Categories
ತೀರ್ಥಹಳ್ಳಿ

ತೀರ್ಥಹಳ್ಳಿ: ದಿವಂಗತ ಪಟಮಕ್ಕಿ ರತ್ನಾಕರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದ ಗಣ್ಯರು..!

ತೀರ್ಥಹಳ್ಳಿ: ದಿವಂಗತ ಪಟಮಕ್ಕಿ ರತ್ನಾಕರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದ ಗಣ್ಯರು..!
– ಅನೇಕ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿ
– ಮಿಮಿಕ್ರಿ ಕಲಾವಿದ ಗೋಪಿಯವರಿಂದ ಸಮಾರಂಭದ ಉದ್ದಕ್ಕೂ ತಮ್ಮ ಹಾಸ್ಯದ ಹೊನಲು

NAMMUR EXPRESS NEWS
ತೀರ್ಥಹಳ್ಳಿಯ ಸಹ್ಯಾದ್ರಿವಾರ್ತೆ ವಾರಪತ್ರಿಕೆಯ ಸಂಪಾದಕ ಬಿ. ಗಣಪತಿಯವರ ಸಂಪಾದಕತ್ವದಲ್ಲಿ ಮೂಡಿ ಬಂದ ತೀರ್ಥಹಳ್ಳಿಯ ಮಾಜಿ ಶಾಸಕ, ಆಧ್ಯಾತ್ಮಿಕವಾಗಿ ಅಪಾರ ಆಳ ಅಧ್ಯಯನ ಮತ್ತು ಚಿಂತನೆ ಹೊಂದಿದ್ದ ಪ್ರಾಮಾಣಿಕ ರಾಜಕಾರಣಿ ದಿವಂಗತ ಪಟಮಕ್ಕಿ ರತ್ನಾಕರ್ ಕುರಿತಾದ ಪುಸ್ತಕ ಮೇ 18 ರಂದು ಸಂಜೆ 4 ಗಂಟೆಗೆ ಲೋಕಾರ್ಪಣೆಗೊಂಡಿದೆ. ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷರೂ, ಚಿಂತಕರೂ, ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ರಮೇಶ್ ಕುಮಾರ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರೂ, ಈ ಕಾರ್ಯಕ್ರಮವನ್ನು ಸ್ವಾಮಿ ಜತಕಾಮಾನಂದ, ರಾಮಕೃಷ್ಣ ಮಠ ಮಂಗಳೂರು ಇವರು ಉದ್ಘಾಟಿಸಿದರು ಪುಸ್ತಕ ಬಿಡುಗಡೆ ಎಸ್ ಮಧು ಬಂಗಾರಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ಇವರು ನಡೆಸಿಕೊಟ್ಟರು, ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ವಹಿಸಿದ್ದರು. ವಾಗ್ಮಿ, ಕೊಪ್ಪದ ಖ್ಯಾತ ವಕೀಲರೂ ಆದ ಸುಧೀರ್ ಕುಮಾರ್ ಮುರೊಳ್ಳಿ ಪಟಮಕ್ಕಿ ರತ್ನಾಕರ್ ರವರ ವ್ಯಕ್ತಿತ್ವ, ಪುಸ್ತಕದ ಕುರಿತು ಅವಲೋಕನ ಗೈಯದಿದ್ದಾರೆ.

