ಕೊಪ್ಪ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ,ಶಾಸಕರೇ ಈ ಬಗ್ಗೆ ಗಮನ ಹರಿಸಿ
* ತಕ್ಷಣವೇ ಸಾರ್ವಜನಿಕರ ಸಭೆ ಕರೆಯಿರಿ,ರಾಜಕೀಯ ಬಿಡಿ
* ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ಆಕ್ಷೇಪ
NAMMMUR EXPRESS NEWS
ಕೊಪ್ಪ: ಪಟ್ಟಣದ ಹುಚ್ಚರಾಯನ ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿದ್ದು,ಇದೇ ನೀರನ್ನು ಪ್ರತಿ ದಿನ ಪಟ್ಟಣದ ನಿವಾಸಿಗಳಿಗೆ ಪೂರೈಸಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನೀರು ವಾಸನೆ ಕಸದಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿ ಪರೀಕ್ಷೆಗೆ ಒಳಪಡಿಸಿದ್ದು ಅಲ್ಲಿ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿತ್ತು.
ಈ ಕುರಿತು ಹುಚ್ಚರಾನ ಕೆರೆ ಬಳಿಯಿರುವ ಪಂಪ್ ಹೌಸ್ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಪ್ರಸ್ತುತ ಬೆಳವಣಿಗೆ ಕುರಿತಂತೆ ಶಾಸಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ನಿಜಕ್ಕೂ ಈ ನೀರು ಕುಡಿಯಲು ಮಾತ್ರವಲ್ಲ ಸ್ನಾನಕ್ಕೂ ಯೋಗ್ಯವಾಗಿಲ್ಲ ಇಂತಹ ನೀರನ್ನು ಜನರಿಗೆ ಪೂರೈಸಲಾಗುತ್ತಿದೆ,ಈ ಕುರಿತಂತೆ ನಾಗರೀಕ ವೇದಿಕೆಗೆ ನೀಯನ್ನು ತೋರಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಬಹುದು ಅಂತಹ ಪರಿಸ್ಥಿತಿ ಇದೆ, ಕೊಪ್ಪದ ಕುಡಿಯುವ ನೀರಿಗಾಗಿ ಇಷ್ಟು ದೊಡ್ಡ ಆಂದೋಲನ ನಡೆಯುತ್ತಿದೆ ಇಂತಹ ಸಝದರ್ಭದಲ್ಲಿ ಪಕ್ಷಾತೀತವಾಗಿ ನಾವೆಲ್ಲರೂ ನಾಗರೀಕರ ಜೊತೆ ನಿಲ್ಲಬೇಕಿದೆ,ಈ ಕೂಡಲೇ ಶಾಸಕರು ಹಾಗೂ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ಶಾಸಕರು ಸಾರ್ವಜನಿಕ ಸಭೆ ಕರೆಯಬೇಕು,ಈಗಾಗಲೇ ಕೊಪ್ಪ,ಶೃಂಗೇರಿ,ಎನ್.ಆರ್ ಪುರ ತಾಲೂಕುಗಳನ್ನು ತುಂಬಾ ದೂರವಿಟ್ಟಿದ್ದೀರಿ ಉಸ್ತುವಾರಿ ಸಚಿವರು ಈ ಬಗ್ಗೆ ಮಾತನಾಡಬೇಕಿದೆ.ರಾಜಕೀಯ ಮರೆತು ನಾಗರೀಕರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದರು.
ಶೃಂಗೇರಿ ಕ್ಷೇತ್ರಕ್ಕೆ ಈಗಾಗಲೇ ಯಾವುದೇ ಅಧಿಕಾರಗಳು ಬರೋದಿಲ್ಲ,ಡಿ ಸಿ,ಎಸ್ಪಿಯವರುಗಳು ಬಂದು ನೀರು ಕುಡಿಯೋದಿಲ್ಲ ಯಾರಿಗೂ ಇಲ್ಲಿನ ಜನರ ಸಮಸ್ಯೆಗಳು ಅರ್ಥವಾಗೋದಿಲ್ಲ,ಕ್ಷೇತ್ರದ ಶಾಸಕರಾದವರು ಇದಕ್ಕೆ ಸ್ಪಂದಿಸಿ ಜನರಿಗೆ ನ್ಯಾಯ ಒದಗಿಸಬೇಕಿದೆ ಎಂದು ಆಗ್ರಹಿಸಿದರು.
