Categories
ತೀರ್ಥಹಳ್ಳಿ

ವಾಟಗಾರು ಬಾಲಕಿಯರ ತಂಡ ಕಬಡ್ಡಿ ಪ್ರಥಮ!

ವಾಟಗಾರು ಬಾಲಕಿಯರ ತಂಡ ಕಬಡ್ಡಿ ಪ್ರಥಮ!
– ಮೊರಾರ್ಜಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ
– ಮಕ್ಕಳ ಮೊಗದಲ್ಲಿ ಆಟದ ಹುಮ್ಮಸ್ಸು ಗೆಲುವಿನ ಕನಸು ಹೊತ್ತ ಮಕ್ಕಳ ಸಾಹಸ

NAMMUR EXPRESS NEWS
ತೀರ್ಥಹಳ್ಳಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾಟಗಾರು ಇವರ ಸಂಯುಕ್ತ ಆಶ್ರಯದಲ್ಲಿ ತೀರ್ಥಹಳ್ಳಿ ಮುತ್ತೂರು ಹೋಬಳಿ ಮಟ್ಟದ 14 ವರ್ಷದೊಳಗಿನ ಬಾಲಕಿಯರ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿದ್ದು, ಮೊರಾರ್ಜಿ ದೇಸಾಯಿ ವಾಟಗಾರು ಶಾಲೆಗೆ ಬಾಲಕಿಯರ ಕಬಡ್ಡಿ ಪ್ರಥಮ ಬಹುಮಾನ ಲಭಿಸಿದೆ. ಕಬಡ್ಡಿ ಕ್ರೀಡಾಪಟುಗಳಿಗೆ ಸುಹಾಸ್ ಹಿಲಿಕೆರೆ ತರಬೇತಿ ನೀಡಿದ್ದರು. ಎಲ್ಲಕ್ಕೂ ಮಿಗಿಲಾಗಿ ಜೊತೆ ಇದ್ದು ವಿದ್ಯಾರ್ಥಿಗಳಿಗೆ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬಿಸುತ್ತಾ ಗೆಲುವಿನತ್ತ ಕೊಂಡೊಯ್ದಿದ್ದಾರೆ. ತೀರ್ಥಹಳ್ಳಿ ತಾಲೂಕು ಮಟ್ಟದಲ್ಲಿಯೂ ಕೂಡ ಇದೇ ರೀತಿ ಯಶಸ್ಸು ನಿಮ್ಮದಾಗಲಿ ಎಂದು ಪೋಷಕರು, ಶಿಕ್ಷಕರು, ತರಬೇತಿ ನೀಡಿದ ಮಿತ್ರರು ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು.

ಕ್ರೀಡಾಕೂಟದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಪಿ,ಡಿ,ಒ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯಿತ್ ದೇವಂಗಿ ಎಸ್ ಡಿ ಎಂ ಸಿ,ಅಧ್ಯಕ್ಷರು, ಹಾಗೂ ಸದಸ್ಯರು,ಪ್ರಾಂಶುಪಾಲರು ಶಿಕ್ಷಕರು ವರ್ಗದವರು ಹಾಗೂ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.