ಪಟಮಕ್ಕಿ ಸೋಲಿಲ್ಲದ ಸರದಾರ: ಆರಗ

ಪಟಮಕ್ಕಿ ರತ್ನಾಕರ್ ಒಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿ ಡಿ.ಬಿ.ಚಂದ್ರಶೇಖರಗೌಡರಂತಹ ಪ್ರಭಾವಿ ರಾಜಕಾರಣಿಯನ್ನು ಸೋಲಿಸಿದರು. ಮತ್ತೆ ಎಂದೂ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ. ಅವರ ಪಕ್ಷ ಅವರಿಗೆ ಟಿಕೆಟ್ ಕೊಡಲಿಲ್ಲ. ರತ್ನಾಕರ್ ನನ್ನ ಬಾಲ್ಯದ ಸ್ನೇಹಿತ ಒಟ್ಟಿಗೇ ಒಂದೇ ತರಗತಿಯಲ್ಲಿ ಓದಿದವರು ನಾವು. ಅವನ ಜೊತೆ ಆತ್ಮೀಯತೆ, ಸಲುಗೆ ಇತ್ತು. ಹಾಗಾಗಿ ನಾನವನಿಗೆ ಚೂಡಾಯಿಸುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ನಾವೆಲ್ಲಾ ಅನೇಕ ಬಾರಿ ಸ್ಪರ್ಧಿಸಿ ಹಲವು ಸೋಲು ಕಂಡಿದ್ದೇವೆ. ನೀನು ಮಾತ್ರ ಸೋಲಿಲ್ಲದ ಸರದಾರ ಕಣೋ ಎನ್ನುತ್ತಿದ್ದೆವು ಎಂದು ಪಟಮಕ್ಕಿ ಒಡನಾಡಿಗಳೂ, ಶಾಸಕರೂ ಆದ ಆರಗ ನೆನಪನ್ನು ಮೆಲುಕು ಹಾಕಿದರು.

