ಇದೆ.

ಕಾಡಿಗೆ ನುಗ್ಗಿದ ಕಾರು!: ತೀರ್ಥಹಳ್ಳಿ ಮಾಸ್ತಿಕಟ್ಟೆ ರಸ್ತೆ ಅವ್ಯವಸ್ಥೆ!

ತೀರ್ಥಹಳ್ಳಿಯಿಂದ ಕೈಮರ ಮಾರ್ಗ ಕುಂದಾಪುರ ರಾಜ್ಯ ಹೆದ್ದಾರಿಯ ಶಂಕರ ಮನೆ ಬಳಿ ರಸ್ತೆಯಲ್ಲಿ ಆಗಿರುವ ಗುಂಡಿ ತಪ್ಪಿಸಲು ಹೋಗಿ ಕಾರೊಂದು ಕಾಡಿಗೆ ನುಗ್ಗಿದ ಘಟನೆ ನಡೆದಿದೆ. ಕಳೆದೊಂದು ವಾರದಿಂದ ಈ ಭಾಗದಲ್ಲಿ 2-3 ಅಪಘಾತಗಳು ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗದೇ ಸಣ್ಣ ಪುಟ್ಟ ಗಾಯ ಗಳಿಂದ ಪಾರಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬೈಕ್ ಸವಾರರಿಬ್ಬರು ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ಕೂಡ e ವರೆಗೂ ಇಲ್ಲಿನ ಸ್ಥಳೀಯ ಆಡಳಿತ ಆಗಲಿ ಅಥವಾ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಆಗಲಿ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಆಗಿದೆ.

ಕಾಂಗ್ರೆಸ್ ಯುವ ಮುಖಂಡ ಶ್ರೇಯಸ್ ಅಪಘಾತ: ಸಚಿವ ಮಧು ಸಾಂತ್ವನ

ಇತ್ತೀಚಿಗೆ ಸಿಗಂದೂರು ಬಳಿ ಅಪಘಾತದಲ್ಲಿ ಗಂಭೀರ ಗಾಯಗೊಂಡ ತೀರ್ಥಹಳ್ಳಿ ಯುವ ಕಾಂಗ್ರೆಸ್ ಮುಖಂಡ ಶ್ರೇಯಸ್ ಆರೋಗ್ಯವನ್ನು ಸಚಿವ ಮಧು ಬಂಗಾರಪ್ಪ ವಿಚಾರಿಸಿ ಸಾಂತ್ವನ ಹೇಳಿದರು.
3 ದಿನಗಳ ಹಿಂದೆ ಸಿಗಂದೂರು ನೂತನ ಸೇತುವೆ ಮೇಲೆ ಘಟಿಸಿದ್ದ ಟಿ.ಟಿ ಅಪಘಾತದಲ್ಲಿ ಶ್ರೇಯಸ್ ಗಾಯಗೊಂಡು ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಅವರ ಸ್ನೇಹಿತರು ಹಾರೈಸಿದ್ದಾರೆ.

ತೀರ್ಥಹಳ್ಳಿ ಸೀಬಿನಕೆರೆ ಶಾಲೆಯಲ್ಲಿ ಕೃಷ್ಣ ವೇಷ ಸಂಭ್ರಮ!

ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಸೀಬಿನಕೆರೆ. ತೀರ್ಥಹಳ್ಳಿ ಪಟ್ಟಣದಲ್ಲಿ ದಿನಾಂಕ:-03.09.2025 ರ ಬುಧವಾರ ಬೆಳಿಗ್ಗೆ 10.30ಕ್ಕೆ ಶಾಲೆಯಲ್ಲಿ “ಕೃಷ್ಣವೇಷ ಮತ್ತು ಛದ್ಮವೇಷ ಸ್ಪರ್ಧೆ” ಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ 3 ವಿಭಾಗಗಳಿದ್ದು, (ಎಲ್.ಕೆ.ಜಿ, ಯು.ಕೆ.ಜಿ, ಹಾಗೂ 1ರಿಂದ 3ನೇ ತರಗತಿ ಮತ್ತು 4 ರಿಂದ 7ನೇ ತರಗತಿ) ಪ್ರತಿ ವಿಭಾಗಕ್ಕೆ ಬಹುಮಾನ ಇರಲಿದೆ. ಪೋಷಕರು ಭಾಗವಹಿಸಲು ಕೋರಲಾಗಿದೆ.

ಮಳೆ ಕಾರಣ ಛತ್ರಕೇರಿ ಗಣೇಶ ಕಾರ್ಯಕ್ರಮ ಜಾಗ ಬದಲಾವಣೆ

ಮಳೆ ಕಾರಣದಿಂದ ಶ್ರೀ ಸಿದ್ದಿವಿನಾಯಕ ಯುವಕ ಸಂಘ ಛತ್ರಕೇರಿ ಪೆಂಡಾಲ್ ನಲ್ಲಿ ನಡೆಯಬೇಕಿದ್ದ ಇನ್ಸ್ಟ್ರುಮೆಂಟಲ್ ಇವೆಂಟ್ ಕಾರ್ಯಕ್ರಮ ಹಾಗೂ ನಾಳೆ ನಡೆಯುವ ಪ್ರಸಿದ್ಧ ಕಲಾವಿದರಿಂದ ಒಳಗೊಂಡ ಕಣ್ಣ ಮುಚ್ಚಾಲೆ ನಾಟಕ ಶ್ರೀ ವಿದ್ಯಾಧಿರಾಜ ಸಬಾಭವನಕ್ಕೆ ರಥಬೀದಿ ಗೆ ವರ್ಗಾಯಿಸಲಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.