ತೀರ್ಥಹಳ್ಳಿ ಪ್ರಮುಖ ಸುದ್ದಿಗಳು
ತೂದೂರು: ಕಟ್ಟೆ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶುರು
ಮೇಗರವಳ್ಳಿ: ಮನೆಯಲ್ಲಿ ಅಡಗಿದ್ದ ಬೃಹತ್ ಕಾಳಿಂಗ ಸರ್ಪ ಸೆರೆ!
ತೀರ್ಥಹಳ್ಳಿ: ಕನ್ನಡ ಭವನದಲ್ಲಿ ವೀಣಾ ಕಾರಂತ್ ರ ಕೃತಿ ಬಿಡುಗಡೆ
ತೀರ್ಥಹಳ್ಳಿ: ತೂದೂರು ಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭದ ಉದ್ಘಾಟನಾ ಸಮಾರಂಭವನ್ನು ಹಮ್ಭಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತೂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ದೇವರಾಜ್. ನಿಕಟಪೂರ್ವ ಅಧ್ಯಕ್ಷರಾದ ಮಧುರಾಜ್ ಹೆಗಡೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಶೇಖರ್. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಲಿಲ್. ಪ್ರೌಢಶಾಲಾ ಎಸ್.ಡಿ.ಎಂ.ಸಿ ನಿಕಟಪೂರ್ವಾಧ್ಯಕ್ಷರಾದ ಕವಿರಾಜ್. ಪ್ರೌಢಶಾಲಾ ಪ್ರಭಾರಿ ಮುಖ್ಯಶಿಕ್ಷಕ ರಾಘವೇಂದ್ರ. ಪ್ರಾಥಮಿಕ ವಿಭಾಗದ ಹಿರಿಯ ಶಿಕ್ಷಕರಾದ ಶೋಭಾ. ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು ಹಾಜರಿದ್ದರು.
ಮೇಗರವಳ್ಳಿ: ಮನೆಯಲ್ಲಿ ಅಡಗಿದ್ದ ಬೃಹತ್ ಕಾಳಿಂಗ ಸರ್ಪ ಸೆರೆ!
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪದ ಲಕ್ಕುಂದಾ ನಾಗೇಶ್ ಅವರ ಮನೆಯಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಮನೆಯವರು ತಕ್ಷಣ ಉರಗ ಪ್ರೇಮಿ ಚಂದ್ರು ಅವರಿಗೆ ವಿಷಯ ತಿಳಿಸಿದ್ದು,ತಕ್ಷಣ ಸ್ಪಂದಿಸಿದ ಚಂದ್ರು ಹಾಗೂ ಅವರ ತಂಡ ಕಾಳಿಂಗ ಸರ್ಪ ವನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.
ಬಾಳೇಬೈಲು ಕನ್ನಡ ಭವನದಲ್ಲಿ ವೀಣಾ ಕಾರಂತ್ ರ ಕೃತಿ ಬಿಡುಗಡೆ
ತೀರ್ಥಹಳ್ಳಿ: ಅನ್ನಪೂರ್ಣ ಪ್ರಕಾಶನ, ಸಿರಿಗೇರಿ , ಸಿರುಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ ಇವರ ಆಶ್ರಯದಲ್ಲಿ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಲೇಖಕಿ ಶ್ರೀಮತಿ ವೀಣಾ ಆರ್. ಕಾರಂತ್ ಅವರ ಕಥಾ ಸಂಕಲನ ಕೃತಿ ‘ ಕಪಟರು’ ಬಿಡುಗಡೆ ಸಮಾರಂಭ ಜುಲೈ 20 ರಂದು ಭಾನುವಾರ ಸಂಜೆ 5-30 ಗಂಟೆಗೆ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಜರಗಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡುವರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಪ್ರಜಾವಾಣಿ ಪತ್ರಿಕೆಯ ಚಂದ್ರಹಾಸ ಹಿರೇಮಳಲಿ, ಕೃತಿಯ ಲೇಖಕಿ ಶ್ರೀಮತಿ ವೀಣಾ ಆರ್. ಕಾರಂತ್ ಅವರು ಉಪಸ್ಥಿತರಿರುತ್ತಾರೆ. ಸಾಹಿತ್ಯಾಭಿಮಾನಿಗಳು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಲೇಖಕ- ಪ್ರಕಾಶಕ ಸಿರಿಗೇರಿ ಯರಿಸ್ವಾಮಿ ಹಾಗೂ ತಾಲೂಕು ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.