– ಅವನೇ ಕಷ್ಟದಲ್ಲಿದ್ದರೂ ನನಗೆ 15 ಲಕ್ಷ ಸಾಲ ಕೊಟ್ಟಿದ್ದ: ಕಿಮ್ಮನೆ

ಪಟಮಕ್ಕಿ ರತ್ನಾಕರ್ ಹಾಗೂ ನಾನು ಹೈಸ್ಕೂಲನ್ನು ಒಟ್ಟಿಗೇ ಓದಿದವರು. ಸ್ನೇಹಿತರು. ಮುಂದೆ ನಾನು ಜನತಾ ಪರಿವಾರದಲ್ಲಿ ಗುರುತಿಸಿಕೊಂಡೆ. ಅವರು ಕಾಂಗ್ರೆಸ್‌ನಿಂದ ಶಾಸಕರಾದರು. ಪಟಮಕ್ಕಿಯ ಮೊದಲ ಚುನಾವಣೆಯಲ್ಲಿ ಅವರ ವಿರುದ್ಧ ಸ್ಪರ್ಧಿಸಿದ್ದ ಡಿ.ಬಿ.ಚಂದ್ರೇಗೌಡರಿಗೆ ನಾನು ಚುನಾವಣಾ ಏಜೆಂಟ್ ಆಗಿದ್ದೆ. ಕೇವಲ 32 ಓಟುಗಳಲ್ಲಿ ಡಿಬಿಪಿ ಸೋತಾಗ ಮರು ಎಣಿಕೆಗೆ ನಾನೇ ಅರ್ಜಿ ಸಲ್ಲಿಸಿದ್ದೆ. ಮರು ಎಣಿಕೆ ನಡೆದಾಗ ರತ್ನಾಕರ್ ಗೆ 74 ಓಟು ಹೆಚ್ಚಿಗೆ ಬಂದಿತ್ತು. ರಾಜಕೀಯವಾಗಿ ನಾವು ಬೇರೆ ನಿಲುವು ಹೊಂದಿದ್ದರೂ ಸ್ನೇಹಕ್ಕೆ ಅದು ಅಡ್ಡಿಯಾಗಿರಲಿಲ್ಲ. ನಂತರದಲ್ಲಿ ರತ್ನಾಕರ್ ಓದು. ಅಧ್ಯಾತ್ಮ, ಸೇವೆಯತ್ತ ವಾಲಿದರು. ಹಣ-ಅಧಿಕಾರದ ವ್ಯಾಮೋಹ ಅಂಟಿಸಿಕೊಳ್ಳಲಿಲ್ಲ. ದೇವರು, ಪುನರ್ಜನ್ಮದ ಕುರಿತು ನನಗೂ ಅವರಿಗೂ ವಿಭಿನ್ನ ನಿಲುವುಗಳಿತ್ತು. ನಾನು ಒಮ್ಮೆ ತೀವ್ರ ಸಂಕಷ್ಟದಲ್ಲಿದ್ದಾಗ ನನಗೆ 15 ಲಕ್ಷ ರೂ. ಸಾಲ ಕೊಟ್ಟಿದ್ದರು. ಯಾವತ್ತೂ ಏನೇ ನೆರವು ಬೇಕಿದ್ದರೂ ಕೇಳು ಎನ್ನುವ ವಿಶಾಲ ಹೃದಯ ಅವರಿಗಿತ್ತು. ಅವರೇನು ಬಾರೀ ಶ್ರೀಮಂತರಾಗಿರಲಿಲ್ಲ. ಆದರೆ ಮಾನವೀಯತೆಯ ನೆಲಗಟ್ಟಿನಲ್ಲಿ ಅಪಾರ ಶ್ರೀಮಂತಿಕೆ ಇತ್ತು ಎಂಬುದಾಗಿ ಕಿಮ್ಮನೆ ರತ್ನಾಕರ್ ನುಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನೈಜಲಾ ಪಟಮಕ್ಕಿ ರತ್ನಾಕರ್, ಮಾಜಿ ಶಾಸಕರು ಹೊಸನಗರ ಕ್ಷೇತ್ರ ಬಿ ಸ್ವಾಮಿರಾವ್, ಕಲಗೋಡು ರತ್ನಾಕರ್, ವಾಗ್ಮಿ, ಸುಧೀರ್ ಕುಮಾರ್ ಮುರೋಳ್ಳಿ, ಖ್ಯಾತ ಚಲನಚಿತ್ರ ಸಾಹಿತಿ ಕವಿರಾಜ್, ಉಪನಿರ್ದೇಶಕರು ಇಸ್ರೋ, ಬೆಂಗಳೂರು ಶಿವಾನಿ ಕೋಣಂದೂರು, ಕುಮಾರಿ ದೀಕ್ಷಾ ಆರ್, ಮಂಜಣ್ಣ ನಾಯಕ್ ಮತ್ತು ಶಿವಕುಮಾರ್ ಕಾರಂತ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಈ ಪುಸ್ತಕ ಬರೆದು ಹಾಗೂ ಮುದ್ರಣ ಮಾಡಿದ ಸಹ್ಯಾದ್ರಿ ವಾರ್ತೆಯ ಮುಖ್ಯ ಸಂಪಾದಕರಾದ ಬಿ ಗಣಪತಿ, ಹಾಗೂ ಅವರ ಬಳಗದವರು ಮತ್ತು ಈ ಪುಸ್ತಕ ಬಿಡುಗಡೆ ಸಮಾರಂಭವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಖ್ಯಾತ ಮಿಮಿಕ್ರಿ ಕಲಾವಿದ ಗೋಪಿಯವರಿಂದ ಮಿಮಿಕ್ರಿ ಖ್ಯಾತ ಮಿಮಿಕ್ರಿ ಕಲಾವಿದ, ದೂರದರ್ಶನ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿ ವಿವಿಧ ರಾಜಕಾರಣಿಗಳ ಧ್ವನಿ ಅನುಕರಣೆ ಮಾಡಿ ನಾಡಿನಾದ್ಯಂತ ಹೆಸರು ಗಳಿಸಿರುವ ಮಿಮಿಕ್ರಿ ಗೋಪಿ ಅವರಿಂದ ಸಂಜೆ 5 ರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯವಲ್ಲದೇ ದೇಶ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಮಿಮಿಕ್ರಿ ಗೋಪಿ ಸಮಾರಂಭದ ಉದ್ದಕ್ಕೂ ತಮ್ಮ ಹಾಸ್ಯದ ಹೊನಲು ಹರಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.