Categories
ತೀರ್ಥಹಳ್ಳಿ

ತೀರ್ಥಹಳ್ಳಿ ಈಡಿಗ ವಿದ್ಯಾರ್ಥಿ ನಿಲಯ ಉದ್ಘಾಟನೆ ಸಜ್ಜು!

ತೀರ್ಥಹಳ್ಳಿ ಈಡಿಗ ವಿದ್ಯಾರ್ಥಿ ನಿಲಯ ಉದ್ಘಾಟನೆ ಸಜ್ಜು!
– ಬಂಗಾರಪ್ಪ, ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ
– ಸೆ.17ರಂದು ಆರ್ಯ ಈಡಿಗರ ಸಭಾ ಭವನದಲ್ಲಿ ಕಾರ್ಯಕ್ರಮ: ಸರ್ವರನ್ನು ಸ್ವಾಗತಿಸಿದ ಸಂಘ

NAMMUR EXPRESS NEWS
ತೀರ್ಥಹಳ್ಳಿ: ಆರ್ಯ ಈಡಿಗರ ಸಂಘದ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಎಸ್ ಬಂಗಾರಪ್ಪ ಮತ್ತು ದಿ.ಡಾ.ಪುನೀತ್ ರಾಜ್ ಕುಮಾರ್ ಅವರ ಪುತ್ತಳಿ ಅನಾವರಣ ಕಾರ್ಯಕ್ರಮವು ಸೆ.19ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಈಡಿಗರ ಸಂಘದ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ ಸ್ವಾಗತಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಕೋಳಿಕಾಲು ಗುಡ್ಡದ ಸಂಘದ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2 ಕೋಟಿ ರೂ ಮೊತ್ತದ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬ್ರಹ್ಮಶ್ರೀ ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ವಹಿಸಲಿದ್ದಾರೆ. ನೂತನ ಕಟ್ಟಡದ ಉದ್ಘಾಟನೆಯನ್ನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮಾಡಲಿದ್ದು ಕಾರ್ಯಕ್ರಮ ಉದ್ಘಾಟನೆಯನ್ನು ಸಂಸದ ಬಿ. ವೈ ರಾಘವೇಂದ್ರ ಮಾಡಲಿದ್ದಾರೆ. ನೂತನ ಕಚೇರಿ ಉದ್ಘಾಟನೆಯನ್ನು ಶಾಸಕರಾದ ಆರಗ ಜ್ಞಾನೇಂದ್ರರವರು ಮಾಡಲಿದ್ದಾರೆ ಎಂದರು.

ಈಡಿಗ ಸಮುದಾಯದ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುತ್ತಳಿಯನ್ನು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಎಸ್ ರಾಮಪ್ಪನವರು ಹಾಗೂ ಮಾಜಿ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರು ಅನಾವರಣಗೊಳಿಸಲಿದ್ದಾರೆ. ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯಕ್, ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷರಾದ ಡಾ. ತಿಮ್ಮೇಗೌಡ ಹಾಗೂ ನಾರಾಯಣ ಸ್ವಾಮಿ ಗ್ರೂಪ್ ಚೇರ್ಮನ್ ಸುಧಾಕ‌ರ್ ಅವರನ್ನು ಸನ್ಮಾನಿಸಲಾಗುತ್ತದೆ ಹಾಗೂ ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ್ ಗೌಡ್ರು ಮತ್ತು ನಿವೃತ್ತ ಪೊಲೀಸ್ ಅಧಿಕ್ಷಕರಾದ ಎಂ.ಜಿ ಸುಬ್ರಮಣ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಘವೇಂದ್ರ ಮುಡುಬ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಚಿಪ್ಪಿನಕೊಡಿಗೆ, ನಿರ್ದೇಶಕರಾದ ಕವಿರಾಜ್, ಡಿ ಲಕ್ಷ್ಮಣ್ ಮುಂಡಿಗೆ ಮನೆ, ಎಂ ವಿ ಚಂದ್ರಶೇಖರ್ ಮರಹಳ್ಳಿ, ಶ್ರೀಧರಮೂರ್ತಿ, ಹೊದಲ ಶಿವು, ನಾಗರಾಜ್ ಕುರುವಳ್ಳಿ,ವಿನಂತಿ ಶಿವಾನಂದ ಕರ್ಕಿ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.