Categories
ತೀರ್ಥಹಳ್ಳಿ

ಕ್ರಿಕೆಟ್ ಕ್ಷೇತ್ರದಲ್ಲಿ ತೀರ್ಥಹಳ್ಳಿ ಹುಡುಗ ನಿತಿನ್ ಮಿಂಚಿಂಗ್!

ಕ್ರಿಕೆಟ್ ಕ್ಷೇತ್ರದಲ್ಲಿ ತೀರ್ಥಹಳ್ಳಿ ಹುಡುಗ ನಿತಿನ್ ಮಿಂಚಿಂಗ್!
– ಕೆ. ಪಿ. ಎಲ್ ಅಲ್ಲಿ ಹುಬ್ಬಳ್ಳಿ ತಂಡಕ್ಕೆ 25 ಸಾವಿರಕ್ಕೆ ಬಿಡ್
– ಐಪಿಎಲ್, ಭಾರತ ತಂಡಕ್ಕೆ ಆಯ್ಕೆ ಆಗುವ ಸಾಧ್ಯತೆ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಪಂದ್ಯಕ್ಕೆ ಇದೀಗ ಮಲೆನಾಡ ಹುಡುಗ ತೀರ್ಥಹಳ್ಳಿ ಮೂಲದ ನಿತಿನ್ ಆಯ್ಕೆ ಆಗಿದ್ದು ಹುಬ್ಬಳ್ಳಿ ತಂಡಕ್ಕೆ ಆಡಲಿದ್ದಾರೆ.
ನಿತಿನ್ ಅವರು ಮೂಲತ ತೀರ್ಥಹಳ್ಳಿಯ ಶಾಂತವೇರಿಯವರು.
ತಂದೆ ನಾಗರಾಜ ಗೌಡ, ತಾಯಿ ಗಾಯತ್ರಿ, ಸಹೋದರಿ ನೇಹಾ.
ತೀರ್ಥಹಳ್ಳಿಯ ಅಬ್ದುಲ್ ಕಲಾಂ ಅವರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಶಾಂತವೇರಿ ಗ್ರಾಮದ ನಿತಿನ್ ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಆಯ್ಕೆ ಆಗಿರುವುದು ಇದೀಗ ತೀರ್ಥಹಳ್ಳಿಯ ಹಾಗೂ ಮಲೆನಾಡ ಜನರಿಗೆ ಹೆಮ್ಮೆಯ ವಿಷಯವಾಗಿದೆ.
ನಿತಿನ್ ಮೊದಲು ಕ್ರಿಕೆಟ್ ಆರಂಬಿಸಿದ್ದು ನ್ಯಾಷನಲ್ ಸಂಸ್ಥೆಯ ಅಬ್ದುಲ್ ಕಲಾಂ ಅವರ ತೀರ್ಥಹಳ್ಳಿಯ ಸಿಟಿ ಕ್ಲಬ್ ಅಲ್ಲಿ. ಇಲ್ಲಿ ಈತನಿಗೆ ಲೆದರ್ ಆಡುವ ಅವಕಾಶ ಕಲ್ಪಿಸಿತು, ನಂತರ ಬೆಂಗಳೂರಿನಲ್ಲಿ ಇವನ ಬೌಲಿಂಗ್‌ ಮಾಡೋ ರೀತಿ ನೋಡಿ ಅಭಿಮನ್ಯು ಮಿಥುನ್ ಅವರ ತಮ್ಮ ರನ್ ಅಪ್ ಅಕಾಡೆಮಿ ಯಲ್ಲಿ ಉಚಿತ ಕೋಚ್ ಜೀಮ್ ಬೇಕಾದ ಪ್ರೋಟಿನ್ ಗಳನ್ನು ಒದಗಿಸುವುದರ ಮೂಲಕ ಕೈ ಹಿಡಿಯುತ್ತಾರೆ. ಕಠಿಣ ತರಬೇತಿ ಬಳಿಕ ಈಗಾಗಲೇ 140 ಸ್ಪೀಡ್ ನಲ್ಲಿ ಬಾಲ್ ಎಸೆಯುವ ಸಾಮರ್ಥ್ಯ ಇರುವ ನಿತಿನ್ ಅವರನ್ನು ಹುಬ್ಬಳ್ಳಿ ಟೈಗರ್ಸ್ ಗುರುತಿಸಿ 25 ಸಾವಿರಕ್ಕೆ ಬಿಡ್ ಮಾಡಿದೆ.
6.3 ಎತ್ತರದ ನೀಳಕಾಯದ ಈ ಯುವಕನಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಎಲ್ಲಾ ಅರ್ಹತೆ ಇದೆ. ಇವನ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸೋಣ.
ನಿತಿನ್ ಅವರನ್ನು ಕಳೆದ ಬಾರಿಯ ಕೆಪಿಎಲ್ ವಿನ್ನಿಂಗ್ ತಂಡ ವಾದ ಹುಬ್ಬಳ್ಳಿ ಟೈಗರ್ಸ್ ಬಿಡ್ ಮಾಡಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಅತ್ಯುತ್ತಮ ಕ್ರಿಕೆಟ್ ಕ್ರೀಡಾ ಪಟುವಾಗಿರುವ ನಿತಿನ್ ಕೆಪಿಎಲ್ ನಲ್ಲಿ ಚೆನ್ನಾಗಿ ಆಟವಾಡಿದರೆ ಐಪಿಎಲ್ ಕದ ತಟ್ಟುವ ಸಾಧ್ಯತೆ ಕೂಡ ಹೆಚ್ಚಿದೆ. ಸ್ನೇಹಿತರು, ಅಭಿಮಾನಿಗಳು ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.