Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಬಿ. ವೈ ವಿಜಯೇಂದ್ರ: ಗಣೇಶ ದರ್ಶನ!

ತೀರ್ಥಹಳ್ಳಿಗೆ ಬಿ. ವೈ ವಿಜಯೇಂದ್ರ: ಗಣೇಶ ದರ್ಶನ!
– ಧರ್ಮಸ್ಥಳ ಪ್ರವಾಸ ಮುಗಿಸಿ ಮೇಲಿನ ಕುರುವಳ್ಳಿ ಗಣೇಶನ ದರ್ಶನ
– ಧರ್ಮಸ್ಥಳ ವಿರುದ್ಧ ಅಪಪ್ರಚಾರ ವಿರುದ್ಧ ಹೋರಾಟ ಎಂದ ನಾಯಕ
– ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಜನಗಲ್ ರಾಮಚಂದ್ರ ಬಿಜೆಪಿ ಸೇರ್ಪಡೆ

NAMMUR EXPRESS NEWS
ತೀರ್ಥಹಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ಧರ್ಮಸ್ಥಳ ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಧರ್ಮಸ್ಥಳದಿಂದ ಶಿಕಾರಿಪುರಕ್ಕೆ ತೆರಳುವಾಗ ಮಾರ್ಗ ಮಧ್ಯೆ ತೀರ್ಥಹಳ್ಳಿಗೆ ಆಗಮಿಸಿದ್ದು, ಬಿಜೆಪಿ ಕಾರ್ಯಕರ್ತರ ಜೊತೆ ಅವರನ್ನು ನಗರಕ್ಕೆ ಸ್ವಾಗತಿಸಲಾಯಿತು. ಆನಂತರ ಮೇಲಿನ ಕುರುವಳ್ಳಿಯ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಲಾಯಿತು. ಈ ವೇಳೆ ತೀರ್ಥಹಳ್ಳಿ ಪ್ರಮುಖ ಬಿಜೆಪಿ ನಾಯಕರು ಹಾಜರಿದ್ದರು.

ಧರ್ಮಸ್ಥಳ ವಿರುದ್ಧ ಅಪಪ್ರಚಾರ ವಿರುದ್ಧ ಹೋರಾಟ!

ರಾಜ್ಯದಲ್ಲಿ ಕಳೆದ ಎರಡುವರೆ ವರ್ಷಗಳಿಂದ ನಿರಂತರವಾಗಿ ನಮ್ಮ ಹಿಂದೂಗಳ ಆಚಾರ ವಿಚಾರಗಳಿಗೆ ಧಕ್ಕೆ ತರುವಂತ ಬೆಳವಣಿಗೆಗಳು ನಡೆಯುತ್ತಿವೆ. ಎಂದು ವಿಜಯೇಂದ್ರ ಅವರು ಆರೋಪಿಸಿದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಆಗುವುದನ್ನು ಒಂದು ರಾಷ್ಟ್ರೀಯ ಪಕ್ಷವಾಗಿ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು.
ಮಂಗಳವಾರ ಧರ್ಮಸ್ಥಳದಿಂದ ಶಿಕಾರಿಪುರ ಹೋಗುವಾಗ ತೀರ್ಥಹಳ್ಳಿಯ ಮೇಲಿನಕುರುವಳ್ಳಿ ವಿದ್ಯಾಗಣಪತಿಗೆ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜ್ಯ ಸರ್ಕಾರವನ್ನು ಎಚ್ಚೆತ್ತಿಸುವ ಕೆಲಸ ಮಾಡಿದ್ದೇವೆ. ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಆಡಳಿತ ಚುಕ್ಕಾಣಿ ಹಿಡಿದಿರುವವರಿಗೆ ಭಗವಂತ ಸದ್ಭುದ್ದಿ ಕೊಟ್ಟು ಹಿಂದೂಗಳನ್ನು ಕೆಣಕದೆ ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಕ್ರಮ ಕೈಗೊಳ್ಳಬೇಕು ಎಂದರು.
ಸೌಜನ್ಯ ಹತ್ಯೆ ಪ್ರಕರಣದಲ್ಲಿ ಘಟನೆ ನಡೆದು 12 ವರ್ಷಗಳು ಕಳೆದರೂ ಕೂಡ ನ್ಯಾಯ ಸಿಕ್ಕಿಲ್ಲ ಎಂಬ ನೋವು ಆ ಕುಟುಂಬದವರಿಗೂ ಇದೆ, ನಮ್ಮ ಕಾರ್ಯಕರ್ತರಿಗೂ ಇದೆ ಬೇರೆ ಎಲ್ಲಾ ಹಿರಿಯರಿಗೂ ಇದೆ. ನಿನ್ನೆ ನಾವು ಅವರ ಕುಟುಂಬ ಸದಸ್ಯರನ್ನು ತಾಯಿಯನ್ನು ಭೇಟಿ ಮಾಡಿದ್ದೇವೆ.

ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಜನಗಲ್ ರಾಮಚಂದ್ರ ಬಿಜೆಪಿ ಸೇರ್ಪಡೆ

ಕಾಂಗ್ರೆಸ್ ಒಬಿಸಿ ಮೋರ್ಚಾ ಅಧ್ಯಕ್ಷರಾಗಿದ್ದ, ಈ ಹಿಂದೆ ಬಿಜೆಪಿ ಮತ್ತು ಆರ್ ಎಸ್ ಎಸ್ ನಲ್ಲಿ ಸೈದ್ದಾoತಿಕವಾಗಿ ಬೆಳೆದಿದ್ದ ನಿಷ್ಠಾವಂತ ಕಾರ್ಯಕರ್ತ ಜನಗಲ್ ರಾಮಚಂದ್ರ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಸಂಘದ ವಿಭಾಗವಾದ ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ಇಡೀ ತಾಲೂಕನ್ನು ತನ್ನ ಬೈಕಿನಲ್ಲಿ ಚಕ್ಕೊಡಬೈಲ್ ಗಿರೀಶ್ ಜೊತೆ ತಿರುಗಾಟ ಮಾಡಿ ಸೇವಾ ಕಾರ್ಯ ಮಾಡುತ್ತಿದ್ದ ಪ್ರಾಮಾಣಿಕ ಕಾರ್ಯಕರ್ತ, ಈಡಿಗ ಸಮಾಜದಿಂದ ಬಂದು ಸಮಸ್ತ ಹಿಂದೂ ಸಮಾಜ ಕಟ್ಟುವ ಕೆಲಸವನ್ನು ಹತ್ತಾರು ವರ್ಷಗಳ ಕಾಲ ನಿರಂತರವಾಗಿ ಮಾಡಿದ್ದರು,
ಕಳೆದ ಪಂಚಾಂಯತ್ ಚುನಾವಣೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ನಡೆದ ಕೆಲ ಕಾರಣಗಳಿಂದ ಸ್ವಲ್ಪ ಬೇಸರಗೊಂಡು ಪಕ್ಷಾoತರ ಮಾಡಿದ್ದರು. ಇದೀಗ ಶಾಸಕರ ಮನೆಯಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಆಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.