ತೀರ್ಥಹಳ್ಳಿ: ಉಚಿತ ತರಕಾರಿ ಬೀಜ ವಿತರಣೆಯಲ್ಲಿ ತಾರತಮ್ಯ!?
– ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಂದ ಅಧಿಕಾರಿಗಳಿಗೆ ತರಾಟೆ
– ಪಹಣಿ ಇರುವ ಎಲ್ಲರಿಗೂ ವಿತರಣೆ ಮಾಡಲು ಪಟ್ಟು
NAMMUR EXPRESS NEWS
ತೀರ್ಥಹಳ್ಳಿ :ಕುಶಾವತಿ ತೋಟಗಾರಿಕೆ ಇಲಾಖೆಯಿಂದ ತಾಲೂಕಿನ ಪಹಣಿ ಹೊಂದಿರುವ ರೈತರಿಗೆ ಉಚಿತವಾಗಿ ತರಕಾರಿ ಬೀಜದ ಕಿಟ್ ಅನ್ನು ವಿತರಣೆ ಮಾಡುತ್ತಿದ್ದು,ಆದರೆ ಅಧಿಕಾರಿಗಳ ಸಂಪರ್ಕದಲ್ಲಿರುವ ಹಾಗೂ ತಮಗೆ ಬೇಕಾದವರಿಗೆ ಮಾತ್ರ ಅಧಿಕಾರಿಗಳು ನೀಡುತ್ತಿದ್ದಾರೆ ಎಂಬ ದೂರಿನನ್ವಯ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕುಶಾವತಿಯ ತೋಟಗಾರಿಕೆ ಇಲಾಖೆಗೆ ಮಂಗಳವಾರ ಭೇಟಿ ನೀಡಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ತರಾಟೆಗೈದ ಘಟನೆ ನಡೆದಿದೆ .
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಮಾತನಾಡಿ ಅಧಿಕಾರಿಗಳು ತಾಲೂಕಿನ ಎಲ್ಲಾ ರೈತರನ್ನು ಸಮಾನವಾಗಿ ನೋಡಬೇಕು. ಸರ್ಕಾರದಿಂದ ಉಚಿತವಾಗಿ ಬಂದ ತರಕಾರಿ ಬೀಜದ ಕಿಟ್ ಪ್ರತಿಯೊಬ್ಬ ಆರ್.ಟಿ.ಸಿ ಹೊಂದಿದ ಫಲಾನುಭವಿಗಳಿಗೆ ಇದರ ಉಪಯೋಗ ಆಗಬೇಕು. ಈ ವಿಚಾರವಾಗಿ ರೈತರಿಗೆ ಮಾಹಿತಿ ತಿಳಿಯಲು ಪತ್ರಿಕಾ ಪ್ರಕಟಣೆ ನೀಡಬೇಕು ಎಂದು ತಿಳಿಸಿದ್ದಾರಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಎಂದು ತಿಳಿಸಿದರು. ಪಟ್ಟಣ ಪಂಚಾಯತಿ ಸದಸ್ಯ ನವೀನ್ ಯತಿರಾಜ್, ಅಭಿ ಕೊಂಡ್ಲೂರು , ಪ್ರಶಾಂತ್ ಮೇಳಿಗೆ, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ವಿನುತ್, ರಾಘವೇಂದ್ರ, ಅಭಿಲಾಶ್ ಕೈಮರ, ಶ್ರೀಕಾಂತ್ ಅತ್ತಿಕೋಡಿಗೆ, ಚಂದ್ರ ಶೇಖರ್ ಹೆಗ್ಡೆ, ಪವನ್ ಗವಾಸ್ಕರ್ ಇತರರು ಇದ್ದರು.
